
ಆರ್. ಕೇಶವಮೂರ್ತಿ
ಇತ್ತೀಚೆಗೆ ತೆರೆಕಂಡ ‘ಬ್ಯಾಕ್ ಬೆಂಚರ್ಸ್’ ಚಿತ್ರದ ನಟಿ ಮಾನ್ಯ ಗೌಡ ಈಗ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಪ್ರಯಾಣದ ಕುರಿತು ಅವರ ಜೊತೆ ಮಾತುಕತೆ.
* ನಿಮ್ಮ ಹಿನ್ನೆಲೆ ಏನು?
ನಾನು ಬೆಂಗಳೂರಿನ ಹುಡುಗಿ. ಎಲೆಕ್ಟ್ರಿಕಲ್ ಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಓದಿದ್ದೇನೆ. ಓದಿನ ಜತೆಗೆ ಡ್ಯಾನ್ಸ್ ಕಲಿತೆ. ನಮ್ಮ ಕುಟುಂಬದಲ್ಲಿ ಯಾರೂ ಚಿತ್ರರಂಗದಲ್ಲಿ ಇಲ್ಲ. ನಾನೇ ಮೊದಲು.
* ಇಲ್ಲಿಯವರೆಗೂ ನೀವು ನಟಿಸಿರುವ ಚಿತ್ರಗಳು ಯಾವುದು?
‘ಬ್ಯಾಕ್ ಬೆಂಚರ್ಸ್’ ಹಾಗೂ ಪ್ರಜ್ವಲ್ ದೇವರಾಜ್ ಅವರೊಂದಿಗೆ ‘ವೀರಂ’, ಧನಂಜಯ್ ಅವರ ‘ಮಾನ್ಸೂನ್ ರಾಗ’ ಚಿತ್ರಗಳಲ್ಲಿ ನಟಿಸಿದ್ದೇನೆ.
ಭೀಮ ಸಿನಿಮಾ ಯಾಕೆ ನೋಡಬೇಕು..?: ದುನಿಯಾ ವಿಜಯ್ ಏನ್ ಹೇಳ್ತಾರೆ!
* ನೀವು ಇಷ್ಟ ಪಡುವ ಕನ್ನಡದ ಹೀರೋಗಳು ಯಾರು?
ನಟ ಯಶ್ ಇಷ್ಟ. ಅವರ ಸಾಧನೆ ನನಗೆ ಸ್ಫೂರ್ತಿ. ಸುದೀಪ್ ಅವರ ವ್ಯಕ್ತಿತ್ವ ನನಗೆ ಮಾದರಿ. ಅವರಂತೆಯೇ ಚಿತ್ರರಂಗದಲ್ಲಿ ಪಯಣ ರೂಪಿಸಿಕೊಳ್ಳುವ ಆಸೆ ಇದೆ.
* ಮುಂದಿನ ಚಿತ್ರ ಯಾವುದು?
ತೆಲುಗಿನಲ್ಲಿ ಮಿಸ್ಟರ್ ಕರ್ನಲ್ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸುತ್ತಿದ್ದೇನೆ. ಕನ್ನಡದಲ್ಲೂ ಒಳ್ಳೆಯ ಪಾತ್ರಗಳು ಸಿಗುವ ನಿರೀಕ್ಷೆಯಲ್ಲಿದ್ದೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.