
ಆರ್.ಕೇಶವಮೂರ್ತಿ
ಚಿತ್ರದ ಟೈಟಲ್ ಉದ್ದ ಆಗಿಲ್ಲವೇ?
ಹಾಗೇನು ಇಲ್ಲ. ಚಿತ್ರದ ಸಬ್ ಟೈಟಲ್ ಸೇರಿಸಿ ‘ವನ್‌ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಎಂದು ಓದಿಕೊಂಡರೆ ಉದ್ದ ಅನಿಸುತ್ತದೆ. ಆದರೆ, ಮುಖ್ಯ ಕತೆ ನಡೆಯುವುದು ಜಮಾಲಿಗುಡ್ಡದಲ್ಲಿ. ಒಂದಾನೊಂದು ಕಾಲದಲ್ಲಿ ಅಲ್ಲಿ ಏನು ನಡೆಯಿತು ಎಂಬುದನ್ನು ಹೇಳುವ ಕತೆಗೆ ಈ ಶೀರ್ಷಿಕೆ ಬೇಕಿತ್ತು. ಕತೆಗೆ ಪೂರಕವಾದ ಹೆಸರು.
ಈ ಚಿತ್ರದ ಮೂಲಕ ನೀವು ಹೇಳುತ್ತಿರುವುದು ಏನು?
ಇದು ಯಾವ ಜಾನರ್ ಸಿನಿಮಾ, ಈ ಚಿತ್ರದಲ್ಲಿ ಏನಿದೆ ಎಂದು ಹೇಳಿದರೆ ಸಿನಿಮಾ ಗುಟ್ಟು ರಟ್ಟಾಗುತ್ತದೆ. ಯಾಕೆಂದರೆ ಇದು 90ರ ದಶಕದ ಕತೆ. ಒಂದು ಎಳೆ ಬಿಟ್ಟು ಕೊಟ್ಟರೂ ಕತೆ
ಗೊತ್ತಾಗುತ್ತದೆ.
ಹಾಗಾದರೆ ಜಮಾಲಿಗುಡ್ಡ ಎನ್ನುವ ಜಾಗ ಉಂಟಾ?
ಇಲ್ಲ. ಒಂದು ಕಾಲ್ಪನಿಕ ಜಾಗಕ್ಕೆ ನಾವು ಇಟ್ಟುಕೊಂಡಿರುವ ಹೆಸರು. ಈ ಕಾಲ್ಪನಿಕ ಜಾಗದಲ್ಲಿ ರೆಟೊ್ರೀ ಕತೆ ಹೇಳುತ್ತಿದ್ದೇವೆ. ಲವ್, ಆ್ಯಕ್ಷನ್, ಮನರಂಜನೆ ಎಲ್ಲವೂ ಚಿತ್ರದಲ್ಲಿದೆ.
ಚಿತ್ರದ ಮೇಕಿಂಗ್ ಹೇಗಿರುತ್ತದೆ?
ತುಂಬಾ ರೀ ಕ್ರಿಯೇಟ್ ಮಾಡುತ್ತಿದ್ದೇವೆ. ಅದ್ದೂರಿಯಾಗಿ ಚಿತ್ರ ಮೂಡಿ ಬರಲು ನಿರ್ಮಾಪಕ ಶ್ರೀಹರಿ ರೆಡ್ಡಿ ಅವರು ಯಾವುದಕ್ಕೂ ಕೊರತೆ ಮಾಡಿಲ್ಲ. ಹೀಗಾಗಿ ಚಿತ್ರದ ಮೇಕಿಂಗ್‌ನಲ್ಲಿ ನಾವು ಸೋಲಲ್ಲ ಎನ್ನುವ ಭರವಸೆ ಇದೆ. ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಭಾವನಾ, ಪ್ರಕಾಶ್ ಬೆಳವಾಡಿ, ನಂದಗೋಪಾಲ್, ಯಶ್ ಶೆಟ್ಟಿ, ಟಗರು ಸರೋಜ ಮುಂತಾದವರು ನಟಿಸುತ್ತಿದ್ದಾರೆ. ಕೊರೋನಾ ಸಂಕಷ್ಟದಲ್ಲೂ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ನಿರ್ಮಾಪಕರು ಸಹಕಾರ ನೀಡುತ್ತಿದ್ದಾರೆ.
ಈಗ ಎಷ್ಟು ದಿನ, ಎಲ್ಲೆಲ್ಲಿ ಶೂಟಿಂಗ್ ಆಗಿದೆ?
ಬೆಂಗಳೂರು, ಚಿಕ್ಕಮಗಳೂರಿನಲ್ಲಿ 45 ದಿನ ಶೂಟಿಂಗ್ ಆಗಿದೆ. ಶೇ.65 ಭಾಗ ಚಿತ್ರೀಕರಣ ಮುಗಿಸಿದ್ದೇವೆ. ಇನ್ನೂ 20 ರಿಂದ 25 ದಿನ ಶೂಟಿಂಗ್ ನಡೆಯಬೇಕಿದೆ. ಸದ್ಯಕ್ಕೆ ಶಿವಮೊಗ್ಗದಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.