ಪವನ್ ಒಡೆಯರ್ ನಿರ್ದೇಶನ, ಸಿ ಆರ್ ಮನೋಹರ್ ನಿರ್ಮಾಣದ ‘ರೆಮೊ’ ಸಿನಿಮಾದ ಹೀರೋ ಇಶಾನ್. ಎಂಬಿಎಯಲ್ಲಿ ಡ್ರಾಪ್‌ಔಟ್ ಆಗಿ ಸಿನಿಮಾ ರಂಗಕ್ಕೆ ಬಂದ ಇವರಿಗೆ ರೆಮೊ ಬದುಕಿನ ಟರ್ನಿಂಗ್ ಪಾಯಿಂಟ್ ಆಗುತ್ತೆ ಅನ್ನೋ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ. ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ರೆಡ್‌ಕಾರ್ಪೆಟ್ ಮೇಲೆ ಬರೋದಕ್ಕೂ ಸ್ವಲ್ಪ ಮೊದಲು ಇಶಾನ್ ಎಕ್ಸೈಟ್‌ಮೆಂಟ್‌ನಲ್ಲೇ ಮಾತಾಡಿದ್ರು.
ಪ್ರಿಯಾ ಕೆರ್ವಾಶೆ
ರೆಮೊ ಕನ್ನಡದಲ್ಲಿ ಮೊದಲ ಸಿನಿಮಾ. ಪಾತ್ರದೊಳಗೆ ಎಂಟ್ರಿ ಆಗೋದಕ್ಕೆ ಎಷ್ಟುಸಮಯ ತಗೊಂಡ್ರಿ?
undefined
ಚಿತ್ರದ ಸ್ಕಿ್ರಪ್‌್ಟವರ್ಕ್ ಆಗುತ್ತಿರುವಾಗಲೇ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಜೊತೆಯಾಗಿದ್ದೆ. ಹೀಗಾಗಿ ಪಾತ್ರ, ಕಥೆ ಬೆಳೆಯೋದನ್ನು ಹತ್ತಿರದಿಂದ ಗಮನಿಸುತ್ತ ಬಂದಿದ್ದೆ. ಪಾತ್ರದ ನಾಡಿಮಿಡಿತ ಅರ್ಥ ಮಾಡ್ಕೊಳ್ಳೋದು ಕಷ್ಟಆಗಲಿಲ್ಲ. ಶೂಟಿಂಗ್ ಶುರುವಾಗಿ ಮೂರ್ನಾಲ್ಕು ದಿನದೊಳಗೇ ನಿರ್ದೇಶಕ ಪವನ್ ಒಡೆಯರ್ ‘ರೆಮೊ ನಂಗೆ ಸಿಕ್ಕಾಯ್ತು’ ಅಂದುಬಿಟ್ಟರು. ಆಮೇಲೆ ಅದೇ ರೀತಿ ಮುಂದುವರಿದೆವು.
ರೆಮೊದಲ್ಲಿ ನೀವು ರಾಕ್ ಸ್ಟಾರ್. ಸಿದ್ಧತೆ ಹೇಗಿತ್ತು?
ಪವನ್ ಅವರು ಈ ಪಾತ್ರಕ್ಕೆ ಯಾವ ರೆಫರೆನ್ಸೂ ಬೇಡ, ನಾವೇ ಇನ್ನೊಬ್ಬರಿಗೆ ರೆಫರೆನ್ಸ್ ಆಗಬೇಕು ಅಂದರು. ಆದರೂ ನಾನು ಹಿಂದೆ ನೋಡಿದ್ದ ‘ಇಂಡಿಯನ್ ರಾಕ್ ಸ್ಟಾರ್ಸ್’ ಶೋನ ಮತ್ತೆ ನೋಡಿದೆ. ಹಾಗಂತ ಅವರಾರಯರನ್ನೂ ಅನುಕರಿಸಲಿಲ್ಲ. ನಟನಾಗಿ ನನಗೆ ಒಂದಿಷ್ಟುಸೂಕ್ಷ್ಮ ಅರಿಯಬೇಕಿತ್ತು. ಅವರ ಎನರ್ಜಿಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ನಾರ್ಮಲ್ ಪಾತ್ರಕ್ಕೆ ಜೀವ ಕೊಡೋದಕ್ಕೂ ರಾಕ್‌ಸ್ಟಾರ್ ಪಾತ್ರಕ್ಕೆ ಜೀವ ಕೊಡೋದಕ್ಕೆ ವ್ಯತ್ಯಾಸ ಇರುತ್ತಲ್ವಾ..
ನಾನೀಗ ರಾಕ್‌ಸ್ಟಾರ್ ಆದೆ ಅನಿಸಿದ ಕ್ಷಣ?
ಸಾಮಾನ್ಯ ಹುಡುಗ ಇಶಾನ್ ರಾಕ್‌ಸ್ಟಾರ್ ಆಗಿ ಬದಲಾದ ಕ್ಷಣ ಬಹಳ ಮ್ಯಾಜಿಕಲ್. ನನಗೆ ಅರಿವಿಲ್ಲದಂತೆ ಹಾಗಾಗಿ ಹೋಯ್ತು. ಅದನ್ನು ಬಹಳ ಎನ್‌ಜಾಯ್ ಮಾಡಿದೆ. ಇಡೀ ಪಾತ್ರದ ಜರ್ನಿಯೇ ಅದ್ಭುತವಾಗಿತ್ತು. ಫೈನಲೀ, ನಾನು ಪಾತ್ರವಾಗಿ ಜೀವಿಸಿದ್ದೇನೆ ಅನ್ನೋದು ಪ್ರೇಕ್ಷಕನ ಕಣ್ಣಲ್ಲಿ ರಿಫ್ಲೆಕ್ಟ್ ಆಗ್ಬೇಕು. ಅದು ಸಾರ್ಥಕತೆ ಕೊಡುವ ಕ್ಷಣ.
ಶೂಟಿಂಗ್ ವೇಳೆ ಗಲಿಬಿಲಿ, ಭಯಕ್ಕೆ ಬಿದ್ದ ಸನ್ನಿವೇಶ?
ಸಿನಿಮಾ ಮಹತ್ವದ ಸನ್ನಿವೇಶವನ್ನು ಆ ಕ್ಷಣದಲ್ಲೇ ಪವನ್ ಬರೆದಿದ್ದರು. ಅಲ್ಲೇ ಸ್ಕಿ್ರಪ್‌್ಟನೋಡಿ ಪರ್ಫಾಮ್ ಮಾಡಬೇಕಿತ್ತು. ಆ ಹೊತ್ತಿಗೆ ದಿಗಿಲು ಬಿದ್ದಿದ್ದೆ. ಆಮೇಲೆ ಆ ಟೇಕ್ ಚೆನ್ನಾಗಿ ಬಂತು ಅಂತ ನಿರ್ದೇಶಕರು ಹೇಳಿದ್ರು.
ಸೆಟ್‌ನಲ್ಲಿ ಕುಡಿದು ತೂರಾಡಿದ ನಟಿ ಅಶಿಕಾ ರಂಗನಾಥ್; ವಿಡಿಯೋ ವೈರಲ್
ಈ ಸಿನಿಮಾಕ್ಕೆ ನಿಮ್ಮ ವ್ಯಾಲ್ಯೂ ಎಡಿಶನ್ ಏನು?
