ಶಿವರಾಜ್‌ಕುಮಾರ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ 'ಘೋಷ್ಟ್' ಇಂದು ತೆರೆ ಮೇಲೆ ಅಬ್ಬರಿಸಲಿದೆ. ಸಂದೇಶ್ ಎನ್ ನಿರ್ಮಾಣದ ಈ ಸಿನಿಮಾವನ್ನು ಶ್ರೀನಿ ನಿರ್ದೇಶಿಸಿದ್ದಾರೆ. ಶಿವಣ್ಣ ಸಿನಿಮಾ ಬಗ್ಗೆ ಹೇಳಿರುವ ಮಾತುಗಳು ಇಲ್ಲಿವೆ....
- ‘ಘೋಸ್ಟ್’ ಅನ್ನೋ ಟೈಟಲ್ ಮೊದಲ ಬಾರಿ ಕೇಳಿದಾಗಲೇ ವಾವ್ ಅನಿಸಿತು. ಶ್ರೀನಿ ಕತೆ ಹೇಳಿದ ತಕ್ಷಣ ಹಿಂದು ಮುಂದು ಯೋಚಿಸದೇ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟೆ. ಇದಾದ ಮೂರೇ ದಿನಗಳಲ್ಲಿ ಸಿನಿಮಾದ ಘೋಷಣೆಯೂ ಆಯಿತು. ಮುಂದಿನ ಮೂರು ತಿಂಗಳಲ್ಲಿ ಚಿತ್ರ ಸೆಟ್ಟೇರಿತು.
- ಈ ಸಿನಿಮಾದ ಕಾಂಸೆಪ್ಟ್ ನಾನು ಇದುವರೆಗೆ ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಇನ್ನೊಂದು ರೀತಿಯಲ್ಲಿ ನೋಡಿದರೆ ನನಗೆ ಒಂದು ಬದಲಾವಣೆ ಬೇಕಿತ್ತು. ನಾನು ಏಕತಾನತೆಯನ್ನು ಮೀರಬೇಕಿತ್ತು. ಘೋಸ್ಟ್ ಒಪ್ಪಿಕೊಳ್ಳಲು ಇದೂ ಒಂದು ಕಾರಣ.
undefined
- ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ ಇದು. ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಶೇ.70ರಷ್ಟು ಭಾಗದ ಕಥೆ ಜೈಲಿನಲ್ಲೇ ನಡೆಯುತ್ತದೆ.
ನೆಗೆಟಿವ್ ರೋಲ್ ಮಾಡುವಾಗ ನಮಗೆ ಸ್ವಲ್ಪ ಆ್ಯಟಿಟ್ಯೂಡ್ ಇರುತ್ತೆ: ಶಿವರಾಜ್ ಕುಮಾರ್
- ನಿರ್ದೇಶಕರು ಸಾಕಷ್ಟು ಬುದ್ಧಿ ಓಡಿಸಿ ಈ ಸಿನಿಮಾ ಮಾಡಿದ್ದಾರೆ. ಸಮಾಜ ಹಾಗೂ ವ್ಯವಸ್ಥೆಯಲ್ಲಿ ಒಂದು ಭಯ ಇರಬೇಕು. ಅದು ಇತ್ತೀಚೆಗೆ ಕಡಿಮೆಯಾಗುತ್ತಿದೆ. ಹಾಗೆ ಕಣ್ಮರೆಯಾಗುತ್ತಿರುವ ಭಯದ ಬಗ್ಗೆ ಹೇಳುತ್ತಲೇ ಸಮಾಜದ ಸ್ವಾಸ್ಥ್ಯಕ್ಕೆ ಅದೆಷ್ಟು ಅವಶ್ಯಕ ಅನ್ನುವುದನ್ನೂ ಸಿನಿಮಾ ತಿಳಿಸಿಕೊಡುತ್ತದೆ.
- ಈ ಸಿನಿಮಾದ ಒಂದು ಭಾಗದಲ್ಲಿ ಡಿ ಏಜಿಂಗ್ ಟೆಕ್ನಾಲಜಿ ಬಳಸಿ ನನ್ನನ್ನು ಬಹಳ ಚಿಕ್ಕವನ ಥರ ತೋರಿಸಿದ್ದಾರೆ. ಇದನ್ನು ನೋಡಲು ನನ್ನ ಅಮ್ಮ ಜೊತೆಗಿರಬೇಕಿತ್ತು ಅಂತ ಬಹಳ ತೀವ್ರವಾಗಿ ಅನಿಸಿತು. ‘ಆನಂದ್’, ‘ರಥಸಪ್ತಮಿ’ ಸಿನಿಮಾ ಮಾಡುತ್ತಿದ್ದ ದಿನಗಳು ಕಣ್ಮುಂದೆ ಬಂದವು. ನಾನಿಂದು ಸಿನಿಮಾರಂಗದಲ್ಲಿ ಕಾಲೂರಿ ನಿಂತಿದ್ದೇನೆ ಅಂದರೆ ಅದಕ್ಕೆ ಕಾರಣ ನನ್ನ ತಾಯಿ. ಇವತ್ತು ಅವರಿರಬೇಕಿತ್ತು.
Ghost ಫ್ಯಾನ್ಸ್ ಶೋ ವೇಳೆ ಶಿವಣ್ಣನ ಅಭಿಮಾನಿಗಳ ಆಕ್ರೋಶ: ಸಂತೋಷ್ ಥಿಯೇಟರ್ ಗಾಜು ಪುಡಿಪುಡಿ
- ಮುಂದೆ ಈ ಸಿನಿಮಾದ ಪ್ರೀಕ್ವೆಲ್ ಹಾಗೂ ಸೀಕ್ವೆಲ್‌ಗಳನ್ನು ಬೆರೆಸಿದ ರೀತಿಯಲ್ಲಿ ‘ಘೋಸ್ಟ್ 2’ ಬರಲಿದೆ. ಈ ಸಿನಿಮಾದ ಸೀಕ್ವೆಲ್ ಮಾಡದಿದ್ದರೆ ಸುಮ್ನೆ ಬಿಡಲ್ಲ ಅಂತ ಅನುಪಮ್ ಖೇರ್ ಬೇರೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಎರಡನೇ ಭಾಗ ಮಾಡದೆ ವಿಧಿಯಿಲ್ಲ.
ಇಂದು ದೇಶಾದ್ಯಂತ ಘೋಸ್ಟ್ ಬಿಡುಗಡೆ
ತೆಲುಗು ಹೊರತಾಗಿ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ದೇಶಾದ್ಯಂತ ಇಂದು ಘೋಸ್ಟ್ ಬಿಡುಗಡೆಯಾಗುತ್ತಿದೆ. ಸುಮಾರು 375ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 1500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ನಮ್ಮ ದೇಶ ಮಾತ್ರವಲ್ಲದೇ, ಅಮೆರಿಕಾ, ಕೆನಡಾ ಮೊದಲಾದೆಡೆಗಳಲ್ಲೂ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.