Exclusive Interview: ಕಲಾವಿದರ ಕಣ್ಣು ಮಾತಾಡ್ಬೇಕು, ಅದೇ ಬ್ಯೂಟಿ: ಅಂಕಿತಾ ಅಮರ್‌

By Govindaraj SFirst Published Nov 28, 2022, 3:40 AM IST
Highlights

‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ನಾಯಕಿ ಅಂಕಿತಾ ಅಮರ್‌ ಬಹುಮುಖ ಪ್ರತಿಭೆ. ಗಾಯನ, ಭರತನಾಟ್ಯ, ನಟನೆ ಜೊತೆಗೆ ಮೆಡಿಕಲ್‌ ಬಯೋ ಕೆಮೆಸ್ಟ್ರಿಯಲ್ಲಿ ಡಬಲ್‌ ಗೋಲ್ಡ್‌ ಮೆಡಲಿಸ್ಟ್‌. ಸದ್ಯ ಸಿನಿಮಾಕ್ಕೆ, ತನ್ನ ಪಾತ್ರಕ್ಕೆ ಬಹಳ ಡೆಡಿಕೇಟೆಡ್‌ ನಟಿ. ಸಿನಿಮಾ ವ್ಯಾಮೋಹ, ನಟನಾ ಪ್ರೀತಿಯ ಬಗ್ಗೆ ಅವರಿಲ್ಲಿ ಮಾತಾಡಿದ್ದಾರೆ.

ಪ್ರಿಯಾ ಕೆರ್ವಾಶೆ

‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ನಾಯಕಿ ಅಂಕಿತಾ ಅಮರ್‌ ಬಹುಮುಖ ಪ್ರತಿಭೆ. ಗಾಯನ, ಭರತನಾಟ್ಯ, ನಟನೆ ಜೊತೆಗೆ ಮೆಡಿಕಲ್‌ ಬಯೋ ಕೆಮೆಸ್ಟ್ರಿಯಲ್ಲಿ ಡಬಲ್‌ ಗೋಲ್ಡ್‌ ಮೆಡಲಿಸ್ಟ್‌. ಸದ್ಯ ಸಿನಿಮಾಕ್ಕೆ, ತನ್ನ ಪಾತ್ರಕ್ಕೆ ಬಹಳ ಡೆಡಿಕೇಟೆಡ್‌ ನಟಿ. ಸಿನಿಮಾ ವ್ಯಾಮೋಹ, ನಟನಾ ಪ್ರೀತಿಯ ಬಗ್ಗೆ ಅವರಿಲ್ಲಿ ಮಾತಾಡಿದ್ದಾರೆ.

* ಇಬ್ಬನಿ ತಬ್ಬಿದ ಇಳೆಯಲಿ ನಿಮ್ಮ ಮೊದಲ ಚಿತ್ರ. ಅನುಭವ ಹೇಗಿತ್ತು?
ಈ ಸಿನಿಮಾ ಶೂಟಿಂಗ್‌, ಮೊದಲು ನಡೆದ ವರ್ಕ್ಶಾಪ್‌ನಲ್ಲಿ ಪಾಲ್ಗೊಂಡಿದ್ದು ಒಳ್ಳೆ ಅನುಭವ. ಈ ಚಿತ್ರದಲ್ಲಿ ಅನಾಹಿತ ಎಂಬ ಕವಯತ್ರಿ ಪಾತ್ರ ನನ್ನದು. ಇದರ ಜೊತೆಗೆ ಮಯೂರ ರಾಘವೇಂದ್ರ ನಿರ್ದೇಶನದ ‘ಅಬಜಬದಬ’ ಸಿನಿಮಾವನ್ನೂ ಮಾಡುತ್ತಿದ್ದೇನೆ. ಇದರಲ್ಲಿ ನಾನು ಗಾಯಕಿ. ಎರಡೂ ಕಲೆಗೆ ಸಂಬಂಧಿಸಿದ ಪಾತ್ರವೇ ಆಗಿರೋದರಿಂದ ಹೆಚ್ಚು ಆಪ್ತ ಅನಿಸುತ್ತೆ.

ಪರಂವಃ ಸ್ಟುಡಿಯೋ ನಿರ್ಮಾಣದಲ್ಲಿ ವಿಹಾನ್‌; ಚಂದ್ರಜಿತ್‌ ನಿರ್ದೇಶನ, ಅಂಕಿತಾ ಅಮರ್‌ ನಾಯಕಿ!

* ಬರುವ ಪಾತ್ರ ಕಲೆಗೆ ಸಂಬಂಧಿಸಿದ್ದೇ ಇರಲಿ ಅನ್ನೋ ಆಸೆ?
ಬರುವ ಪಾತ್ರ ಹೇಗೇ ಇರಲಿ, ಅದಕ್ಕೆ ನ್ಯಾಯ ಕೊಡುವ ರೀತಿ ನನ್ನ ಅಭಿನಯ ಇರ್ಬೇಕು ಅನ್ನೋ ಆಸೆ ಇದೆ. ಇದುವರೆಗೂ ಬಂದಿರುವ ಕಿರುತೆರೆ ಪಾತ್ರಗಳು, ಈಗ ಹಿರಿತೆರೆಯಲ್ಲಿ ಸಿಕ್ಕಿರುವ ಕ್ಯಾರೆಕ್ಟರ್ಸ್‌ ಮನಸ್ಸಿಗೆ ಹತ್ತಿರವಾದದ್ದೇ.

* ಪಾತ್ರ ಹತ್ತಿರ ಆಗೋದಾ, ಆಗಿಸಿಕೊಳ್ಳೋದಾ?
ಆರ್ಟಿಸ್ಟ್‌ಗೂ ಕತೆ ಬರೆಯೋರಿಗೂ ಮದುವೆ ಆದ್ರೆ ಪಾತ್ರ ಬೇಬಿ ಡೆಲಿವರಿ ಥರ ಇರುತ್ತೆ. ಕಥೆಗಾರರು ಏನನ್ನು ಮನಸ್ಸಲ್ಲಿಟ್ಟುಕೊಂಡು ಕಥೆ ಬರೀತಾರೋ ಅದನ್ನು ಅರ್ಥಮಾಡಿಕೊಳ್ಳುವ, ಪಾತ್ರದ ಮೂಲಕ ಹೊಮ್ಮಿಸುವ ಸೆನ್ಸಿಬಿಟಿಲಿ ನನಗಿರಬೇಕು. ಆಗ ಪಾತ್ರವೂ ಹತ್ತಿರವಾಗುತ್ತೆ, ಪಾತ್ರಕ್ಕೆ ನಾವೂ ಹತ್ತಿರವಾಗುತ್ತೀವಿ.

* ಇಂಡಸ್ಟ್ರಿಗೆ ಬರಬೇಕು ಅನ್ನೋ ಕನಸು ಎಷ್ಟುಸಮಯದ್ದು?
ಆ ಥರ ಯೋಚನೆ ಇರಲಿಲ್ಲ. ಆದರೆ ಸ್ಟೇಜ್‌, ಕ್ಯಾಮರಾ ಮುಂದೆ ಇರೋದು ಇಷ್ಟ. ಮೆಡಿಕಲ್‌ ಬಯೋ ಕೆಮೆಸ್ಟ್ರಿಲಿ ಡಬಲ್‌ ಗೋಲ್ಡ್‌ ಮೆಡಲ್‌ ತಗೊಂಡಿದ್ದೆ. ಪಿಹೆಚ್‌ಡಿ ಮಾಡೋ ಕನಸಿತ್ತು. ಆದರೆ ಅಪ್ಪ, ಅಮ್ಮ, ಮನೆಯವರ ಬೆಂಬಲದಿಂದ ನನ್ನ ನೆಚ್ಚಿನ ನಟನೆಯ ಕಡೆ ಹೊರಳಿದೆ. ಆಕಸ್ಮಿಕವಾಗಿ ಬಂದಿದ್ದು. ಈಗ ಬಣ್ಣದ ಗೀಳಲ್ಲಿ ಬಿದ್ದಿದ್ದೇನೆ.

* ಕನ್ನಡ ಇಂಡಸ್ಟ್ರಿಯಲ್ಲಿ ನಮ್ಮ ಹುಡುಗಿಯರಿಗೆ ಅವಕಾಶ ಇದೆಯಾ?
ಕಲೆಗೆ ಭಾಷೆಯ ಬೌಂಡರಿ ಇಲ್ಲ ಅನ್ನೋದನ್ನು ನಂಬ್ತೀನಿ. ಆದರೆ ಆ ಭಾಷೆ, ಸೊಗಡು, ಗಂಧ ಕಲಿತು ನಟಿಸಬೇಕು. ನಾನು ಕನ್ನಡದ ದೊಡ್ಡ ಅಭಿಮಾನಿ. ಪ್ರತೀ ಅಕ್ಷರಕ್ಕೂ ಮುತ್ತು ಕೊಟ್ಟು ಮಾತಾಡ್ಬೇಕು. ಅಷ್ಟು ಚಂದ ನಮ್ಮ ಭಾಷೆ. ಕನ್ನಡದವರು ಏನು ಅಂತ ಈಗ ಎಲ್ರಿಗೂ ಗೊತ್ತಾಗ್ತಿದೆ.

* ನಟಿಗೆ ಬ್ಯೂಟಿ ಇದ್ರಷ್ಟೇ ಸಾಕಾ?
ಬ್ಯೂಟಿಯನ್ನು ಕಣ್ಣು ಹೇಳುತ್ತೆ. ಕಲಾವಿದರ ಕಣ್ಣು ಮಾತಾಡ್ಬೇಕು. ಯಾರ ಕಣ್ಣು ಮಾತಾಡುತ್ತೋ ಅವರು ಬ್ಯೂಟಿಫುಲ್‌ ಆಕ್ಟರ್‌. ಕತೆ ಏನು ಡಿಮ್ಯಾಂಡ್‌ ಮಾಡುತ್ತೆ ಅನ್ನೋದನ್ನೂ ಗಮನಿಸಬೇಕು. ಕತೆ ಪ್ರಕಾರ ಹೀರೋ ಅಥವಾ ಹೀರೋಯಿನ್‌ ನೋಡೋದಕ್ಕೆ ತುಂಬ ಚೆನ್ನಾಗಿರಬೇಕು ಅಂದ್ರೆ ಮಾತ್ರ ಆ ಬ್ಯೂಟಿಗೆ ಮಹತ್ವ ಕೊಡಬೇಕು.

ನನ್ನ ಪಾತ್ರದಲ್ಲಿ ಎಸ್‌ಪಿಬಿ ನೆರಳಿದೆ: Ankita Amar

* ಕನ್ನಡ ನಾಯಕಿಯರಿಗೆ ಭವಿಷ್ಯ ಇದೆಯಾ?
ಖಂಡಿತಾ ಇದೆ. ನಾವು ಆಶಾವಾದಿಗಳಾಗಿರಬೇಕು. ಪರಿಶ್ರಮ ಇರಬೇಕು, ಭರವಸೆ ಇರ್ಬೇಕು, ಮನಸಾರೆ ಕನಸು ಕಟ್ಟಬೇಕು, ಇಷ್ಟಪಟ್ಟು ಆ ಕನಸಿನ ಈಡೇರಿಕೆಗೆ ಶ್ರಮ ಪಟ್ಟರೆ ನಮ್ಮ ಹುಡುಗಿಯರು ಬೇರೆ ಲೆವೆಲ್‌ಗೇ ಹೋಗಬಹುದು.

click me!