ನಾನು ಒಳ್ಳೆಯ ಆ್ಯಕ್ಟರ್‌ ಆಗಬೇಕು, ಬಾಡಿ ಬಿಲ್ಡರ್‌ ಅಲ್ಲ: ಅಭಿಷೇಕ್ ಅಂಬರೀಶ್‌

By Kannadaprabha NewsFirst Published Nov 24, 2023, 11:35 AM IST
Highlights

ಮೂರು ವರ್ಷಗಳ ಗ್ಯಾಪ್ ಬಳಿಕ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮೂಲಕ ಅಭಿಷೇಕ್ ಅಂಬರೀಶ್ ಪ್ರೇಕ್ಷಕರೆದುರು ಬರುತ್ತಿದ್ದಾರೆ. ದುನಿಯಾ ಸೂರಿ ಅವರೂ ಬಹಳ ಕಾಲದ ಬಳಿಕ ಅಕ್ಷನ್ ಕಟ್ ಹೇಳಿದ ಚಿತ್ರವಿದು. ಸುಧೀರ್‌ ಕೆ ಎಂ ನಿರ್ಮಾಪಕರು. ಸಿನಿಮಾ ಬಗ್ಗೆ ಅಭಿಷೇಕ್ ಮಾತು. 

ಪ್ರಿಯಾ ಕೆರ್ವಾಶೆ

ಸೂರಿ ಅವರ ‘ಬ್ಯಾಡ್‌ ಮ್ಯಾನರ್ಸ್‌’ಗೆ ಹೇಗೆ ಕನೆಕ್ಟ್ ಆದಿರಿ?

ನಿರ್ಮಾಪಕ ಸುಧೀರ್‌ ಈ ವಿಚಾರ ಹೇಳಿದರು. ಸೂರಿ ಅವರ ಜೊತೆಗೆ ಸಿನಿಮಾ ಮಾಡೋದು ಅಂದರೆ ನಾನು ರೆಡಿ ಅಂದೆ. ಒಂದು ಟೀ, ಹತ್ತು ನಿಮಿಷದ ಅವಧಿಯಲ್ಲಿ ಸೂರಿ ಒನ್‌ಲೈನ್‌ ಹೇಳಿ ಸಿನಿಮಾ ಬಗ್ಗೆ ವಿವರಿಸಿದರು. ಅಲ್ಲಿಗೆ ‘ಬ್ಯಾಡ್‌ ಮ್ಯಾನರ್ಸ್‌’ನ ಮೊದಲ ಹಂತದ ಮಾತುಕತೆ ಮುಕ್ತಾಯವಾಯಿತು.

ಸೂರಿ ಅವರಿಗೆ ನಿಮ್ಮ ಜೊತೆಗೆ ಈ ಸಿನಿಮಾ ಮಾಡಬೇಕು ಅಂತ ಯಾಕೆ ಅನಿಸಿರಬಹುದು?

ಅವರಿಗೆ ಹಲವಾರು ಆಫರ್ ಇತ್ತು. ಸ್ಟಾರ್‌ ನಟರ ಜೊತೆ ಬಿಗ್‌ ಬಜೆಟ್‌ ಸಿನಿಮಾ ಮಾಡುವ ಅವಕಾಶ ಇತ್ತು. ಅವರ ಜಾಗದಲ್ಲಿ ನಾನಿದ್ದರೆ ಅಥವಾ ಬೇರೆಯವರಿದ್ದರೆ ಕಣ್ಣುಮುಚ್ಚಿ ದೊಡ್ಡ ಆಫರ್‌ ಕಡೆ ನೋಡುತ್ತಿದ್ದೆವು. ಆದರೆ ಸೂರಿ ಅವರಿಗೆ ನನ್ನಲ್ಲೇನೋ ಕಂಡಿದೆ. ಅದು ಏನು ಅಂತ ನನಗೂ ಗೊತ್ತಿಲ್ಲ.

ನನ್ನ ಜೀವನಕ್ಕೆ ತದ್ವಿರುದ್ಧ ಕತೆ ಶುಗರ್ ಫ್ಯಾಕ್ಟರಿ: ಡಾರ್ಲಿಂಗ್‌ ಕೃಷ್ಣ

ಈ ಚಿತ್ರದ ನಿಮ್ಮ ನಟನೆಯಲ್ಲಿ ಹಲವರು ಅಂಬರೀಶ್‌ ಛಾಯೆ ಕಂಡರಂತೆ?