ನಿರ್ದೇಶಕರು ಹೀಗೆ ಮಾಡು ಅಂತ ಸೂಚಿಸಬಹುದು, ಆದರೆ ಪಾತ್ರದ ಮ್ಯಾನರಿಸಂ, ವಿವಿಧ ಸನ್ನಿವೇಶಗಳಲ್ಲಿ ತೋರಿಸಬೇಕಾದ ಎಮೋಶನ್, ಆ ಎನರ್ಜಿ ಎಲ್ಲವನ್ನೂ ನಾನೇ ಸೇರಿಸಬೇಕು. ಅದು ಪಾತ್ರಕ್ಕೆ ಹೊಂದಿಕೊಳ್ಳುತ್ತಲೇ ವಿಶಿಷ್ಟಅಂತಲೂ ಅನಿಸಬೇಕು. ಅದನ್ನ ಮಾಡಿದ್ದೇನೆ. ಈ ಸಿನಿಮಾ ನನ್ನ ಬದುಕಿನ ಟರ್ನಿಂಗ್ ಪಾಯಿಂಟ್ ಆಗುತ್ತೆ ಅನ್ನೋ ಸಂಪೂರ್ಣ ವಿಶ್ವಾಸ ಇದೆ.
ನಿಮ್ಮ ಹಿನ್ನೆಲೆ?
ಬೆಂಗಳೂರು ಹೊರವಲಯದ ಸರ್ಜಾಪುರದ ಮಹಾಲ್ ಚೌಡದೇನ ಹಳ್ಳಿ ಅನ್ನೋ ಸಣ್ಣ ಊರಿಂದ ಬಂದವನು. ಶಾಲೆ ಓದಿದ್ದು ನಮ್ಮೂರಲ್ಲೇ. ಮುಂದೆ ಕ್ರೈಸ್ಟ್ ನಲ್ಲಿ, ಜೈನ್
ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ. ಎಂಬಿಎ ಡ್ರಾಪ್‌ಔಟ್ ಆದ್ಮೇಲೆ ಸಿನಿಮಾ ಆಸಕ್ತಿಯಿಂದ ಚಿತ್ರರಂಗಕ್ಕೆ ಬಂದೆ. ಪೂರಿ ಜಗನ್ನಾಥ ಅವರೊಂದಿಗೆ ‘ರೋಗ್’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದೆ. ಕನ್ನಡದಲ್ಲಿ ರೆಮೊ ಮೊದಲ ಚಿತ್ರ.
ನಿಮಗೆ ಬಾಲಿವುಡ್‌ನಿಂದ ಚಾನ್ಸ್ ಬಂದಿದೆಯಂತೆ?
ಬಾಲಿವುಡ್‌ನಿಂದ ಅಲ್ಲ, ದಕ್ಷಿಣ ಭಾರತೀಯ ಚಿತ್ರಗಳಿಂದ ಉತ್ತಮ ಅವಕಾಶ ಬರುತ್ತಿದೆ. ಆ ಬಗ್ಗೆ ಇನ್ನೊಮ್ಮೆ ಮಾತಾಡುವೆ.
Raymo ನಾಯಕನಿಗೆ 6 ಪ್ಯಾಕ್ಸ್ ಮಾಡಲು 10 ದಿನ ಅಡುಗೆ ಮಾಡಿಕೊಟ್ಟ ಆಶಿಕಾ ರಂಗನಾಥ್
ನಟನ ಫಿಸಿಕಲ್ ಟ್ರಾನ್ಸ್‌ಪರ್ಮೇಶನ್ ಬಗ್ಗೆ ಏನು ಹೇಳ್ತೀರಿ?
ನಟ ಅದರಲ್ಲೂ ಹೀರೋ ಅಂದಾಗ ಫಿಸಿಕಲ್ ಫಿಟ್‌ನೆಸ್ ಅವಶ್ಯಕ, ಅನಿವಾರ್ಯ. ಈ ಸಿನಿಮಾಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿದ್ದೆ. ಸಿನಿಮಾ ಶುರುವಾಗೋದಕ್ಕಿಂತಲೂ ಮುಂಚೆ ಸುಮಾರು ಆರು ತಿಂಗಳು ಬಾಡಿ ಬಿಲ್ಡ್ ಮಾಡಿದ್ದೆ. ಆದರೆ ಸಿನಿಮಾದಲ್ಲಿ ಸಿಕ್ಸ್‌ಪ್ಯಾಕ್ ತೋರಿಸೋ ಅವಕಾಶ ಸಿಗಲಿಲ್ಲ.