ಶಿವರಾಜ್‌ಕುಮಾರ್ ಹುಟ್ಟುಹಬ್ಬ; ಪತ್ನಿ ಗೀತಾ ಕೊಟ್ಟ ಸ್ಪೆಷಲ್ ಗಿಫ್ಟೆ ಏನು ಹೇಳಿ?

Published : Jul 13, 2023, 09:22 AM IST
ಶಿವರಾಜ್‌ಕುಮಾರ್ ಹುಟ್ಟುಹಬ್ಬ; ಪತ್ನಿ ಗೀತಾ ಕೊಟ್ಟ ಸ್ಪೆಷಲ್ ಗಿಫ್ಟೆ ಏನು ಹೇಳಿ?

ಸಾರಾಂಶ

ನಾಲ್ಕು ವರ್ಷಗಳ ನಂತರ ಶಿವರಾಜ್‌ಕುಮಾರ್ ಅವರು ಈ ವರ್ಷ ತಮ್ಮ 61ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡಿರು. ಬೆಂಗಳೂರಿನ ಸಂತೋಷ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಅಭಿಮಾನಿಗಳ ಬೃಹತ್ ಸಂಭ್ರಮದಲ್ಲಿ 'ಘೋಸ್ಟ್‌' ಚಿತ್ರದ ಬಿಗ್‌ ಡ್ಯಾಡಿ ಟೀಸರ್ ಬಿಡಗಡೆ ಹಾಗೂ ಹುಟ್ಟುಹಬ್ಬ ಆಚರಣೆ ನಡೆಯಿತ್ತು. ಈ ಸಂಭ್ರಮದಲ್ಲಿ ಶಿವಣ್ಣ ಜೊತೆಗಿನ ಮಾತುಕತೆ..

ಈ ವರ್ಷದ ನಿಮ್ಮ ಹುಟ್ಟುಹಬ್ಬದ ಗಿಫ್ಟ್ ಏನು?

ಇಬ್ಬರು ಮಕ್ಕಳು, ಗೀತಾ ಮತ್ತು ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನಗಿಂತ ದೊಡ್ಡ ಗಿಫ್ಟ್ ಇನ್ನೇನಿದೆ. ನಾಲ್ಕು ವರ್ಷ ಅವರ ಜತೆಗೆ ನಾನು ಹುಟ್ಟುಹಬ್ಬ ಮಾಡಿಕೊಳ್ಳಲಿಲ್ಲ. ಆದರೂ ಇಷ್ಟು ಜನ ಸೇರಿದ್ದಾರೆ, ನನ್ನ ಅಭಿಮಾನಿಸುತ್ತಿದ್ದಾರೆ ಎಂಬುದೇ ದೊಡ್ಡ ಗಿಫ್ಟ್.

ಗೀತಾ ಶಿವರಾಜ್‌ಕುಮಾರ್‌ ವಿಶೇಷ ಉಡುಗೋರೆ ಕೊಟ್ಟಿರಬೇಕಲ್ಲ?

ಗೀತಾನೇ ನನಗೆ ಗಿಫ್ಟ್‌. ಹೀಗಾಗಿ ಅವರಿಂದ ನಾನು ಏನೂ ಉಡುಗೊರೆ ನಿರೀಕ್ಷೆ ಮಾಡಲ್ಲ. ಪ್ರತಿ ವರ್ಷದಿಂದ ಈ ವರ್ಷವೂ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸಂಭ್ರಮ ಮಾಡುತ್ತೇವೆ ಅಷ್ಟೆ.

ಈ ವರ್ಷ ಹೇಳಿಕೊಳ್ಳುವುದಕ್ಕೆ ಏನೆಲ್ಲ ವಿಶೇಷತೆಗಳಿವೆ?

ಸೂಪರ್‌ಸ್ಟಾರ್‌ ರಜನಿಕಾಂತ್ ಜತೆಗೆ ‘ಜೈಲರ್‌’, ಧನುಷ್ ಜತೆಗೆ ‘ಕ್ಯಾಪ್ಟನ್‌ ಮಿಲ್ಲರ್‌’, ಪ್ರಭುದೇವ ಜತೆಗೆ ಒಂದು ಸಿನಿಮಾ ಮಾಡುತ್ತಿದ್ದೇನೆ. ಬೇರೆ ಭಾಷೆಯ ಸ್ಟಾರ್‌ ನಟರ ಜತೆಗೆ ನಟಿಸುತ್ತಿರುವುದು ವಿಶೇಷ ಎನ್ನಬಹುದು. ಇದರ ಜತೆಗೆ ಕನ್ನಡದಲ್ಲೂ ನಾನು ರಾಜ್‌ ಬಿ ಶೆಟ್ಟಿ ಜತೆಗೆ ‘45’ ಚಿತ್ರದಲ್ಲಿ ಹಾಗೂ ಗಣೇಶ್‌ ಜತೆಗೆ ಹೊಸ ಚಿತ್ರದಲ್ಲಿ ನಟಿಸುತ್ತಿದ್ದೇನೆ.

ಹೊಸಪೇಟೆಯ ಅನ್ನಪೂರ್ಣೇಶ್ವರಿ ಶಾಲೆ ದತ್ತು ಪಡೆದ ಗೀತಾ ಶಿವರಾಜ್‌ಕುಮಾರ್!

ನೀವು ಮಾತ್ರ ಬೇರೆ ಭಾಷೆಯ ನಟರ ಚಿತ್ರಗಳ‍ಲ್ಲಿ ನಟಿಸಲು ಹೋಗುತ್ತೀರಿ, ಅವರು ಮಾತ್ರ ಬರಲ್ಲ. ಮುಂದೆ ಏನಾದರೂ ನಿಮ್ಮ ಜತೆಗೆ ಕನ್ನಡದಲ್ಲಿ ರಜನಿಕಾಂತ್ ಕಾಣಿಸಿಕೊಳ್ಳಬಹುದಾ?

ಈಗ ಬರದೆ ಇರಬಹುದು. ಮುಂದೆ ಒಳ್ಳೆಯ ಪಾತ್ರ, ಕತೆ ಸಿಕ್ಕರೆ ಖಂಡಿತ ಬರಬಹುದು. ಆದರೆ, ನನ್ನ ಜತೆಗೆ ನಟಿಸುತ್ತಾರೆಯೇ ಎಂಬುದು ಈಗಲೇ ಹೇಳಲಾರೆ. ‘ಘೋಸ್ಟ್‌ 2’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂದು ಕೇಳಿದರೆ ಆ ಬಗ್ಗೆ ನಿರ್ದೇಶಕರು ಹೇಳಬೇಕು. 

ಜೈಲರ್‌ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?

ತುಂಬಾ ಕಡಿಮೆ. 10 ನಿಮಿಷಗಳ ಕಾಲ ಬರುವ ಪಾತ್ರ ಅದು. ಹೀಗಾಗಿ ಈಗಲೇ ಪಾತ್ರದ ಬಗ್ಗೆ ಮಾತು ಬೇಡ. ಸಿನಿಮಾ ನೋಡಿ.

ನಿಮ್ಮ ಕೈಯಲ್ಲಿ ಎಷ್ಟು ಚಿತ್ರಗಳು ಇವೆ?

ಸರಿಯಾಗಿ ಸಂಖ್ಯೆ ಗೊತ್ತಿಲ್ಲ. ಆದರೆ, ಹತ್ತು ಹನ್ನೆರಡು ಚಿತ್ರಗಳಂತೂ ಇವೆ. ಯಾವ ಸಿನಿಮಾ ಯಾವಾಗ ಸೆಟ್ಟೇರುತ್ತದೆ, ಯಾವಾಗ ಶೂಟಿಂಗ್, ಯಾವಾಗ ತೆರೆಗೆ ಬರುತ್ತದೆ ಎಂಬುದು ಆಯಾ ಚಿತ್ರಗಳ ನಿರ್ದೇಶಕರ ಹಾಗೂ ನಿರ್ಮಾಪಕರ ಮೇಲೆ ನಿಂತಿರುತ್ತದೆ.

ಅಪ್ಪು ಸಂಜೆ ಫ್ಯಾಮಿಲಿ ಜೊತೆ ಡ್ರೈವ್‌ ಹೋಗುತ್ತಿದ್ದ; ಫ್ಯಾಮಿಲಿಗಳ ಬಗ್ಗೆ ಮಾತನಾಡಿದ ಶಿವಣ್ಣ

ಘೋಸ್ಟ್ ಚಿತ್ರದ ಬಿಗ್ ಡ್ಯಾಡಿ ಟೀಸರ್ ವಿಶೇಷತೆ ಏನು?

ಚಿತ್ರದಲ್ಲಿ ನಾಲ್ಕು ರೀತಿಯ ಪಾತ್ರಗಳು ಬರುತ್ತವೆ. ಈ ಪೈಕಿ ಬಿಗ್‌ ಡ್ಯಾಡಿ ಎಂಬುದು ಒಂದು. ಇದು ಚಿತ್ರದಲ್ಲಿ ಬರುವ ಒಂದು ಶೇಡ್‌ನ ಪಾತ್ರ. ಈ ಪಾತ್ರಕ್ಕೆ ಮೊದಲು ಬೇರೆ ಹೆಸರು ಇಟ್ಟಿದ್ದರಂತೆ. ಎಡಿಟಿಂಗ್ ಸಂದರ್ಭದಲ್ಲಿ ನೋಡಿದಾಗ ಪಾತ್ರಕ್ಕೆ ಬಿಗ್‌ ಡ್ಯಾಡಿ ಎನ್ನುವ ಹೆಸರಿಟ್ಟಿದ್ದಾರೆ. ನನಗೂ ಇದು ಸರ್ಪ್ರೈಸ್. ಬಿಗ್‌ ಡ್ಯಾಡಿ ಎಂದರೆ ಏನು ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು.

ಈ ಚಿತ್ರದಲ್ಲಿ ಅನುಪಮ್‌ ಖೇರ್ ಜತೆಗೆ ನಟಿಸಿದ್ದು ಹೇಗನಿಸುತ್ತಿದೆ?

ತುಂಬಾ ಖುಷಿ ಆಗುತ್ತಿದೆ. ಶೂಟಿಂಗ್‌ನಲ್ಲಿದ್ದಾಗ ಅನುಪಮ್ ಅವರು ‘ಶಿವು ನಿಮ್ಮ ನಗು ಚೆನ್ನಾಗಿರುತ್ತದೆ. ಯು ಹ್ಯಾವ್ ಗುಡ್ ಸ್ಮೈಲ್’ ಎಂದು ಮೆಚ್ಚಿಕೊಂಡರು.

ಯಾವಾಗ ಘೋಸ್ಟ್ ತೆರೆಗೆ ಬರಲಿದೆ?

ದಸರಾ ಸಂಭ್ರಮಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ. ತುಂಬಾ ಚೆನ್ನಾಗಿ ಬಂದಿದೆ. ನಿರ್ದೇಶಕ ಶ್ರೀನಿ, ನಿರ್ಮಾಪಕ ಸಂದೇಶ ನಾಗರಾಜ್‌ ಅವರು ಯಾವುದಕ್ಕೂ ಕೊರತೆ ಮಾಡಿಲ್ಲ.

ಚಿತ್ರರಂಗದಲ್ಲಿ ಏನೇ ಸಮಸ್ಯೆಗಳಾದರೂ ನಿಮ್ಮ ಕಡೆ ನೋಡುತ್ತಾರೆ. ಸದ್ಯದ ಚಿತ್ರರಂಗದ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ನಾನು ಒಬ್ಬನೇ ಎಲ್ಲವನ್ನೂ ಮಾಡಕ್ಕೆ ಆಗಲ್ಲ. ನಾನು ಎಂಬುದಕ್ಕಿಂತ ನಾವು ಎಲ್ಲರೂ ಸೇರಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ನೀವು ಕೇಳಿದಂತೆ ಸದ್ಯ ಚಿತ್ರರಂಗದಲ್ಲಿ ಹುಟ್ಟಿಕೊಂಡ ವಿವಾದ- ಜಗಳದ ಬಗ್ಗೆ ಒಂದು ವಾರದಲ್ಲಿ ಒಳ್ಳೆಯ ಸುದ್ದಿ ಬರಲಿದೆ. ನಾವೆಲ್ಲ ಸೇರಿ ಚರ್ಚೆ ಮಾಡಿದ್ದೇವೆ.

ಹಣ ಗಂಟುಕಟ್ಟಿ ಇಟ್ಟುಕೊಳ್ಳುವ ಬುದ್ಧಿ ಇಲ್ಲ, ಅಪ್ಪಾಜಿನೇ ಗೀತಾಗೆ ಕೆಲಸ ಹೇಳಿದ್ದು: ಶಿವರಾಜ್‌ಕುಮಾರ್

ತಮಿಳು ನಿರ್ದೇಶಕನ ಚಿತ್ರದಲ್ಲಿ ಶಿವಣ್ಣ

ತೆಲುಗು ನಿರ್ಮಾಪಕ ಸುಧೀರ್‌ ಚಂದ್ರ ಪದಿರಿ ನಿರ್ಮಾಣದ, ತಮಿಳು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಕಾನ್ಸೆಪ್ಟ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಇದೊಂದು ಆ್ಯಕ್ಷನ್ ಡ್ರಾಮಾವಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಈ ಚಿತ್ರ ರೂಪುಗೊಳ್ಳಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು