ತನ್ನದೇ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಸಾಕ್ಷಿಯಾದ ರೋಗಿ; ಸರ್ಜರಿ ಕೂಲ್ ಆಗಿತ್ತೆಂದ ಯುವಕ

Published : Jun 26, 2024, 09:26 PM ISTUpdated : Jun 26, 2024, 09:30 PM IST
ತನ್ನದೇ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಸಾಕ್ಷಿಯಾದ ರೋಗಿ; ಸರ್ಜರಿ ಕೂಲ್ ಆಗಿತ್ತೆಂದ ಯುವಕ

ಸಾರಾಂಶ

ಜಾನ್ ನಿಕೋಲಸ್‌ ಸಹ ತುಂಬಾ ಧೈರ್ಯವಂತರಾಗಿದ್ದು, ಅವರಲ್ಲಿ ಯಾವುದೇ ಭಯ ಇರಲಿಲ್ಲ. ಯುವಕರಾಗಿದ್ದರಿಂದ ಅಪಾಯದ ಮಟ್ಟ ಸಹ ವಿರಳವಾಗಿತ್ತು ಎಂದು ಡಾ,ಗಾರ್ಸಿಯಾ ತೋಮನ್ ಹೇಳುತ್ತಾರೆ. 

ಚಿಕಾಗೋ: ರೋಗಿ ಸಂಪೂರ್ಣ ಎಚ್ಚರವಾಗಿರುವಂತೆ ನೋಡಿಕೊಂಡು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ರೋಗಿ ಜೊತೆ ಮಾತುಕತೆ ನಡೆಸುತ್ತಲೇ ವೈದ್ಯರ ತಂಡ ಎರಡು ಗಂಟೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. ನಾರ್ತ್‌ವೆಸ್ಟರ್ನ್ ಮೆಡಿಸಿನ್  ಆಸ್ಪತ್ರೆಯಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ಚಿಕಾಗೋ ನಿವಾಸಿ 28 ವರ್ಷದ ಜಾನ್ ನಿಕೋಲಸ್‌ಗೆ ಮೂತ್ರಪಿಂಡ ಕಸಿಗೊಳಗಾದ ರೋಗಿ. ಶಸ್ತ್ರಚಿಕಿತ್ಸೆ ನಡೆದ 24 ಗಂಟೆಯೊಳಗೆ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಸರ್ಜರಿಯ ಅನುಭವ ಕೂಲ್ ಆಗಿತ್ತು ಎಂದು  ಜಾನ್ ನಿಕೋಲಸ್‌ ಹೇಳಿಕೊಂಡಿದ್ದಾನೆ.

ವೈದ್ಯರ ತಂಡ ಸಾಮಾನ್ಯ ಅರವಳಿಕೆ ಬದಲಾಗಿ, ಬೆನ್ನುಮೂಳೆಗೆ ಮಾತ್ರ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಪಡುವ ದೇಹದ ಭಾಗದ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತದೆ. ಆದ್ರೆ ಈ ವಿಧಾನ ಅಪಾಯದ ಮಟ್ಟ ಹೆಚ್ಚಾಗಿರುತ್ತದೆ. ಈ ರೀತಿ ಶಸ್ತ್ರಚಿಕಿತ್ಸೆ ಮೊದಲನೇಯದ್ದು ಆಗಿದೆ. ಸರ್ಜರಿ ನಡೆದ ಮರುದಿನವೇ ರೋಗಿ ಮನೆಗೆ ಹಿಂದಿರುಗಿದ್ದಾರೆ ಏಂದು  ಕಸಿ ಶಸ್ತ್ರಚಿಕಿತ್ಸಕ,  ನಾರ್ತ್‌ವೆಸ್ಟರ್ನ್ ಮೆಡಿಸಿನ್  ಆಸ್ಪತ್ರೆಯ ನಿರ್ದೇಶಕ ಡಾ.ಸತೀಶ್ ನಾಡಿಗ್ ಹೇಳಿದ್ದಾರೆ. 

ಎರಡು ಗಂಟೆಯ ಶಸ್ತ್ರಚಿಕಿತ್ಸೆ

ರೋಗಿಗೆ ಕಸಿ ಮಾಡುವ ಮೊದಲು ಅಂದ್ರೆ ಶಸ್ತ್ರಚಿಕಿತ್ಸೆ ವೇಳೆ ಆತನಿಗೆ ಹೊಸ ಮೂತ್ರಪಿಂಡ ತೋರಿಸಲಾಗಿತ್ತು ಅಂದ್ರೆ ನೀವು ನಂಬಲೇಬೇಕು. ಮೇ 24 ರಂದು, ಡಾ. ಸತೀಶ್ ನಾಡಿಗ್, ಡಾ ವಿನಾಯಕ್ ರೋಹನ್ ಮತ್ತು ಡಾ ವಿಸೆಂಟೆ ಗಾರ್ಸಿಯಾ ತೋಮಸ್ ವೈದ್ಯರ ತಂಡ ಸಿಸೇರಿಯನ್ ಸಮಯದಲ್ಲಿ ಬಳಸುವ  ಅರಿವಳಿಕೆ ಬಳಸಿಕೊಂಡು ಎರಡು ಗಂಟೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ವರದಿಯಾಗಿದೆ.

33 ಕೋಟಿ ಗೆದ್ದವನಿಗೆ ಒಂದು ರೂ ಅನುಭವಿಸೋ ಯೋಗ ಇಲ್ಲ: ಲಾಟರಿ ಗೆಲ್ಲುತ್ತಿದ್ದಂತೆ ಎಳೆದೊಯ್ದ ಜವರಾಯ

ಈ ಅರವಳಿಕೆ ಸಿ ಸೆಕ್ಷನ್ ಸರ್ಜರಿಗಳಿಗಿಂತ ಸುಲಭವಾಗಿದೆ. ನಾವು ರೋಗಿಯ ಬೆನ್ನುಮೂಳೆಗೆ ಹಂತ ಹಂತವಾಗಿ ಅರವಳಿಕೆಯ ಶಾಟ್ ನೀಡಿದ್ದೇವೆ. ಇದರಿಂದ ರೋಗಿ  ಜಾನ್ ನಿಕೋಲಸ್‌ ಎಚ್ಚರವಾಗಿರಲು ಸಾಧ್ಯವಾಯ್ತು.  ಜಾನ್ ನಿಕೋಲಸ್‌ ಸಹ ತುಂಬಾ ಧೈರ್ಯವಂತರಾಗಿದ್ದು, ಅವರಲ್ಲಿ ಯಾವುದೇ ಭಯ ಇರಲಿಲ್ಲ. ಯುವಕರಾಗಿದ್ದರಿಂದ ಅಪಾಯದ ಮಟ್ಟ ಸಹ ವಿರಳವಾಗಿತ್ತು ಎಂದು ಡಾ,ಗಾರ್ಸಿಯಾ ತೋಮನ್ ಹೇಳುತ್ತಾರೆ. 

ಜಾನ್ ನಿಕೋಲಸ್ ಹೇಳಿಕೆ

ಶಸ್ತ್ರಚಿಕಿತ್ಸೆಗೆ ಒಳಗಾದ ಜಾನ್ ನಿಕೋಲಸ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಜರಿ ವೇಳೆ ವೈದ್ಯರು ಏನು ಮಾಡುತ್ತಾರೆ? ನನ್ನದೇ ಶಸ್ತ್ರಚಿಕಿತ್ಸೆ ನೋಡಿದ್ದೇನೆ. ಇದೊಂದು ಒಳ್ಳೆಯ ಅನುಭವವಾಗಿತ್ತು. ಒಂದು ರೀತಿ ಹೇಳಬೇಕೆಂದ್ರೆ ಕೂಲ್ ಆಗಿತ್ತು. ಶಸ್ತ್ರಚಿಕಿತ್ಸೆ ಸಮಯದಲ್ಲಿ ವೈದ್ಯರು ಮಾಡುತ್ತಿರೋದು ಎಲ್ಲವೂ ಕಾಣಿಸುತ್ತಿತ್ತು. ಆದ್ರೆ ನನಗೆ ಯಾವುದೇ ರೀತಿಯ ನೋವು ಆಗುತ್ತಿರುತ್ತಿತ್ತು. ನಾನು ಸರ್ಜರಿ ಆರಂಭಿಸೋದು ಯಾವಾಗ ಅಂತ ಕೇಳುವ ಸಮಯದಲ್ಲಿ ವೈದ್ಯರು ತಮ್ಮ ಅರ್ಧ ಕೆಲಸ ಮುಗಿಸಿದ್ದರು ಎಂದು ತಮ್ಮ ಅನುಭವವನ್ನು ಜಾನ್ ನಿಕೋಲಸ್ ಹಂಚಿಕೊಂಡಿದ್ದಾರೆ. 

ಕಂತೆ ಕಂತೆ ನೋಟು ಮೆಟ್ಟಿಲು ಬಳಸಿ ಹೆಲಿಕಾಪ್ಟರ್‌ನಿಂದ ಇಳಿದ ಗರ್ಲ್‌ಫ್ರೆಂಡ್, ಉದ್ಯಮಿ ಸ್ವಾಗತಕ್ಕೆ ದಂಗಾದ ಜನ!

ಸ್ನೇಹಿತನಿಂದ ಮೂತ್ರಪಿಂಡ ದಾನ

ಸಾಮಾನ್ಯವಾಗಿ ಮೂತ್ರಪಿಂಡ ಕಸಿಗೆ ಒಳಗಾದ ರೋಗಿಗಳು ಆಸ್ಪತ್ರೆಯಲ್ಲಿಯೇ ಎರಡ್ಮೂರು ದಿನ ವಿಶ್ರಾಂತಿ ಪಡೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಆದ್ರೆ ಜಾನ್ 24 ಗಂಟೆಯೊಳಗೆ ಡಿಸ್ಚಾರ್ಜ್ ಆಗಿದ್ದಾರೆ. ಜಾನ್ 16ನೇ ವಯಸ್ಸಿನಿಂದಲೇ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. 2022ರ ವೇಳೆ ಮೂತ್ರಪಿಂಡ ಕಸಿ ಮಾಡೋದು ಅನಿವಾರ್ಯವಾಗಿತ್ತು. ತಾಯಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರೋ ಕಾರಣ ಮೂತ್ರಪಿಂಡ ದಾನ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಜಾನ್ ಗೆಳಯ ಕಿಡ್ನಿ ದಾನ ಮಾಡಿದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು