90 ಬಿಡಿ ಮನೀಗ್‌ ನಡಿ; ನಾನೇ ಸರ್ ಹೀರೋ: ವೈಜನಾಥ್ ಬಿರಾದರ್ ಸಂದರ್ಶನ್

By Kannadaprabha NewsFirst Published Jun 30, 2023, 8:58 AM IST
Highlights

ಉಮೇಶ್ ಬಾದರದಿನ್ನಿ, ನಾಗರಾಜ್ ಅರೆಹೊಳೆ ನಿರ್ದೇಶನದ, ರತ್ನಮಾಲಾ ಬಾದರದಿನ್ನಿ ನಿರ್ಮಾಣದ 90 ಹೊಡಿ ಮನೀಗ್ ನಡಿ ಸಿನಿಮಾ ಜೂನ್ 29ರಂದು ಬಿಡುಗಡೆ ಆಗಿದೆ. ಇದು ಪೋಷಕ ನಟ ವೈಜನಾಥ್ ಬಿರಾದರ್ ನಟನೆಯ 500ನೇ ಸಿನಿಮಾ. ಈ ಚಿತ್ರದ ಕುರಿತು ಬಿರಾದಾರ್ ಸಂದರ್ಶನ್. 

ಆರ್‌. ಕೇಶವಮೂರ್ತಿ

ಚಿತ್ರದ ಹೆಸರಿನಲ್ಲೇ ನೈಂಟಿ ಅಂತಿದೆ, ಇದು ಎಣ್ಣೆ ಘಾಟಿನ ಚಿತ್ರವಾ?

ಅಯ್ಯೋ ಇದು ಅಂಥ ಕತೆಯಲ್ಲ. ಎಣ್ಣೆ ಬಿಡಿಸುವ ಸಿನಿಮಾ ಇದು. ಯಾಕೆ ಎಣ್ಣೆ ಬಿಡಬೇಕು ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ.

ಎಣ್ಣೆ ಕುಡಿಯಬೇಡಿ ಅಂತ ಹೇಳಕ್ಕೆ ಸಿನಿಮಾ ಮಾಡಿದ್ರಾ?

ಮದ್ಯಪಾನ ತಡೆಯುವ ಕಾರ್ಯಕ್ರಮಗಳು ತುಂಬಾ ಇವೆ. ಆದರೆ, ಅದನ್ನು ಮನರಂಜನೆಯಾಗಿ ಹೇಳಿದರೆ ಹೇಗಿರುತ್ತದೆ, ಒಂದು ಥ್ರಿಲ್ಲರ್ ನೆರಳಿನಲ್ಲಿ ಕತೆ ರೂಪದಲ್ಲಿ ಹೇಳಿದರೆ ಹೇಗಿರುತ್ತದೆ ಎನ್ನುವ ಆಲೋಚನೆಯಲ್ಲಿ ಮೂಡಿರುವ ಸಿನಿಮಾ ಇದು.

ಕರಾವಳಿಯ ರಾಜಕೀಯ ವ್ಯಾಪಾರ ಬಿಚ್ಚಿಟ್ಟ ಬೇರ: ವಿನು ಬಳಂಜ ಮಾತು

ಇಲ್ಲಿ ನಿಮ್ಮ ಪಾತ್ರ ಏನು?

ನಾನೇ ಸಾರ್ ಹೀರೋ! ಅಂದ್ರೆ ಮುಖ್ಯ ಪಾತ್ರ ನನ್ನದೇ. ನನ್ನ ಪಾತ್ರದ ಮೂಲಕವೇ ಕತೆ ಸಾಗುತ್ತದೆ. ಬೇಕಾದರೆ ಸಿನಿಮಾ ನೋಡಿ ನಿಮಗೂ ಗೊತ್ತಾಗುತ್ತದೆ.

ಯಾವ ರೀತಿ ಕತೆ ಸಾಗುತ್ತದೆ?

ಒಂದು ಕುಟುಂಬ. ಆ ಕುಟುಂಬಕ್ಕೆ ಎದುರಾಗುವ ಸಂಕಷ್ಟಗಳು. ಅದರಿಂದ ಪಾರಾಗುವುದು ಮತ್ತು ಮದ್ಯಪಾನದ ವಿಚಾರಗಳ ಸುತ್ತ ಸಿನಿಮಾ ಸಾಗುತ್ತದೆ. ಜತೆಗೆ ಇಲ್ಲೊಂದು ಕೊಲೆಯಾಗುತ್ತದೆ. ಆ ಕೊಲೆ ಯಾರು ಮಾಡಿದ್ದು ಎಂಬುದು ಸಸ್ಪೆನ್ಸ್.

