ಈಗ ಅವರನ್ನು ಕ್ರೌಡ್ ಪುಲ್ಲಿಂಗ್ ಆಡಿಯನ್ಸ್ ಆಗಿಸಿದ್ದೇವೆ. ಅದರ ಫಲವೇ ಒಳ್ಳೆಯ ಚಿತ್ರಗಳ ಸೋಲು. ಫ್ರೀ ಟಿಕೆಟ್ ಕೊಟ್ಟು ಪ್ರೇಕ್ಷಕರನ್ನು ಕರೆಸುವವರು ಕಂಡರೆ ಎಕ್ಕಡದಲ್ಲಿ ಹೊಡೆಯಬೇಕು.
ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಬರುತ್ತಿಲ್ಲ ಯಾಕೆ ಎಂಬುದನ್ನು ನಿರ್ದೇಶಕ ಅರುಣ್ ಅಮುಕ್ತ ತಮ್ಮ ಅಳಲು ತೋಡಿಕೊಂಡಿದ್ದಾರೆ.
1. ದೇವ್ರಾಣೆಗೂ ನಾನು ಸಿನಿಮಾ ಮಾಡಲ್ಲ?
ನಾನು ಇನ್ನು ಮುಂದೆ ದೇವ್ರಾಣೆಗೂ ಕನ್ನಡ ಸಿನಿಮಾ ಮಾಡಲ್ಲ. ಇಲ್ಲಿಗೆ ಸಾಕು. ನಾನು ನಿರ್ಮಾಪಕರಿಗೆ ಈ ಮೂಲಕ ಕ್ಷಮೆ ಕೇಳುತ್ತಿದ್ದೇನೆ. ಈಗ ಕನ್ನಡ ಸಿನಿಮಾ ಮಾಡಬೇಕು ಅಂದರೆ ಭಯ ಆಗುತ್ತಿದೆ. ನಾವು ಸಿನಿಮಾ ಮಾಡೋದು ಪ್ರೇಕ್ಷಕರಿಗಾಗಿ. ಆದರೆ, ಅವರೇ ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಕನ್ನಡ ಸಿನಿಮಾ ನೋಡುತ್ತಿಲ್ಲ ಎಂದ ಮೇಲೆ ಯಾರಿಗಾಗಿ ಸಿನಿಮಾ ಮಾಡೋದು. ಸಿನಿಮಾ ಮಾಡಿ ಕೋಟ್ಯಾಂತರ ರುಪಾಯಿ ಕಳೆದುಕೊಳ್ಳುವುದಕ್ಕೆ ನನಗೆ ಧೈರ್ಯ ಇಲ್ಲ.
undefined
2. ಫ್ರೀ ಟಿಕೆಟ್ ಕೊಡೋರು ಸಿಕ್ಕರೆ ಎಕ್ಕಡದಲ್ಲಿ ಹೊಡೀತೀನಿ?
ಒಂದು ಒಳ್ಳೆಯ ಸಿನಿಮಾ ಸೋಲಕ್ಕೆ ಕಾರಣ ಫ್ರೀ ಟಿಕೆಟ್ ಹಂಚಿಕೆಯಿಂದ. ಕ್ರೌಡ್ ಪುಲ್ಲಿಂಗ್ ಮಾಡಬೇಕು ಎನ್ನುವ ಕಾರಣಕ್ಕೆ ಕಾಲೇಜು ಹುಡುಗ- ಹುಡುಗಿಯರಿಗೆ ಫ್ರೀ ಟಿಕೆಟ್ ಕೊಟ್ಟು ಕರೆಸುತ್ತಾರೆ. ಉಚಿತವಾಗಿ ಸಿಗೋ ಟಿಕೆಟ್‌ಗಳಲ್ಲಿ ಕೆಟ್ಟ ಸಿನಿಮಾಗಳನ್ನು ನೋಡುವವರು ಒಳ್ಳೆಯ ಚಿತ್ರಗಳನ್ನು ದುಡ್ಡು ಕೊಟ್ಟು ನೋಡಕ್ಕೆ ಹೇಗೆ ಬರುತ್ತಾರೆ? ಯಾವುದೇ ಜಾನರ್ ಸಿನಿಮಾ ಬಂದರು ಮೊದಲ ದಿನದ ಪ್ರೇಕ್ಷಕರು ಕಾಲೇಜು ವಿದ್ಯಾರ್ಥಿಗಳೇ. ಈಗ ಅವರನ್ನು ಕ್ರೌಡ್ ಪುಲ್ಲಿಂಗ್ ಆಡಿಯನ್ಸ್ ಆಗಿಸಿದ್ದೇವೆ. ಅದರ ಫಲವೇ ಒಳ್ಳೆಯ ಚಿತ್ರಗಳ ಸೋಲು. ಫ್ರೀ ಟಿಕೆಟ್ ಕೊಟ್ಟು ಪ್ರೇಕ್ಷಕರನ್ನು ಕರೆಸುವವರು ಕಂಡರೆ ಎಕ್ಕಡದಲ್ಲಿ ಹೊಡೆಯಬೇಕು.
Vidyarthi Vidyarthiniyare Film Review: ಹಾದಿ ತಪ್ಪಿದವರಿಗೆ ಎಚ್ಚರಿಕೆಯ ಗಂಟೆ, ಕಾಣದ ಕೈಯೊಂದು ಆಟ
3. ಕೈ ಮುಗಿಯಬೇಕಾ, ಕಾಲು ಹಿಡಿಯಬೇಕಾ?
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಮೂರು ವರ್ಷಗಳ ಶ್ರಮ. 150 ಸಿಂಗಲ್ ಸ್ಕ್ರೀನ್, 25 ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಅಂದುಕೊಂಡಂತೆ ರಿಸಲ್ಟ್ ಬಂದಿಲ್ಲ. ಸಿನಿಮಾ ನೋಡಿದವರು ಚೆನ್ನಾಗಿದೆ ಎನ್ನುತ್ತಿದ್ದಾರೆ. ಆದರೆ, ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ಉಳಿಸಿಕೊಳ್ಳುವುದಕ್ಕೆ ಬೇಕಾದ ಕನಿಷ್ಠ ಸಂಖ್ಯೆಯ ಪ್ರೇಕ್ಷಕರು ಇಲ್ಲ. ಸಿನಿಮಾ ಮಾಡಿದ ಖುಷಿ ಇಲ್ಲ. ಎಲ್ಲಾ ಚಿತ್ರಮಂದಿರಗಳಲ್ಲೂ ಇದೇ ಸ್ಥಿತಿ. ಬಿಡುಗಡೆ ಆಗಿರುವ ಸಿನಿಮಾ ಉಸಿರಾಡುವುದೇ ಕಷ್ಟ ಆಗಿದೆ. ಇದು ನನ್ನೊಬ್ಬನ ಚಿತ್ರದ ಸಮಸ್ಯೆ ಅಲ್ಲ. ಕಳೆದ ಐದಾರು ತಿಂಗಳುಗಳಿಂದ ಕನ್ನಡದ ಎಲ್ಲಾ ಸಿನಿಮಾಗಳ ಸಮಸ್ಯೆ ಇದೇ ರೀತಿ ಆಗಿದೆ.
4. ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಶತ್ರು!
ಪ್ರತಿ ವಾರ 5 ರಿಂದ 6 ಸಿನಿಮಾಗಳು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ ಪರಭಾಷೆ ಚಿತ್ರಗಳಿಗೆ ಚಿತ್ರಮಂದಿರಗಳನ್ನು ಕೊಟ್ಟಿದ್ದೇವೆ. ಪ್ರತಿ ವಾರ ತೆರೆಗೆ ಬರುವ ಕನ್ನಡ ಚಿತ್ರಗಳ ನಡುವೆಯೇ ಫೈಟ್ ನಡೆಯುತ್ತಿದೆ. ಯಾರೂ ಪರಭಾಷೆಗಳಿಂದ ಆಗುತ್ತಿರುವ ಥಿಯೇಟರ್ ಸಮಸ್ಯೆ, ಪ್ರೇಕ್ಷಕರ ಕೊರತೆ ಬಗ್ಗೆ ಮಾತನಾಡುತ್ತಿಲ್ಲ. ಬೇರೆ ಭಾಷೆಯ ಚಿತ್ರಗಳು ರಾಜಾರೋಷವಾಗಿ ಪ್ರದರ್ಶನ ಆಗುತ್ತಿದ್ದರೆ, ಕನ್ನಡ ಚಿತ್ರಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿವೆ. ಇದು ಕನ್ನಡ ಚಿತ್ರರಂಗದ ಸ್ಥಿತಿ.
5. ಬಡವರಿಗೆ ಇಲ್ಲಿ ಜಾಗ ಇಲ್ಲ?
ಪ್ರತಿ ವರ್ಷ 150 ಮಂದಿ ಹೊಸ ಹೀರೋಗಳು ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಆದರೆ, ಅವರೆಲ್ಲ ಎಲ್ಲಿದ್ದಾರೆ ಎಂದರೆ ಯಾರಿಗೂ ಗೊತ್ತಿಲ್ಲ. ಹೊಸಬರ ಚಿತ್ರಗಳನ್ನು ನೋಡದೆ, ಹೊಸ ಕಲಾವಿದರನ್ನು ಬೆಳಸದೆ ಹೋದರೆ ಖಂಡಿತ ಚಿತ್ರಮಂದಿರಗಳು ಮಾತ್ರವಲ್ಲ, ಚಿತ್ರರಂಗ ಕೂಡ ಉಳಿಯಲ್ಲ. ನನ್ನ ಪ್ರಕಾರ ಈಗಿನ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಬಡವರ ಮಕ್ಕಳಿಗೆ ಜಾಗ ಇಲ್ಲ.
ಚಂದನ್ ಶೆಟ್ಟಿ ಎದೆಗೆ ಕಾಲಿನಿಂದ ಒದ್ದ ಪ್ರಶಾಂತ್ ಸಂಬರ್ಗಿ: ಇಲ್ಲಿದೆ ಕಾರಣ!
6. ನಮ್ಮ ಜತೆಗೆ ದೊಡ್ಡವರು ನಿಲ್ಲಬೇಕಿದೆ?
ಸ್ಟಾರ್ ಹೀರೋಗಳ ಸಿನಿಮಾಗಳನ್ನು ಮಾಡುವ ದೊಡ್ಡ ದೊಡ್ಡ ನಿರ್ಮಾಪಕರು, ಹೀರೋಗಳು ನಮ್ಮಂಥ ಹೊಸಬರ ಚಿತ್ರಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಯಾಕೆಂದರೆ ಪ್ರತಿ ವರ್ಷ ಬರುವ ಇಂಥ ಹೊಸಬರ ಚಿತ್ರಗಳಿಂದಲೇ ಚಿತ್ರಮಂದಿರಗಳು ನಡೆಯುತ್ತಿವೆ. ನೀವು ದೊಡ್ಡವರು ನಮ್ಮ ಜತೆಗೆ ನಿಲ್ಲದೆ ಹೋದರೆ, ನಮ್ಮಂಥ ಹೊಸಬರ ಚಿತ್ರಗಳು ಉಸಿರಾಡದೆ ಹೋದರೆ ನಿಮ್ಮ ಚಿತ್ರಗಳು ಬರುವ ಹೊತ್ತಿಗೆ ಥಿಯೇಟರ್‌ಗಳು ಇರಲ್ಲ. ಇದು ವಾಸ್ತವ.