ಈ ಸಿನಿಮಾದಲ್ಲಿ ನಟಿಸೋ ಮೊದಲೇ ಸೂರಿ ಅವರಿಗೆ ಅದು ಕಂಡಿತ್ತು. ನಾನಿಲ್ಲಿ ಒಂದು ಘಟನೆ ಹೇಳಬೇಕು. ಅದು ಮೊದಲ ದಿನದ ಶೂಟಿಂಗ್‌. ಮೊದಲ ಶಾಟ್‌ ಬಳಿಕ ಸೂರಿ ಅವರ ಸೂಚನೆಯಂತೆ ಮೈಸೂರಿಂದ ಒಬ್ಬ ಹೇರ್‌ ಸ್ಟೈಲಿಸ್ಟ್ ಬಂದ. ಸೂರಿ ಶೇವ್ ಮಾಡಲು ಹೇಳಿದರು. ಇಷ್ಟು ತೆಗಿ ಇಷ್ಟು ತೆಗಿ ಅಂತ ಹೇಳ್ತಾನೇ ಹೋದರು. ಕೊನೆಗೆ ಕ್ಲೀನ್‌ ಶೇವ್‌ ಜೊತೆಗೆ ಮೀಸೆ ಉಳಿದಿತ್ತು. ಇದೆಲ್ಲ ಮುಗಿದು ನಾನು ಕ್ಯಾರವಾನ್‌ನಿಂದ ಇಳಿಯುತ್ತಿದ್ದಂತೆ ಅಲ್ಲಿದ್ದವರೆಲ್ಲ ಆಶ್ಚರ್ಯದಿಂದ ನೋಡುತ್ತಿದ್ದರು. ಯಾಕೆ ಅಂತ ವಿಚಾರಿಸಿದರೆ ಅಪ್ಪನ ಥರ ಕಾಣ್ತಿದ್ದೀನಿ ಅಂದರು.

ಸೂರಿ ಗರಡಿಯಲ್ಲಿ ಕಲಿಕೆ ಹೇಗಿತ್ತು?

ಸೂರಿ ಸರ್‌ ಅವರದು ಸಾಮಾನ್ಯ ಮಟ್ಟದ ಯೋಚನೆ ಅಲ್ಲ. ಅವರು ಮೊದಲು ನಿಮ್ಮ ತಲೆಯಲ್ಲಿ ಪಾತ್ರವನ್ನು ತುಂಬಿಸುತ್ತಾರೆ. ಆ ಪಾತ್ರ ಯೋಚಿಸೋದು ಹೇಗೆ, ಅದರ ಭಾವನೆಗಳು ಹೇಗೆ, ಪ್ರತಿಕ್ರಿಯಿಸುವ ರೀತಿ ಹೇಗೆ ಅನ್ನೋದನ್ನೆಲ್ಲ ಮನದಟ್ಟು ಮಾಡಿಸುತ್ತಾರೆ. ಜತೆಗೆ ನಮ್ಮ ಸಹಜ ನಡೆಯನ್ನು ಪಾತ್ರದಲ್ಲಿ ಹೇಗೆ ತರಬಹುದು ಅನ್ನೋದರ ಮೇಲೆ ವರ್ಕೌಟ್‌ ಮಾಡುತ್ತಾರೆ. ಅವರು ಪರ್ಫೆಕ್ಷನಿಸ್ಟ್. ರೆಫರೆನ್ಸ್‌ ಶಾಟ್‌ ಅನ್ನೋದು ಅವರ ಡಿಕ್ಷನರಿಯಲ್ಲೇ ಇಲ್ಲ. ಚಾಮರಾಜನಗರದಲ್ಲಿ ಹಳೆ ಕ್ವಾರಿಯಲ್ಲಿ ಶೂಟಿಂಗ್‌ ಇತ್ತು. ಅಲ್ಲಿಗೆ ರಸ್ತೆಯೇ ಇಲ್ಲ. ನಮ್ಮ ಕಣ್ಣಿಗದು ಪಾಳು ಬಿದ್ದ ಕ್ವಾರಿ ಅಷ್ಟೇ. ನಾವು ನೋಡು ನೋಡುತ್ತಿರುವಂತೇ ಸೂರಿ ಅಲ್ಲಿ ಒಂದು ಜಗತ್ತನ್ನೇ ನಿರ್ಮಿಸಿದರು.

ಸ್ಯಾಂಡಲ್‌ವುಡ್‌‌ಗೆ ಎಂಟ್ರಿ ಕೊಟ್ಟ ತೀರ್ಥಹಳ್ಳಿ ಬ್ಯೂಟಿ, ಇಷ್ಟುದ್ದದ ನಟಿಗೆ ಸಿಗುತ್ತಾ ತಕ್ಕ ಆಪರ್ಚುನಟಿ!

ಮೂರು ವರ್ಷ ಆಯ್ತಲ್ಲಾ ನಿಮ್ಮ ಸಿನಿಮಾ ಬಂದು, ಗ್ಯಾಪ್‌ ಹೆಚ್ಚಾಗಲಿಲ್ವಾ?

ಇಂದಿನ ಪ್ರೇಕ್ಷಕನಿಗೆ ಥಿಯೇಟ್ರಿಕಲ್‌ ಎಕ್ಸ್‌ಪೀರಿಯನ್ಸ್‌ ಕೊಡಬೇಕು ಅಂದರೆ ಹೆಚ್ಚಿನ ಶ್ರಮ ಬೇಕು. ನನ್ನ ಮೊದಲ ಸಿನಿಮಾ ಅಮರ್‌ ಬಿಡುಗಡೆಯಾದ ಬಳಿಕ ಕೋವಿಡ್ ಬಂತು. ಒಂದೊಳ್ಳೆ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೆ. ಮೊದಲ ಸಿನಿಮಾದ ಪಾತ್ರಕ್ಕಿಂತ ಭಿನ್ನ ಪಾತ್ರದ ಹುಡುಕಾಟದಲ್ಲಿದ್ದೆ. ಆಮೇಲೆ ಬ್ಯಾಡ್‌ಮ್ಯಾನರ್ಸ್‌ ಟೇಕಾಫ್‌ ಆಯ್ತು. ಈ ಚಿತ್ರಕ್ಕೆ 120 ದಿನಗಳ ಶೂಟಿಂಗ್‌ ಬೇಕಿತ್ತು. ಈಗ ಸಿನಿಮಾ ರೆಡಿಯಾಗಿ ನಿಮ್ಮೆದುರು ಬರುತ್ತಿದೆ.

ಸಿನಿಮಾಕ್ಕೆ ಬಾಡಿ ಬಿಲ್ಡ್‌ ಮಾಡಿದ್ದು?

ಈ ಪಾತ್ರಕ್ಕೆ ಅದು ಬೇಕಿರಲಿಲ್ಲ. ಹಾಗಾಗಿ ಮಾಡಿಲ್ಲ. ನನಗೆ ನಾನೊಬ್ಬ ಒಳ್ಳೆಯ ಆ್ಯಕ್ಟರ್ ಆಗಬೇಕು ಅಂತಿದೆಯೇ ಹೊರತು ಬಾಡಿ ಬಿಲ್ಡರ್‌ ಆಗಬೇಕು ಅಂತಿಲ್ಲ. ಇಲ್ಲಿ ರುದ್ರನ ಪಾತ್ರಕ್ಕೆ ಬೇಕಾದ ಮೈಕಟ್ಟಿನ ಅರಿವು ನನಗಿತ್ತು.

ಬ್ಯಾಡ್‌ ಮ್ಯಾನರ್ಸ್‌ ಚಿತ್ರದಲ್ಲಿ ಅಭಿಷೇಕ್ ಮುದ್ದಾಗಿ ಕಾಣುತ್ತಾರೆ: ದರ್ಶನ್

ನಿಮ್ಮ ಗುಡ್‌ ಮ್ಯಾನರ್ಸ್, ಬ್ಯಾಡ್‌ ಮ್ಯಾನರ್ಸ್‌?

ನಮ್ಮ ಗುಡ್‌ ಮ್ಯಾನರ್ಸ್‌ ಬಗ್ಗೆ ನಾವೇ ಹೇಳಿಕೊಳ್ಳಬಾರದು. ಬ್ಯಾಡ್‌ ಮ್ಯಾನರ್ಸ್‌ ಬಗ್ಗೆ ಹೇಳೋದಾದ್ರೆ ನನ್ನ ವಯಸ್ಸಿನ ಹುಡುಗರಲ್ಲಿ ಇರುವ ಕೆಲವು ಬ್ಯಾಡ್‌ ಮ್ಯಾನರ್ಸ್ ನನ್ನಲ್ಲೂ ಇವೆ.

click me!