ನೀವೇ ಈ ಚಿತ್ರಕ್ಕೆ ಹೀರೋ ಅಂದಾಗ ನಿರ್ದೇಶಕರಿಗೆ ನೀವು ಏನು ಹೇಳಿದ್ರಿ?

ನೋಡಿ ಸ್ವಾಮಿ, ಹೇಗೋ ನನ್ನ ಜೀವನ ನಡೆಯುತ್ತಿದೆ. ನೀವು ನನ್ನ ಮೇಲೆ ದುಡ್ಡು ಹಾಕಿ ಸಿನಿಮಾ ಮಾಡಿ ಕಷ್ಟಕ್ಕೆ ಸಿಕ್ಕಿಕೊಳ್ಳಬೇಡಿ. ನನ್ನ ಹೀರೋ ಮಾಡಿದರೆ ನಿಮಗೆ ಏನ್ ಸಿಗುತ್ತದೆ ಅಂತ ಹೇಳಿದೆ.

ಅರೆ ಬಟ್ಟೆಹಾಕಲ್ಲ, ಒತ್ತಡಕ್ಕೆ ಮಣಿಯಲ್ಲ: ಸುಪ್ರೀತಾ ಸತ್ಯನಾರಾಯಣ್‌

ಈ ಸಿನಿಮಾ ಯಾಕೆ ನೋಡಬೇಕು?

ಆರೋಗ್ಯವಂತ ಜೀವನಕ್ಕಾಗಿ. ಮನರಂಜನೆಗಾಗಿ. ಕೆಟ್ಟ ಚಟಗಳಿಂದ ದೂರ ಉಳಿದರೆ ಸಿಗುವ ಲಾಭಗಳೇನು ಎಂಬುದನ್ನು ತಿಳಿಯಲು. ಜತೆಗೆ ಹೆಣ್ಣು ಮಕ್ಕಳು ಈ ಚಿತ್ರವನ್ನು ನೋಡಲೇಬೇಕು. ಯಾಕೆ ಎಂಬುದಕ್ಕೆ ಸಿನಿಮಾದಲ್ಲಿ ಉತ್ತರ ಇದೆ. ಈ ಸಿನಿಮಾದಿಂದ ನಾಲ್ಕು ಕುಟುಂಬಗಳು ಸರಿ ಹೋದರೆ ಅದೇ ನಮ್ಮ ಚಿತ್ರದ ಸಾರ್ಥಕ.

ಈ ಸಿನಿಮಾ ನಂತರ ನಿಮ್ಮನ್ನು ಸೋಲೋ ಹೀರೋ ಅನ್ನಬಹುದಾ?

ಅದೇನೋ ನನಗೆ ಗೊತ್ತಿಲ್ಲ ಸ್ವಾಮಿ. ಹೀರೋ, ವಿಲನ್ ಏನು ಬೇಕಾದರೂ ಅಂದುಕೊಳ್ಳಿ. ನಾನು ಕಲಾವಿದ. ನನಗೆ ಪಾತ್ರ ಕೊಟ್ಟರೆ, ನಾನು ಅದಕ್ಕೆ ಜೀವ ತುಂಬುತ್ತೇನೆ.\B\B

ನಿಮಗೆ ಈ ಸಿನಿಮಾ ಕೊಟ್ಟ ಖುಷಿಗಳೇನು?

ಇದು ನನ್ನ 500ನೇ ಸಿನಿಮಾ. ಇಷ್ಟು ಸಿನಿಮಾಗಳಲ್ಲಿ ನಟಿಸಿದ ನನಗೆ ಇದೇ ಮೊದಲ ಬಾರಿಗೆ ಕಟೌಟ್ ಹಾಕಿದ್ದಾರೆ. ಕಟೌಟ್ ಹಾಕಿಸಿಕೊಂಡಿರುವ ಗಾಂಧಿನಗರದಲ್ಲಿ ಒಂದು ಇಡ್ಲಿ ತಿನ್ನಕ್ಕೆ ದುಡ್ಡಿಲ್ಲದೆ ಪರದಾಡಿದವನು. ಈಗ ನನ್ನ ಕಟೌಟ್ ನೋಡಿ ನನಗೇ ಅಚ್ಚರಿ ಆಗುತ್ತಿದೆ.

click me!