ಸಮಾಜಕ್ಕೆ ಕನ್ನಡಿ ಹಿಡಿಯೋಕೆ ಹೊರಟಿದ್ದೇನೆ. ಇದೊಂದು ಎಚ್ಚರಿಕೆ. ಬೆಂಗಳೂರಿನ ಕೆಲವು ಯುವಜನತೆ, ಅದರಲ್ಲೂ 14ರಿಂದ 22 ವರ್ಷದವರು ಎಲ್ಲೋ ದಾರಿ ತಪ್ಪುತ್ತಿದ್ದಾರೆ. ಅದಕ್ಕೆ ಕಾರಣ ಯಾರು, ಕಷ್ಟಗಳೇನು, ಒದ್ದಾಟ ಏನು ಎಂಬುದನ್ನು ತೋರಿಸುತ್ತಿದ್ದೇನೆ ಎಂದರು ದುನಿಯಾ ವಿಜಯ್.
ರಾಜ್
* ಎಲ್ಲೆಲ್ಲೋ ಇರ್ತೀರಿ, ನಟಿಸ್ತೀರಿ, ನಿರ್ದೇಶನ ಮಾಡ್ತೀರಿ. ಜೀವನದ ಹುಡುಕಾಟ ಏನು?
ಬದುಕು ಅಂದ್ರೆ ಏನು ಅಂತ ಹುಡುಕಾಡುತ್ತಿರುತ್ತೇನೆ. ಅದರ ಭಾಗವಾಗಿ ಇದೆಲ್ಲಾ ನಡೆಯುತ್ತದೆ. ಯಾವುದು ತಪ್ಪು, ಯಾವುದು ಸರಿ ಎಂಬೆಲ್ಲಾ ಆಲೋಚನೆಯಲ್ಲೇ ಇರುತ್ತೇನೆ. ನನಗೆ ಎಲ್ಲರೂ ಚೆನ್ನಾಗಿರಬೇಕು ಎಂಬ ಆಸೆ. ಸಮಾನತೆಯಿಂದ ಇರಬೇಕು ಎಂಬ ಹಂಬಲ. ಯಾರಿಗೆ ಏನು ನೋವಾಗುತ್ತದೋ ಎಂಬ ಭಯ, ಆತಂಕ ಇದೆ. ಎಲ್ಲರೂ ನೆಮ್ಮದಿಯಾಗಿದ್ದರೆ ನನಗೂ ಏನೋ ನೆಮ್ಮದಿ.
undefined
* ಭೀಮ ಮೂಲಕ ಏನು ಹೇಳೋಕೆ ಹೊರಟಿದ್ದೀರಿ?
ಸಮಾಜಕ್ಕೆ ಕನ್ನಡಿ ಹಿಡಿಯೋಕೆ ಹೊರಟಿದ್ದೇನೆ. ಇದೊಂದು ಎಚ್ಚರಿಕೆ. ಬೆಂಗಳೂರಿನ ಕೆಲವು ಯುವಜನತೆ, ಅದರಲ್ಲೂ 14ರಿಂದ 22 ವರ್ಷದವರು ಎಲ್ಲೋ ದಾರಿ ತಪ್ಪುತ್ತಿದ್ದಾರೆ. ಅದಕ್ಕೆ ಕಾರಣ ಯಾರು, ಕಷ್ಟಗಳೇನು, ಒದ್ದಾಟ ಏನು ಎಂಬುದನ್ನು ತೋರಿಸುತ್ತಿದ್ದೇನೆ. ಈ ಸಿನಿಮಾವನ್ನು ಪೋಷಕರು, ಮಕ್ಕಳು ನೋಡಬೇಕು. ಯೋಚಿಸಬೇಕು. ಮಕ್ಕಳು ಸುಟ್ಟು ಹೋಗುತ್ತಿದ್ದಾರೆ. ಅದನ್ನು ತಪ್ಪಿಸಬೇಕು. ನಾನೊಂದು ಸಮಸ್ಯೆ ಹಿಡಿದುಕೊಂಡು ಅದನ್ನು ಪರಿಹಾರ ಮಾಡಬೇಕು ಅಂತ ಬಂದಿದ್ದೇನೆ. ನೀವೂ ಬನ್ನಿ. ಸಾಧ್ಯವಾದಷ್ಟೂ ಸರಿ ಮಾಡಬೇಕು. ಮಕ್ಕಳಿಗೆ ಖುಷಿಯ ಬದುಕು ತೋರಿಸಬೇಕು.
ಭೀಮ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ಕರ್ನಾಟಕ ರಿಲೀಸ್: ದುನಿಯಾದಲ್ಲಿ ವಿಜಯ್ ದರ್ಬಾರ್!
