
ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ‘ಜೇಮ್ಸ್’ (James) ಚಿತ್ರದ ಹೊಸ ಪೋಸ್ಟರ್ ಬಿಡುಗಡೆ (Poster Release) ಆಗಿದೆ. ಚಿತ್ರದ ಕತೆ ಏನು, ಈ ಚಿತ್ರದಲ್ಲಿ ಪುನೀತ್ ಅವರ ಪಾತ್ರ ಹೇಗಿರುತ್ತದೆ ಎನ್ನುವುದರ ಬಗ್ಗೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ (Chetan Kumar) ಇಲ್ಲಿ ಮಾತನಾಡಿದ್ದಾರೆ.
* ಸಿನಿಮಾ ಬಿಡುಗಡೆ ಯಾವಾಗ?
ಈ ಹಿಂದೆ ಪುನೀತ್ ಅವರೇ ಹೇಳಿದಂತೆ ಅವರ ಹುಟ್ಟುಹಬ್ಬಕ್ಕೆ (Birthday) ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಮಾ.17ಕ್ಕೆ ಏಕಕಾಲದಲ್ಲಿ ಎಲ್ಲ ಭಾಷೆಗಳಲ್ಲೂ ‘ಜೇಮ್ಸ್’ ತೆರೆ ಮೇಲೆ ಬರುವುದು ಪಕ್ಕಾ. ಈ ಕಾರಣಕ್ಕೆ ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸುತ್ತಿದ್ದೇವೆ.
* ಪುನೀತ್ ಅವರು ಸೋಲ್ಜರ್ ಪಾತ್ರ ಮಾಡುತ್ತಿದ್ದಾರೆಯೇ?
ತಾನು ಸೋಲ್ಜರ್ ಪಾತ್ರದಲ್ಲಿ ನಟಿಸಬೇಕು ಎಂಬುದು ಪುನೀತ್ ಅವರಿಗೆ ಇದ್ದ ಬಹು ವರ್ಷಗಳ ಕನಸು. ಅವರ ಅಭಿಮಾನಿಯಾಗಿ, ಅವರ ಕನಸು ಅರ್ಥ ಮಾಡಿಕೊಂಡ ನಿರ್ದೇಶಕನಾಗಿ ಅವರನ್ನು ನಾನು ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ತೋರಿಸಿದ್ದೇನೆ. ಇಡೀ ಚಿತ್ರದಲ್ಲಿ ಅವರು ಸೈನಿಕನಾಗಿ ಕಾಣಿಸಲ್ಲ. ವಿಶೇಷ ಸಂರ್ಭದಲ್ಲಿ ಈ ಪಾತ್ರದಲ್ಲಿ ಎಂಟ್ರಿ ಕೊಡುತ್ತಾರೆ.
James Poster Release: ಆರ್ಮಿ ಆಫೀಸರ್ ಲುಕ್‌ನಲ್ಲಿ ಮಿಂಚಿದ ಪುನೀತ್ ರಾಜ್‌ಕುಮಾರ್
* ಅಭಿಮಾನಿಗಳಿಗೆ ಈ ಚಿತ್ರ ಹೇಗೆ ಕನೆಕ್ಟ್ ಆಗುತ್ತದೆ?
ಅಭಿಮಾನಿಗಳು ಮಾತ್ರವಲ್ಲ, ಎಲ್ಲರಿಗೂ ಈ ಸಿನಿಮಾದಲ್ಲಿ ಅಪ್ಪು ಕನೆಕ್ಟ್ ಆಗುತ್ತಾರೆ. ತೆರೆ ಮೇಲೆ ಪುನೀತ್ ಹೇಗೆ ಕಾಣಿಸಿಕೊಂಡರೆ ಚೆನ್ನಾಗಿರುತ್ತದೆ, ಅವರನ್ನು ನಾವು ಯಾವ ರೀತಿ ನೋಡಿದರೆ ಖುಷಿ ಆಗುತ್ತದೆ, ಅವರನ್ನು ಹೇಗೆ ತೋರಿಸಲು ಸಾಧ್ಯ ಎಂಬಿತ್ಯಾದಿ ಕುತೂಹಲಗಳಿಗೆ ಈ ಸಿನಿಮಾ ಸಾಕ್ಷಿ ಆಗುತ್ತದೆ. ಪುನೀತ್ ಅವರನ್ನು ನೋಡಿದರೆ ಸಾಕು ಎಂದುಕೊಂಡು ಸಿನಿಮಾಗೆ ಬರುವ ಪ್ರತಿಯೊಬ್ಬರಿಗೂ ಈ ಚಿತ್ರ ಕನೆಕ್ಟ್ ಆಗುತ್ತದೆ.
* ಚಿತ್ರದಲ್ಲಿ ಶಿವಣ್ಣ (Shiva Rajkumar), ರಾಘವೇಂದ್ರ ಕುಮಾರ್ (Raghavendra Rajkumar) ನಟಿಸುವುದು ಮೊದಲೇ ಪ್ಲಾನ್ ಆಗಿತ್ತಾ?
ಹೌದು ಆಗಿತ್ತು. ಮೂವರು ಜತೆಯಾಗಿ ಕಾಣಿಸಿಕೊಳ್ಳಬೇಕು ಎಂಬುದು ಪುನೀತ್ ಆಸೆಯಾಗಿತ್ತು. ಕತೆ ಕೂಡ ಅದಕ್ಕೆ ಪೂರಕವಾಗಿತ್ತು. ಆದರೆ, ಆ ಮೂವರು ತೆರೆ ಮೇಲೆ ಈ ರೀತಿ ಜತೆಯಾಗುತ್ತಾರೆ ಅಂದುಕೊಂಡಿರಲಿಲ್ಲ.
* ಈಗ ಸಿನಿಮಾ ಯಾವ ಹಂತದಲ್ಲಿದೆ?
ಡಬ್ಬಿಂಗ್ (Dubbing) ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಬೇರೆ ಭಾಷೆಗಳಿಗೂ ಡಬ್ ಆಗುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲೂ ಈ ಸಿನಿಮಾ ಮೂಡಿ ಬರಲಿದೆ.
Puneeth Rajkumar: ಜೇಮ್ಸ್ ಚಿತ್ರಕ್ಕೆ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್
ಸೋಲ್ಜರ್ ಪಾತ್ರದಲ್ಲಿ ನಟಿಸಬೇಕೆಂಬುದು ಪುನೀತ್ ಕನಸು: ದೇಶವೇ ಆರಾಧಿಸುವ, ಅಭಿಮಾನಿಸುವ ನಾಯಕ ನಟನ ಜತೆ ಎರಡುವರೆ ವರ್ಷ ಪ್ರಯಾಣಿಸಿದ್ದೇನೆ, ‘ಜೇಮ್ಸ್ ’ ಎನ್ನುವ ಸಿನಿಮಾ ಮಾಡಿದ್ದೇನೆ ಎಂಬುದೇ ನನ್ನ ಭಾಗ್ಯ. ಅವರು ಇಲ್ಲ ಎನ್ನುವ ನೋವು ಇದ್ದೇ ಇರುತ್ತದೆ. ಆದರೆ, ಅವರು ತಮ್ಮ ಚಿತ್ರಗಳ ಮೂಲಕ ನಮ್ಮೊಂದಿಗೆ ಇರುತ್ತಾರೆ. ಆ ಧೈರ್ಯವೇ ‘ಜೇಮ್ಸ್’ ಚಿತ್ರದ ಹಿಂದೆ ಕೆಲಸ ಮಾಡುತ್ತಿದೆ. ಅಪ್ಪು ಫಾರ್ ಎವರ್.
-ಚೇತನ್ ಕುಮಾರ್, ನಿರ್ದೇಶಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.