ಗ್ರೀನ್‌ ಕಾರ್ಡ್‌ ಬದಲು ಪರ್ಯಾಯ ಉದ್ಯೋಗ ಕಾರ್ಡ್‌ ಅಮೆರಿಕ ಘೋಷಣೆ, ಭಾರತೀಯರು ಫುಲ್ ಖುಷ್

By Suvarna News  |  First Published Oct 15, 2023, 12:15 PM IST

ಲಕ್ಷಾಂತರ ಭಾರತೀಯರಿಗೆ ಅನುಕೂಲವಾಗುವ ಸಾಧ್ಯತೆ, 5 ವರ್ಷಗಳ ಅವಧಿ ಹೊಂದಿರುವ ಉದ್ಯೋಗ ಪರವಾನಗಿ ಚೀಟಿ, ಗ್ರೀನ್‌ ಕಾರ್ಡ್‌ಗಾಗಿ ದೀರ್ಘ ಕಾಯುವಿಕೆ ತಪ್ಪಿಸಲು ಈ ಕ್ರಮ, ಗ್ರೀನ್‌ ಕಾರ್ಡ್‌ ಬಯಸಿದ್ದ ಭಾರತೀಯರ ಸಂಖ್ಯೆ 11 ಲಕ್ಷ.


ವಾಷಿಂಗ್ಟನ್‌ (ಅ.15): ಅಮೆರಿಕದ ಕಾಯಂ ನಿವಾಸಿ ಅಥವಾ ನಾಗರಿಕನಾಗಲು ನೀಡಲಾಗುತ್ತಿದ್ದ ಗ್ರೀನ್‌ ಕಾರ್ಡ್‌ಗೆ ಅನೇಕ ವರ್ಷಗಳಿಂದ ಕಾಯುತ್ತಿದ್ದ ಲಕ್ಷಾಂತರ ಭಾರತೀಯರಿಗೆ ಸಿಹಿ ಸುದ್ದಿ. ಈಗ ಗ್ರೀನ್‌ ಕಾರ್ಡ್‌ ಬದಲಾಗಿ 5 ವರ್ಷಗಳ ಕಾಲ ಅಮೆರಿಕದಲ್ಲಿ ನೌಕರಿ ಮಾಡಲು ಅವಕಾಶ ನೀಡುವ ಉದ್ಯೋಗ ಪರವಾನಗಿ ಚೀಟಿಯನ್ನು (ಎಎಡಿ) ವಿತರಿಸಲು ಅಮೆರಿಕ ನಾಗರಿಕ ಮತ್ತು ವಲಸೆ ಸೇವಾ ಇಲಾಖೆ ನಿರ್ಧರಿಸಿದೆ.

ಈ ಚೀಟಿಯು 5 ವರ್ಷಗಳ ಅವಧಿಯ ಮಾನ್ಯತೆ ಹೊಂದಿರಲಿದ್ದು, ಅಲ್ಲಿ ಕೆಲಸ ಮಾಡಲು ಅಧಿಕಾರವನ್ನು ನೀಡಲಿದೆ. ಅದರ ನಂತರ ಮತ್ತೆ ಈ ಚೀಟಿಯನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ.

Latest Videos

undefined

ವಿದೇಶದಲ್ಲಿ ಸ್ವಂತ ದ್ವೀಪ ಖರೀದಿಸಿ ಪ್ರವಾಸಿಗರ ಫೇವರೆಟ್‌

ಈ ಉಪಕ್ರಮದ ಮೂಲಕ ಗ್ರೀನ್‌ ಕಾರ್ಡ್‌ಗಾಗಿ ಕಾಯುವವರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಅಮೆರಿಕ ಸರ್ಕಾರ ಮುಂದಾಗಿದೆ. ಈ ಮೂಲಕ ಭಾರತದಿಂದ ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿರುವ ಸುಮಾರು 11 ಲಕ್ಷ ಮಂದಿಗೆ ಇದು ಅನುಕೂಲವಾಗಬಹುದು ಎನ್ನಲಾಗಿದೆ. ಈ ಆಕಾಂಕ್ಷಿಗಳಿಗೆ ಒಂದೊಮ್ಮೆ ಮುಂದೆ ಮತ್ತೆ ಗ್ರೀನ್‌ ಕಾರ್ಡ್‌ ನೀಡಿದರೆ ಆ ಸೌಲಭ್ಯವನ್ನೂ ಪಡೆಯಬಹುದಾಗಿದೆ.

ಗ್ರೀನ್ ಕಾರ್ಡ್, ಅಥವಾ ಪರ್ಮನೆಂಟ್ ರೆಸಿಡೆಂಟ್ ಕಾರ್ಡ್, ವಲಸಿಗರಿಗೆ US ನಲ್ಲಿ ಶಾಶ್ವತವಾಗಿ ವಾಸಿಸುವ ಹಕ್ಕನ್ನು ನೀಡುವ ದಾಖಲೆಯಾಗಿದೆ. ನಿರ್ದಿಷ್ಟ ದೇಶಗಳ ಜನರಿಗೆ ಎಷ್ಟು ಗ್ರೀನ್ ಕಾರ್ಡ್‌ಗಳನ್ನು ನೀಡಬಹುದು ಎಂಬುದರ ಮೇಲೆ ಮಿತಿಗಳಿವೆ.

 ಪಾಸ್‌ಪೋರ್ಟ್‌ ಹಗರಣ: ಬಂಗಾಳ, ಸಿಕ್ಕಿಂನ 50 ಕಡೆ ಸಿಬಿಐ ದಾಳಿ, ಇಬ್ಬರ ಬಂಧನ

ಅಮೆರಿಕದ ಲಿಬರ್ಟೇರಿಯನ್ ಥಿಂಕ್ ಟ್ಯಾಂಕ್ ಕ್ಯಾಟೊ ಇನ್‌ಸ್ಟಿಟ್ಯೂಟ್‌ನ ಡೇವಿಡ್ ಜೆ ಬಿಯರ್ ಅವರ ಅಧ್ಯಯನವು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳ ಬ್ಯಾಕ್‌ಲಾಗ್ ಈ ವರ್ಷ ದಾಖಲೆಯ ಗರಿಷ್ಠ 1.8 ಮಿಲಿಯನ್ ಅರ್ಜಿಗಳು ತಲುಪಿದೆ ಎಂದು ಹೇಳಿದೆ. ಇವುಗಳಲ್ಲಿ 1.1 ಮಿಲಿಯನ್ ಅರ್ಜಿಗಳು ಭಾರತದಿಂದ ಬಂದಿವೆ (ಶೇ 63). ಇನ್ನೂ ಸುಮಾರು 250,000 ಅರ್ಜಿಗಳು ಚೀನಾದಿಂದ (14 ಪ್ರತಿಶತ) ಎಂದು ಅದು ಹೇಳಿದೆ.

10.5 ಲಕ್ಷಕ್ಕೂ ಹೆಚ್ಚು ಭಾರತೀಯರು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಾಗಿ ಸಾಲಿನಲ್ಲಿದ್ದಾರೆ ಮತ್ತು ಅವರಲ್ಲಿ 4 ಲಕ್ಷ ಜನರು ಯುಎಸ್‌ನಲ್ಲಿ ಶಾಶ್ವತ ರೆಸಿಡೆನ್ಸಿ ದಾಖಲೆಯನ್ನು ಪಡೆಯುವ ಮೊದಲು ಸಾಯಬಹುದು ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ.

click me!