ಸಮಯ ಇರುವುದೇ ಸದುಪಯೋಗಕ್ಕೆ- ಶರಣ್

By Suvarna News  |  First Published Aug 27, 2020, 7:31 PM IST

ಸದಾ ಸಿನಿಮಾದ ಬಗ್ಗೆ ಮಾತ್ರ ಯೋಚಿಸುವ ಅಪರೂಪದ  ಕಲಾವಿದರಲ್ಲಿ ಶರಣ್ ಕೂಡ ಒಬ್ಬರು. ಅದರಾಚೆಗಿನ ಶೋಗಳಾಗಲೀ, ವ್ಯವಹಾರಗಳಲ್ಲಾಗಲೀ ಅವರು ಕಾಣಿಸಿದ್ದೇ ಇಲ್ಲ. ಅಂಥ ಶರಣ್ ಸಿನಿಮಾರಂಗವೇ ಸುಮ್ಮನಾದಾಗ ಮನೆಯಲ್ಲಿದ್ದುಕೊಂಡು ಮಾಡಿದ್ದೇನು ಎನ್ನುವ ಕುತೂಹಲಕರ ಸಂಗತಿಗೆ ಇಲ್ಲಿ ಉತ್ತರಿಸಿದ್ದಾರೆ.
 


ಶರಣ್ ವರ್ಷಕ್ಕೆ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡರೆ ಅದೇ ಹೆಚ್ಚು. ಹಾಗಂತ ಬೇರೆ ಯಾವುದೇ ಕೆಲಸದಲ್ಲಿ ತೊಡಗಿಸಿಕೊಂಡವರಲ್ಲ. ಎಲ್ಲರಿಗೂ ತಿಳಿದಿರುವಂತೆ ರಂಗಭೂಮಿಯಿಂದ ಬಂದವರು, ಈಗ ಸಿನಿಮಾ ಉಸಿರಾಗಿಸಿರುವವರು! ಪ್ರತಿಯೊಂದು ಚಿತ್ರಕ್ಕಾಗಿ ಕೂಡ ಒಂದಷ್ಟು ಹೆಚ್ಚೇ ಶ್ರಮ ವಹಿಸುವ ಇವರು ಅದೇ ಕಾರಣದಿಂದಲೇ ಸಮಯೋಚಿತವಾಗಿ ಚಿತ್ರಗಳನ್ನು ಆಯ್ಕೆ ಮಾಡುತ್ತಿರಬಹುದು. ಅದರಲ್ಲಿಯೂ ಒಂದಷ್ಟು ಸಿನಿಮಾಗಳಲ್ಲಿ ದ್ವಿಪಾತ್ರಗಳನ್ನು ನಿರ್ವಹಿಸಿರುವ ಕಾರಣ, ಅದಕ್ಕೂ ಎರಡೆರಡು ಸಿನಿಮಾಗಳ ಸಮಯವನ್ನು ವಿನಿಯೋಗಿಸಬೇಕಾಗಿ ಬಂದಿರಬಹುದು. ಯಾಕೆಂದರೆ ಎರಡೆರಡು ಪಾತ್ರಗಳಲ್ಲಿ ಹೆಣ್ಣಾಗಿ, ಖಳನಾಗಿ ಬೇರೆಯೇ ರೀತಿಯಿಂದ ದೇಹಭಾಷೆಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಗಮನಾರ್ಹ. ಒಟ್ಟಿನಲ್ಲಿ ಒಂದು ಒಳ್ಳೆಯ ಸಿನಿಮಾಕ್ಕಾಗಿ ಎಷ್ಟು ಸಮಯ ಬೇಕಾದರೂ ಮೀಸಲಾಗಿಡಬಲ್ಲಂಥ ಶರಣ್ ಅವರು ಲಾಕ್ಡೌನ್ ಮತ್ತು ಅದರಾಚೆ ಚಿತ್ರೀಕರಣ ಇರದ ಈ ದಿನಗಳನ್ನು ಕಳೆದಯುತ್ತಿರುವುದು ಹೇಗೆ ಎನ್ನುವ ಪ್ರಶ್ನೆಗಳಿಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಂಥ ವಿಚಾರಗಳು ಇಲ್ಲಿವೆ.

- ಶಶಿಕರ ಪಾತೂರು

Latest Videos

undefined

ಶ್ರೀನಿ ಪತ್ನಿಯ ಸಿನಿ ಪುಸ್ತಕ ಪುರಾಣ!

ಮನೆಯೊಳಗೆ ಸೇರಿಕೊಂಡ ದಿನಗಳು ಹೇಗಿದ್ದವು?
ಈಗಲೂ ಮನೆಯಲ್ಲೇ ಇದ್ದೇನೆ. ಸಿನಿಮಾ ಚಿತ್ರೀಕರಣ ನಡೆಯಲಿಲ್ಲ ಎನ್ನುವುದನ್ನು ಬಿಟ್ಟರೆ ಮನೆಯೊಳಗೆ ಸೇರಿಕೊಂಡಿರುವುದು ನನಗೆ ಅಂಥ ವ್ಯತ್ಯಾಸವಾಗಿ ಏನೂ ಅನಿಸಲಿಲ್ಲ. ಯಾಕೆಂದರೆ ನಾನು ನಿತ್ಯ ಶೂಟಿಂಗ್ ಮುಗಿಸಿ ಮನೆಗೇನೇ ಹೋಗುತ್ತಿದ್ದೆ! ಮರುದಿನ ಮನೆಯಿಂದಲೇ ಹೊರಡುತ್ತಿದ್ದೆ. ಈಗ ಶೂಟಿಂಗ್ ಇಲ್ಲ. ಮನೆಯವರೊಂದಿಗೆ ಬೆರೆಯಲು ಸಾಕಷ್ಟು ಸಮಯ ದೊರಕಿತು. ಆದರೂ  ಐದು ತಿಂಗಳ ಕಾಲಾವಧಿ ಸ್ವಲ್ಪ ಹೆಚ್ಚೇ ಆಯಿತು ಎಂದು ಹೇಳಬಹುದು!

`ಪ್ರಾಣಿ' ಪ್ರಿಯೆ ಪದ್ಮಜಾ ರಾವ್ ಪ್ರಾರ್ಥಿಸುವುದೇನು ಗೊತ್ತೇ?!

ಹಾಗಾಗಿ ಸದಾ ಮನೆಯೊಳಗಿದ್ದಾಗ ಪತ್ನಿಯೊಂದಿಗಿನ ಪ್ರೀತಿ ಅಥವಾ ಜಗಳದಲ್ಲಿ ವ್ಯತ್ಯಾಸ ಆಯಿತೇ?
ತುಂಬ ಟ್ರಿಕ್ಕಿ ಪ್ರಶ್ನೆ ಕೇಳ್ತಾ ಇದ್ದೀರ. (ನಗು) ಲಾಕ್ಡೌನ್ ಆದಾಗ ನನಗೂ ಆ ಸಂದೇಹ ಇತ್ತು. ಆದರೆ ಹಾಗೆ ಆಗಿಲ್ಲ. ಥ್ಯಾಂಕ್ಸ್ ಟು ಮೈ ವೈಫ್ ಪಲ್ಲವಿ! (ಮತ್ತೊಮ್ಮೆ ನಗು)ಛೇ ಛೆ ಹಾಗೇನಿಲ್ಲ. ಜಗಳ ಆಡೋಕೂ ಸಮಯ ಬೇಕಲ್ಲ? ನನ್ನ ಪ್ರಕಾರ ಯಾವುದಾದರೂ ಒಂದು ವಿಚಾರವನ್ನೇ ಹಿಡಿದು ಎಳೆದಾಡಿದಾಗ ಮಾತ್ರ ಜಗಳವಾಗುತ್ತದೆ. ಆದರೆ ನನಗೆ ಅಷ್ಟು ಸಮಯವಿಲ್ಲ! ಯಾಕೆಂದರೆ  ನಾನು ಯಾವತ್ತೂ ಸುಮ್ಮನಿದ್ದು ಕಾಲ ಕಳೆದವನಲ್ಲ. ನನ್ನ ವೈಫ್ ಕೂಡ ತುಂಬ ಬ್ಯುಸಿಯಾಗಿರುತ್ತಾಳೆ. ಮಕ್ಕಳಲ್ಲಿ ಕೂಡ ನಾನು ಹೇಳ್ತಾ ಇರುತ್ತೇನೆ, "ನಿನಗೆ ಇಷ್ಟು ಗಂಟೆ ಏನು ಕೆಲಸ ಇಲ್ಲ ಎಂದಾಕ್ಷಣ ನನಗೆ ಹೇಳು. ಆ ಸಮಯವನ್ನು ಹೇಗೆ ಪ್ರಾಡಕ್ಟಿವ್ ಆಗಿ ಕಳೆಯಬೇಕು ಅಂತ ನಾನು ಹೇಳಿಕೊಡುತ್ತೇನೆ" ಅಂತ! ಆದರೆ ನಮ್ಮನೇಲಿ ಅವರು ಕೂಡ ಫ್ರೀ ಇರುವುದಿಲ್ಲ. ಈಗ ಬೇರೆ ಆನ್ಲೈನಲ್ಲಿ ಕ್ಲಾಸಲ್ಲಿಯೂ ಇರುತ್ತಾರೆ. 

ನನಗೆ ರಾಜಕೀಯ-ಪ್ರಜಾಕೀಯ ಎರಡೂ ಬೇಡ ಅಂತಾರೆ ಚೇತನ್!

ನೀವು ನಿಮ್ಮ ಸಮಯವನ್ನು ಹೇಗೆ ಪ್ರಾಡಕ್ಟಿವ್ ಆಗಿ ವಿನಿಯೋಗಿಸಿದಿರಿ?
ನಾನು ಪರಿಚಿತ ನಿರ್ದೇಶಕರಿಂದ ಒಂದಷ್ಟು ಫೋನಲ್ಲೇ ಕತೆ ಕೇಳುವ ಅಭ್ಯಾಸ ಮಾಡಿಕೊಂಡೆ. ಬರಹಗಾರರಿಗೂ ಇದು ಚಿಂತನೆಗೆ ಸಾಕಷ್ಟು ಅವಕಾಶ ಸಿಕ್ಕ ಸಂದರ್ಭವಾದ ಕಾರಣ, ಒಳ್ಳೊಳ್ಳೆಯ ಕತೆಗಳು ಸಿಗುತ್ತಿವೆ. ಇವೆಲ್ಲ ಒಂದು ರೀತಿ ಕ್ರಿಯೇಟಿವ್ ಆಗಿದೆ. ಒಳ್ಳೆಯ ಕತೆ ಕೇಳಿದಾಗ ತುಂಬ ಖುಷಿಯಾಗಿದ್ದೇನೆ. ಹಾಗಂತ ಯಾವುದೂ ಫೈನಲ್ ಆಗಿಲ್ಲ. ಹೀಗೆ ಸಿಕ್ಕ ಸಮಯವನ್ನು ಆದಷ್ಟು ಕ್ರಿಯೇಟಿವ್, ಕನ್ಸ್ಟ್ರಕ್ಟಿವ್ , ಪ್ರಾಡಕ್ಟಿವ್ ಆಗಿ ಮಾಡಬೇಕು. ನೋಡಬೇಕು ಎಂದುಕೊಂಡಿದ್ದ ಒಂದಷ್ಟು ಸಿನಿಮಾಗಳನ್ನು ನೋಡಿದೆ. ಅದರಲ್ಲಿ ನಮ್ಮ ಕನ್ನಡದ `ಲವ್ ಮಾಕ್ಟೇಲ್' ಚಿತ್ರವೂ ಒಂದು. ಕೃಷ್ಣ ಅವರ ನಟನೆ, ನಿರ್ದೇಶನ ನನಗೆ ತುಂಬಾನೇ ಇಷ್ಟವಾಯಿತು.

ಇನ್ನು ಚಿತ್ರಮಂದಿರಕ್ಕಿಂತ ಜನ ಒಟಿಟಿಯಲ್ಲೇ ಸಿನಿಮಾ ನೋಡುವ ಹವ್ಯಾಸ ಬೆಳೆಸಿಕೊಳ್ಳಬಹುದು ಅನಿಸುತ್ತಿದೆಯೇ?
ಅದೆಲ್ಲ ಸುಳ್ಳು! ನಾನು ಒಬ್ಬ ಕಲಾವಿದನಾಗಿದ್ದುಕೊಂಡೇ  ಥಿಯೇಟರಲ್ಲಿ ಇತರರ ಸಿನಿಮಾ ನೋಡಲು ಕಾಯುತ್ತಿದ್ದೇನೆ. ಇನ್ನು ಸಾಮಾನ್ಯ ಪ್ರೇಕ್ಷಕರಿಗೆ ಆಸಕ್ತಿ ಇರಲ್ವಾ? ಉದಾಹರಣೆಗೆ ನಾನು ಲವ್ ಮಾಕ್ಟೇಲ್ ಸಿನಿಮಾ ಥಿಯೇಟರಲ್ಲೇ ನೋಡಬೇಕು ಅಂತ ಇದ್ದೆ. ಆದರೆ ಅಷ್ಟು ಹೊತ್ತಲ್ಲಿ ಲಾಕ್ಡೌನ್ ಆಯ್ತು. ಚಿತ್ರ ಒಟಿಟಿಯಲ್ಲಿ ನೋಡಿದ ನನಗೆ ಥಿಯೇಟರಲ್ಲಿ ನೋಡಿದ ತೃಪ್ತಿ ಖಂಡಿತವಾಗಿ ಸಿಕ್ಕಿಲ್ಲ. ಬದಲಾವಣೆ ಆಗುವುದು ಸಹಜ. ಆದರೆ ಅದು ಸಹಜವಾಗಿಯೇ ಇರಬೇಕು. ಉದಾಹರಣೆಗೆ ಥಿಯೇಟರ್ ಇರುವಾಗಲೇ ಮಾಲ್‌ಗಳು ಬಂತು. ಈಗ ಅವು ನಿಧಾನಕ್ಕೆ ಆವರಿಸುತ್ತಿವೆ. ಅದೇ ರೀತಿ ಒಟಿಟಿ ಕಡೆಗಿನ ಆಸಕ್ತಿ ನಿಧಾನಕ್ಕೆ ಮೂಡಬಹುದೇ ಹೊರತು, ಒಂದು ಕೋವಿಡ್ ಬಂತೆಂಬ ಕಾರಣಕ್ಕೆ ಚಿತ್ರಮಂದಿರಗಳು ನಿರಂತರವಾಗಿ ಮುಚ್ಚಲಾರವು. ಮನುಷ್ಯ ಸಾಮಾಜಿಕ ಜೀವಿ ಎನ್ನುವುದನ್ನು ಅಂದೇ ಅರಿಸ್ಟಾಟಲ್ ಹೇಳಿದ್ದಾನೆ. ಅದುವೇ ಸಾರ್ವಕಾಲಿಕ ಸತ್ಯ. ಇವತ್ತು ಅನಿವಾರ್ಯವಾಗಿ ಸೋಶಿಯಲ್ ಡಿಸ್ಟೆನ್ಸಿಂಗ್ ಮಾಡುವಂತಾಗಿದೆ. ಇಂದು ರಾತ್ರಿ ಕೊರೊನಾ ನಿವಾರಕ ಔಷಧಿ ಇದೆ ಎಂದು ಗೊತ್ತಾದರೂ ನಾಳೆಯೇ ಅಕ್ಕಪಕ್ಕದಲ್ಲಿ ಕುಳಿತು ಚಿತ್ರ ನೋಡಲು ಬರುವ ಸಮೂಹ ನಮ್ಮಲ್ಲಿದೆ.

click me!