* ಹೊಳಹು ಹುಟ್ಟಿದ್ದು ಹೇಗೆ?
ಮಗನ ಬಳಿ ಮಾತನಾಡುತ್ತಿದ್ದಾಗ ಅವನು ಬೈಕ್ ಬಗ್ಗೆ ಸಿನಿಮಾ ಮಾಡು ಅಂದ. ಅವನ ಆಲೋಚನೆಯ ಹಿಂದೆ ಹೋದೆ. ವಿಷಯ ತಿಳಿದುಕೊಳ್ಳುತ್ತಾ ಹೋದಂತೆ ದೊಡ್ಡ ಜಗತ್ತೇ ತೆರೆದುಕೊಂಡಿತು. ಈ ಕತೆ ನಾನು ನೋಡಿದ್ದು. ಕೇಳಿದ್ದು. ಅನುಭವಿಸಿದ್ದು. ನಾನು ಸತ್ಯಕ್ಕೆ ನಿಷ್ಠ. ಸತ್ಯವನ್ನೇ ತೋರಿಸಿದ್ದೇನೆ. ಸ್ವಲ್ಪ ಮನರಂಜನಾತ್ಮಕವಾಗಿ ಹೇಳಿದ್ದೇನೆ.
* ನಿಮ್ಮ ಉದ್ದೇಶ ಏನು?
ನಾನು ಯಾರನ್ನೂ ಬದಲಿಸಲಾರೆ. ಆದರೆ ಸಮಾಜ ಹೀಗಿದೆ ಎಂದು ತೋರಿಸುತ್ತಿದ್ದೇನೆ. ಚರ್ಚೆ ಆಗಿ ಏನಾದರೂ ಬದಲಾವಣೆ ಆದರೆ ತೃಪ್ತಿ. ಇಂಥದ್ದೊಂದು ಸಿನಿಮಾ ಮಾಡಿದ ಸಾರ್ಥಕತೆ ಇದೆ ನನಗೆ.
* ನಿಮ್ಮ ಬದುಕಿನ ಫಿಲಾಸಫಿ ಏನು?
ಪ್ರತೀ ದಿನ ಕಳೆದಾಗ ನಾವು ಸಾವಿಗೆ ಹತ್ತಿರವಾಗುತ್ತಿದ್ದೇವೆ ಎಂದು ಅರ್ಥವಾಗಿದ್ದರೆ ಮಾತ್ರ ನಾವು ತುಂಬಾ ಚೆನ್ನಾಗಿ ಬದುಕಬಹುದು. ಮನುಷ್ಯರಲ್ಲಿ ಸಣ್ಣದೊಂದು ವೈರಾಗ್ಯ ಇರಬೇಕು. ವೈರಾಗ್ಯ ಇದ್ದಾಗಲೇ ನಾವು ನೆಲದ ಮೇಲೆ ಇರುವುದಕ್ಕೆ ಸಾಧ್ಯ. ಸುಲಭವಾಗಿ ನಡಿಯೋಕೆ ಸಾಧ್ಯ. ಇನ್ನೊಬ್ಬರ ನೆಮ್ಮದಿ ಬಯಸಬೇಕು, ಆ ನೆಮ್ಮದಿಯಲ್ಲಿ ನಮಗೂ ನೆಮ್ಮದಿ ದೊರೆಯುತ್ತದೆ.
ಪ್ಯಾನ್ ಇಂಡಿಯಾ ತುಂಬೆಲ್ಲಾ ಮಾರ್ಟಿನ್ ಚಂಡಮಾರುತ: ಮೂರೇ ದಿನದಲ್ಲಿ ದಾಖಲೆಗಳ ಮಹಾ ಶೂರನಾದ ಧ್ರುವ ಸರ್ಜಾ
ಭೀಮ ಚಿತ್ರ ಬುಕ್‌ಮೈಶೋದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಹಲವಾರು ಶೋಗಳು ಹೌಸ್‌ಫುಲ್ ಆಗಿವೆ. ನೈಜತೆಗೆ ಹತ್ತಿರವಿರುವ ಕತೆ, ಅಪರೂಪದ ಕಲಾವಿದರು ಇರುವ ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ನನಗಿದೆ. ಅಣ್ಣನಂತೆ ಇರುವ ವಿಜಯ್ ಈ ಸಿನಿಮಾವನ್ನು ಸೊಗಸಾಗಿ ರೂಪಿಸಿದ್ದಾರೆ.
- ಕೃಷ್ಣ ಸಾರ್ಥಕ್, ನಿರ್ಮಾಪಕ