ಹೇಮಂತ್ ಎಂ ರಾವ್ ನಿರ್ದೇಶನದ, ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಇಂದು ಕನ್ನಡದ ಜೊತೆಗೆ ಮಲಯಾಳಂ, ತಮಿಳು, ತೆಲುಗಿನಲ್ಲಿ ಬಿಡುಗಡೆ ಆಗುತ್ತಿದೆ. ಸೈಡ್ ಎಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಉತ್ಸಾಹದಲ್ಲಿರುವ ಚಿತ್ರತಂಡ ಸೈಡ್ ಬಿಗೂ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಲ್ಲಿದೆ. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಹೇಳಿದ ಕೆಲವು ಮಾತುಗಳು ಇಲ್ಲಿವೆ-
- ಹೇಮಂತ್ ಮೊದಲ ಭಾಗದ ಚಿತ್ರೀಕರಣ ಮುಗಿದಾಗಲೇ ಎರಡು ಸಿನಿಮಾ ಮಾಡೋಣ ಎಂದು ಹೇಳಿದ್ದರು. ಆದರೆ ನಾನು ಚಿತ್ರೀಕರಣ ಮುಗಿಸಿದ ಮೇಲೆ ನಿರ್ಧಾರ ಮಾಡೋಣ ಎಂದು ಹೇಳಿದ್ದೆ. ಚಿತ್ರೀಕರಣ ಆಗಿ, ಎಡಿಟಿಂಗ್ ಮುಗಿದ ಮೇಲೆ ಸೈಡ್ ಎ ಮತ್ತು ಸೈಡ್ ಬಿ ವೀಕ್ಷಿಸಿದೆ. ಅದರ ಬಳಿಕ ಇವೆರಡನ್ನೂ ಒಂದು ಸಿನಿಮಾ ಮಾಡಲು ಸಾಧ್ಯವೇ ಇಲ್ಲ ಅನ್ನಿಸಿತು.
- ನನಗೆ ಸೈಡ್ ಬಿ ಹೆಚ್ಚು ಎಕ್ಸೈಟಿಂಗ್ ಆಗಿತ್ತು. ಸೈಡ್ ಎಯಲ್ಲಿ ಪಾತ್ರಗಳು ಭಾವನೆಗಳ ಹಿಂದೆ ಸಾಗುತ್ತವೆ. ಆದರೆ ಸೈಡ್ ಬಿಗೆ ಬಂದಾಗ ಆ ಪಾತ್ರಗಳ ಯೋಚನಾ ವಿಧಾನವೇ ಬದಲಾಗಿರುತ್ತದೆ. ಯೋಚನೆ, ಬದುಕು ಎಲ್ಲವೂ ಸಂಕೀರ್ಣವಾಗಿರುತ್ತದೆ. ಅದನ್ನು ತೀವ್ರವಾಗಿ ದಾಟಿಸುವುದು ಹೆಚ್ಚು ಸವಾಲಾಗಿತ್ತು.
undefined
ಸಪ್ತಸಾಗರದಾಚೆ ಎಲ್ಲೋ ಬಿ ಸೈಡ್ ಟ್ರೇಲರ್ ರಿಲೀಸ್: ಪ್ರಿಯಾ-ಮನುವಿನ ಮಧ್ಯೆ ಇನ್ನೊಬ್ಬಳ ಎಂಟ್ರಿ!
- ಹೇಮಂತ್ ರಾವ್ ಲವ್ ಸ್ಟೋರಿ ಮಾಡುತ್ತಾರೆ ಎಂಬ ಆಲೋಚನೆ ನನಗೆ ಇರಲಿಲ್ಲ. ಅವರ ಕತೆ ಕೇಳಿದ ಮೇಲೆ ಇಂಥದ್ದೊಂದು ಸಿನಿಮಾದ ಭಾಗವಾಗಬೇಕು ಎಂಬ ಆಸೆಯಾಯಿತು. ಯಾಕೆಂದರೆ ಕಮರ್ಷಿಯಲ್ ಸಿನಿಮಾಗಳಿಗಿಂತ ನನಗೆ ಈ ಥರದ ಸಿನಿಮಾಗಳು ಹೆಚ್ಚು ಇಷ್ಟ. ಮುಂದೆ ನಾನು ಇಂಥಾ ತೀವ್ರ ಪಾತ್ರ ಮಾಡಲಿಕ್ಕಾಗುತ್ತದೋ ಇಲ್ಲವೋ ಎಂದೆನ್ನಿಸಿ ಈ ಪಾತ್ರದ ಭಾಗವಾಗಲು ಮುಂದಾದೆ.
Sapta Sagaradaache Ello Review: ಪ್ರತಿಯೊಬ್ಬ ಪ್ರೇಮಿಯೂ ವಿಚಾರಣಾಧೀನ ಕೈದಿ!
- ಸೈಡ್ ಬಿ ಮನುವಿನಲ್ಲಿ ಜೀವನಾನುಭಾವವಿದೆ. ಭಾರ ಹೊತ್ತುಕೊಂಡು ಸಾಗುತ್ತಿದ್ದಾನೆ. ಆ ಭಾರವನ್ನು ನಾನು ಧರಿಸಬೇಕಿತ್ತು. ಹಾಗಾಗಿ ಸೈಡ್ ಬಿ ಚಿತ್ರೀಕರಣದಲ್ಲಿ ನಾನು ರುಕ್ಮಿಣಿ ವಸಂತ್ ಅವರ ಬಳಿ ಮಾತನಾಡಿಯೇ ಇರಲಿಲ್ಲ. ಯಾಕೆಂದರೆ ಪ್ರಿಯಾ ಪಾತ್ರದ ಜೊತೆಗಿನ ಪ್ರಯಾಣ ಹಗುರವಾಗಿತ್ತು. ಸಹಜವಾಗಿತ್ತು. ಆದರೆ ಸೈಡ್ ಬಿಯಲ್ಲಿ ಅಷ್ಟು ಸಹಜವಾಗಿಲ್ಲ. ಸ್ವಲ್ಪ ತೆರೆದುಕೊಳ್ಳಬೇಕು. ಮತ್ತೊಂಚೂರು ಹಾಗೇ ಅಡಗಿಸಿಟ್ಟಿರಬೇಕು. ಉದ್ದೇಶಪೂರ್ವಕವಾಗಿ ಅಲ್ಲ. ಬದುಕಿನ ಸಲುವಾಗಿ.
- ಸೈಡ್ ಬಿ ಮನುವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲದಲ್ಲಿ ನಾನಿದ್ದೇನೆ. ಅಲ್ಲಿಗೆ ಮನುವಿನಿಂದ ನಾನು ಪೂರ್ತಿ ಆಚೆ ಹೋಗುವುದು ಸಾಧ್ಯವಾಗಬಹುದು.