ಒಂದು ಗೆಲುವು ನನ್ನ ವರ್ಷ ಪೂರ್ತಿ ಬ್ಯುಸಿಯಾಗಿಸಿತು: ಖುಷಿ

Kannadaprabha News   | Asianet News
Published : Aug 28, 2020, 08:48 AM ISTUpdated : Aug 28, 2020, 09:17 AM IST
ಒಂದು ಗೆಲುವು ನನ್ನ ವರ್ಷ ಪೂರ್ತಿ ಬ್ಯುಸಿಯಾಗಿಸಿತು: ಖುಷಿ

ಸಾರಾಂಶ

ದಿಯಾ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹತ್ತಿರವಾದ ನಟಿ ಖುಷಿ. ದಿಯಾ ನಂತರ ಹೇಗಿದೆ ಅವರ ಸಿನಿಮಾ ಪಯಣ ಎಂಬುದನ್ನು ಅವರೇ ಮಾತನಾಡಿದ್ದಾರೆ.

ಆರ್‌ ಕೇಶವಮೂರ್ತಿ

ತುಂಬಾ ಸಿನಿಮಾಗಳಲ್ಲಿ ನಿಮ್ಮ ಹೆಸರು ಸದ್ದು ಮಾಡುತ್ತಿದೆಯಲ್ಲ?

ಅದು ದಿಯಾ ಸಿನಿಮಾ ಕೊಟ್ಟಸಕ್ಸಸ್‌. ಈ ಮಟ್ಟಕ್ಕೆ ನನ್ನ ಗುರುತಿಸುತ್ತಾರೆ ಅಂತ ನಾನೂ ಅಂದಾಜು ಮಾಡಿರಲಿಲ್ಲ. ಒಂದೇ ಒಂದು ಚಿತ್ರ ನನ್ನ ವರ್ಷ ಪೂರ್ತಿ ಬ್ಯುಸಿಯಾಗಿಸಿತು. ಮುಂದಿನ ವರ್ಷ ಜನವರಿವರೆಗೂ ಕೆಲಸ ಮಾಡುವಷ್ಟುಅವಕಾಶಗಳು ಬಂದಿವೆ.

ಏಕಾಂತದಲ್ಲಿ ರೆಟ್ರೋ ಸಾಂಗ್ ಕೇಳುವ ಖುಷಿ ಇನ್‌ಸ್ಟಾಗ್ರಾಂನಲ್ಲಿ ಎಷ್ಟು ಆ್ಯಕ್ಟೀವ್ ನೋಡಿ! 

ದಿಯಾ ಚಿತ್ರದ ಯಶಸ್ಸನ್ನು ನೀವು ಹೇಗೆ ನೋಡುತ್ತೀರಿ?

ಹೊಸ ನಟ- ನಟಿಯರಿಗೆ ಹೊಸ ಜೀವನ ಕೊಟ್ಟಸಿನಿಮಾ, ಅಮೆಜಾನ್‌ ಪ್ರೈಮ್‌ ನಲ್ಲಿ ನಂ.1 ಸ್ಥಾನ ಪಡೆದುಕೊಂಡ ಚಿತ್ರ, ನೋಡಿ ಪ್ರತಿಯೊಬ್ಬರಿಗೂ ಹತ್ತಿರವಾದ ಕತೆಯನ್ನು ಹೇಳಿದ ಸಿನಿಮಾ. ಸಿನಿಮಾ ಮಾಡುವಾಗಲೇ ಪ್ಯಾನ್‌ ಇಂಡಿಯಾ ಎಂದು ಚಿತ್ರತಂಡವರೇ ಹೇಳುವುದು ಮಾಮೂಲಿ. ಆದರೆ, ನಮ್ಮ ಚಿತ್ರವನ್ನು ಪ್ರೇಕ್ಷಕರೇ ಪ್ಯಾನ್‌ ಇಂಡಿಯಾ ಚಿತ್ರ ಮಾಡಿದರು. ಅಷ್ಟರ ಮಟ್ಟಿಗೆ ಇಡೀ ದೊಡ್ಡ ಮಟ್ಟದಲ್ಲಿ ಈ ಚಿತ್ರ ಎಲ್ಲರಿಗೂ ತಲುಪಿದೆ.

ಈಗ ಎಷ್ಟುಚಿತ್ರಗಳಿಗೆ ನಾಯಕಿ ಆಗಿದ್ದೀರಿ?

ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಮಧು ನಿರ್ದೇಶನದ ನಕ್ಷೆ, ರಂಗಿತರಂಗ ಎಚ್‌ಕೆ ಪ್ರಕಾಶ್‌ ನಿರ್ಮಾಣದ ಚಿತ್ರ. ಇದಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ರೀಮಿಯರ್‌ ಪದ್ಮಿನಿ ಚಿತ್ರದಲ್ಲಿ ನಟಿಸಿದ್ದ ವಿವೇಕ್‌ ಸಿಂಹ ಈ ಚಿತ್ರದ ನಾಯಕ. ದರ್ಶನ್‌ ಅಪೂರ್ವ ನಿರ್ದೇಶನದ ಚಿತ್ರ. ಇದಕ್ಕೂ ಹೆಸರಿಡಬೇಕಿದೆ. ಆ ದಿನಗಳು ಚೇತನ್‌ ನಟನೆಯ ಮಾರ್ಗ ಸಿನಿಮಾ.

ಯಾವಾಗ ಇದೆಲ್ಲ ಶೂಟಿಂಗ್‌ ಹೋಗಲಿದೆ, ಪಾತ್ರಗಳು ಹೇಗಿದೆ?

ನಕ್ಷೆ ಸೆಪ್ಟೆಂಬರ್‌ ತಿಂಗಳಲ್ಲಿ ಶೂಟಿಂಗ್‌ ಮಾಡಲಿದ್ದೇವೆ. ಮಾರ್ಗ ಚಿತ್ರಕ್ಕೆ ಮುಹೂರ್ತ ಆಗಿರುವುದರಿಂದ ಸದ್ಯದಲ್ಲೇ ಶೂಟಿಂಗ್‌ಗೆ ಹೊರಡಲಿದೆ. ಉಳಿದೆರಡು ಚಿತ್ರಗಳು ಇನ್ನಷ್ಟೇ ನಿರ್ಧಾರ ಆಗಬೇಕಿದೆ. ವಿಭಿನ್ನ ರೀತಿಯ ಪಾತ್ರಗಳು ಬಂದಿವೆ. ಯಾಕೆಂದರೆ ದಿಯಾ ಚಿತ್ರದಲ್ಲಿ ನಾನು ತುಂಬಾ ಇನ್ನೋಸೆಂಟ್‌ ಪಾತ್ರ ಮಾಡಿದ್ದೆ. ಮುಂದೆ ಎಲ್ಲರೂ ಅದೇ ರೀತಿಯ ಪಾತ್ರ ಮಾಡಿಸುತ್ತಾರೆ ಅಂದುಕೊಂಡಿದ್ದೆ. ಒಂದು ಚಿತ್ರದಲ್ಲಿ ರಿಪೋರ್ಟರ್‌ ಪಾತ್ರ, ಮತ್ತೊಂದು ಚಿತ್ರದಲ್ಲಿ ಕಾಲೇಜು ಹುಡುಗಿ, ಇನ್ನೊಂದು ಚಿತ್ರದಲ್ಲಿ ಸಮಸ್ಯೆಗಳನ್ನು ಎದುರಾದಾಗ ಸ್ಮಾರ್ಟ್‌ ಆಗಿ ಯೋಚಿಸುವ ಹುಡುಗಿ ಹೀಗೆ ಬೇರೆ ಬೇರೆ ಜಾನರ್‌ ಪಾತ್ರಗಳು ಬರುತ್ತಿವೆ. ಯಾರೂ ಕೂಡ ಒಂದೇ ರೀತಿಯ ಪಾತ್ರಕ್ಕೆ ಬ್ರಾಂಡ್‌ ಮಾಡುತ್ತಿಲ್ಲ. ಇದು ನನ್ನ ಅದೃಷ್ಟಕೂಡ.

ಸಿಕ್ರೆ ಇಂತಹ ಹುಡ್ಗಿ ಸಿಗ್ಬೇಕಪ್ಪಾ! 'ದಿಯಾ'ನೋಡಿದ್ರೇನೆ 'ಖುಷಿ'!

ಹೊಸಬರ ಚಿತ್ರಗಳೇ ಹೆಚ್ಚು ಒಪ್ಪಿದ್ದೀರಲ್ಲ?

ತುಂಬಾ ಕತೆಗಳು ಕೇಳುತ್ತಿದ್ದೇನೆ. ನನಗೆ ಇಷ್ಟಆಗುವ ಹೊಸತನಿಂದ ಕೂಡಿದ ಕತೆಗಳನ್ನು ಮಾತ್ರ ಒಪ್ಪುತ್ತಿದ್ದೇನೆ. ಬಹುಶಃ ಮುಂದಿನ ವರ್ಷ ಸ್ಟಾರ್‌ ಹೀರೋಗಳ ಜತೆ ನಟಿಸುವ ಅವಕಾಶ ಸಿಗಬಹುದು. ಆದರೆ, ನಾನು ಕೇಳಿದ ಕತೆಗಳ ಪೈಕಿ ಯಾವುದು ನನಗೆ ಕಂಫರ್ಟ್‌ ಅನಿಸುತ್ತದೋ ಅದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಬಂದಿದ್ದೆಲ್ಲ ಚಿತ್ರಗಳನ್ನು ಒಪ್ಪುತ್ತಿಲ್ಲ. ಹೀಗಾಗಿ ಇಲ್ಲಿ ಹೊಸಬರು ಹಳಬರು ಎನ್ನುವುದು ಮುಖ್ಯ ಆಗಲ್ಲ.

ನಿಮಗೆ ಕತೆ ಕೇಳುವಲ್ಲಿ ನೆರವು ಮತ್ತು ಸಲಹೆ ನೀಡುವುದು ಯಾರು?

ನನ್ನ ಗಂಡ ರಾಕೇಶ್‌ ಹಾಗೂ ದಿಯಾ ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ. ಮದುವೆ ಆದ ಮೇಲೆ ಸಿನಿಮಾಗಳಲ್ಲಿ ನಾಯಕಿ ಆಗಲು ಸಾಧ್ಯವಿಲ್ಲ, ಅವಕಾಶಗಳು ಸಿಗಲ್ಲ ಅಂತಾರೆ. ಆದರೆ, ನನ್ನ ವಿಚಾರದಲ್ಲಿ ಇದು ಸುಳ್ಳಾಗಿದೆ. ನನಗೆ ಮದುವೆ ಆಗಿದೆ. ಒಂದು ಮಗುವಿನ ತಾಯಿ ಅಂತ ಎಲ್ಲರಿಗೂ ಗೊತ್ತಿದ್ದರೂ ಅವಕಾಶಗಳು ಕೊಡುತ್ತಿದ್ದಾರೆ. ನನ್ನ ಪತಿ ಕೂಡ ನನಗೆ ಬೆಂಬಲವಾಗಿ ನಿಂತಿದ್ದಾರೆ.

ದಿಯಾ `ಖುಷಿ'ಯಾಗಿ ಮನಸು ತೆರೆದಾಗ

ನಿಮ್ಮ ಮೊದಲ ಚಿತ್ರ ದಿಯಾ ಅಲ್ಲವಲ್ಲ?

ಹೌದು. ದಿ ಗ್ರೇಟ್‌ ಸೋಡಾಬುಡ್ಡಿ ಎನ್ನುವ ಚಿತ್ರದಲ್ಲಿ ನಟಿಸಿದ್ದೇನೆ. ದಿಯಾ ಚಿತ್ರಕ್ಕೆ ಬರು ಮುನ್ನ ಕಿರು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದೇನೆ. ದಿಯಾ ಸಿನಿಮಾ ಸೆಟ್ಟೇರಿದಾಗ ಪ್ರೀತಿಸುತ್ತಿದ್ದ ರಾಕೇಶ್‌ ಅವರನ್ನು ಮದುವೆ ಆದೆ. ದಿಯಾ ಸಿನಿಮಾ ಸಿನಿಮಾ ಬಿಡುಗಡೆ ಹೊತ್ತಿಗೆ ಒಂದು ಮಗುವಿನ ತಾಯಿ ಆದೆ. ಹೀಗಾಗಿ ನನಗೆ ದಿಯಾ ವೃತ್ತಿಪರವಾಗಿ, ವೈಯಕ್ತಿಕವಾಗಿ ವಿಶೇಷ ಸಿನಿಮಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು