
ಹೈದರಾಬಾದ್:ಮಾಸ್ಟರ್ ಕಿಶನ್ ನಿರ್ದೇಶನದ (Master Kishan Direction) ಕೇರ್ ಆಫ್ ಫುಟ್‌ಪಾತ್-2 ಸಿನಿಮಾದ (care of footpath 2) ನಾಯಕಿ ಅವಿಕಾ ಗೋರ್ (Actress Avika Gor) ಬಾಡಿಗಾರ್ಡ್‌ನಿಂದಲೇ ದೌರ್ಜನ್ಯಕ್ಕೊಳಗಾದ ಘಟನೆಯೊಂದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕೇರ್ ಆಫ್ ಫುಟ್‌ಪಾತ್-2 ಸಿನಿಮಾ ಬಳಿಕ ಅವಿಕಾ ಕನ್ನಡ ಚಿತ್ರಗಳಲ್ಲಿ ನಟಿಸಿಲ್ಲ. ಆದರೆ ತೆಲಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ ಎಕ್ಕಡಿಕಿ ಪೋತಾವು, ರಾಜು ಗಾರಿ ಗಾದಿ, ಪೋಟಾ ಮಾವಾ, ಚಿನ್ನವಾಡ ಚಿತ್ರಗಳಲ್ಲಿ ಆವಿಕಾ ನಟಿಸಿದ್ದರೂ ದೊಡ್ಡ ಯಶಸ್ಸು ಸಿಕ್ಕಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ಇಷ್ಟು ಮಾತ್ರವಲ್ಲದೇ ಅಭಿಮಾನಿಗಳ ಕಮೆಂಟ್‌ಗಳಿಗೂ ಅವಿಕಾ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬಾಡಿಗಾರ್ಡ್‌ಗಳಿಂದಲೇ ಆದ ಕೆಟ್ಟ ಅನುಭವಗಳ ಕುರಿತು ಅವಿಕಾ ಗೋರ್ ಮಾತನಾಡಿದ್ದಾರೆ. ಹೊರಗಡೆ ಹೋದಾಗ ನಮ್ಮ ರಕ್ಷಣೆಗಾಗಿ ಬಾಡಿಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದ್ರೆ ಕೆಲವೊಮ್ಮೆ ಅವರಿಂದಲೇ ನಮಗೆ ಕಿರುಕುಳ ಉಂಟಾಗಿರುತ್ತದೆ ಎಂದು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ವೀಕ್ಷಕರ ಜೊತೆ ಅವಿಕಾ ಹಂಚಿಕೊಂಡರು.
ಮದ್ದಾದ ಗಂಡುಮಗುವಿಗೆ ಜನ್ಮ ನೀಡಿದ ಹೆಬ್ಬುಲಿ ಬೆಡಗಿ, ಇಳಯ್ ಎಂದು ಹೆಸರಿಟ್ಟಿ ನಟಿ!
ಬಾಡಿಗಾರ್ಡ್‌ಗಳೇ ಹೀಗೆ ಮಾಡಿದ್ರೆ ಏನು ಮಾಡೋದು?
ವೇದಿಕೆ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಯಾರೋ ನನ್ನ ಹಿಂಬದಿಯನ್ನು ಟಚ್ ಮಾಡಿದಂತಾಯ್ತು. ಹಿಂದಿರುಗಿ ನೋಡಿದ್ರೆ ಬಾಡಿಗಾರ್ಡ್‌ಗಳನ್ನು ಹೊರತುಪಡಿಸಿ ಅಲ್ಲಿ ಯಾರೂ ಇರಲಿಲ್ಲ. ಎರಡನೇ ಬಾರಿ ಹಿಂಬದಿ ಸ್ಪರ್ಶಿಸಿದ ಕೈ ಹಿಡಿದು ನೋಡಿದರೆ ಆತ ನನ್ನ ಬಾಡಿಗಾರ್ಡ್ ಆಗಿದ್ದನು. ಕೂಡಲೇ ಆತ ಕೈಗಳನ್ನು ಕಿವಿಗೆ ಹಿಡಿದುಕೊಂಡು ಕ್ಷಮೆಯಾಚಿಸಿದನು. ಆಗ ನಾನು ಏನು ಮಾಡಬಹುದಿತ್ತು? ಕೊನೆಗೆ ಆತನನ್ನು ಸುಮ್ಮನೇ ಕಳುಹಿಸಿದೆ. ನಮ್ಮ ರಕ್ಷಣೆಗೆ ಇರೋ ಬಾಡಿಗಾರ್ಡ್‌ಗಳು ಹೀಗೆ ಮಾಡಿದರೆ ಏನು ಮಾಡೋದು? ನಿಜಕ್ಕೂ ಇದು ನಾಚಿಕೆಗೇಡಿನ ಕೆಲಸ ಎಂದು ಅವಿಕಾ ಗೋರ್ ಬೇಸರ ವ್ಯಕ್ತಪಡಿಸಿದರು.
ಕಿಸ್ಸಿಂಗ್ ಸೀನ್ ಬಗ್ಗೆ ಅವಿಕಾ ಮುಕ್ತ ಮಾತು
ಇದೇ ಸಂದರ್ಶನದಲ್ಲಿ ಕಿಸ್ಸಿಂಗ್ ಮತ್ತು ಇಂಟಿಮೇಟ್ ಸೀನ್ ಹಾಗೂ ಗೆಳೆಯ ಮಿಲಿಂದ್ ಚಂದ್ವಾನಿ ಬಗ್ಗೆಯೂ ಅವಿಕಾ ಮುಕ್ತವಾಗಿ ಮಾತನಾಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ 1920 ಹಾರರ್ ಸಿನಿಮಾದಲ್ಲಿ ಅವಿಕಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಹಾಟ್ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇಂಟಿಮೇಟ್ ಮತ್ತು ಕಿಸ್ಸಿಂಗ್ ಸೀನ್‌ನಲ್ಲಿ ನಟಿಸೋದು ತುಂಬಾ ಫನ್ ಆಗಿರುತ್ತೆ ಎಂದು ಹಲವರು ಭಾವಿಸುತ್ತಾರೆ. ಆದರೆ ಈ ಸಮಯದಲ್ಲಿ ಎಲ್ಲವೂ ನೀರಸವಾಗಿರುತ್ತದೆ ಎಂದು ಅವಿಕಾ ಹೇಳಿಕೊಂಡಿದ್ದಾರೆ.
Highest Paid Actress: ಒಂದು ಸಿನಿಮಾಕ್ಕೆ ಕೋಟಿ ಕೋಟಿ ಸಂಭಾವನೆ, ಪಟ್ಟಿಯಲ್ಲಿ ಮೊದಲ್ಯಾರು?
ನಿರ್ದೇಶಕ ವಿಕ್ರಮ್ ಭಟ್ ಬಗ್ಗೆ ಮಾತನಾಡಿದ ನಟಿ ಅವಿಕಾ, ಅವರು ತುಂಬಾ ವೃತ್ತಿಪರರು. ಸಿನಿಮಾ ಸೆಟ್‌ನಲ್ಲಿ ಯಾರಾದರೂ ತುಂಬಾ ನಾಚಿಕೊಳ್ತಾರೆ ಅಂದರೆ ಅದು ವಿಕ್ರಮ್ ಸರ್. ಇಂಟಿಮೇಟ್ ದೃಶ್ಯದ ಚಿತ್ರೀಕರಣ ವೇಳೆ ವಿಕ್ರಮ್ ಸರ್ ತುಂಬಾ ಮುಜುಗರಕ್ಕೊಳಗಾಗುತ್ತಾರೆ. ಆದ್ರೆ ಇಂತಹ ಅದ್ಭುತವಾದ ತಂಡದ ಜೊತೆ ಕೆಲಸ ಮಾಡಿದ್ದಕ್ಕೆ ಖುಷಿ ಇದೆ ಎಂದು ಅವಿಕಾ ಗೋರ್ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.