
ನವದೆಹಲಿ(ಸೆ.11): ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಿರುವ ಕೇಂದ್ರ ಸರ್ಕಾರ, ಮಿಲಿಟರಿ ಆಧುನೀಕರಣಕ್ಕೆ ಮುಂದಾಗಿದೆ.
ಸೇನಾಪಡೆಯ ಮೂರೂ ದಳಗಳನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ರಕ್ಷಣಾ ಕ್ಷೇತ್ರಕ್ಕೆ ಬರೋಬ್ಬರಿ 130 ಶತಕೋಟಿ ರೂ. ವ್ಯಯಿಸಲು ತೀರ್ಮಾನಿಸಿದೆ.
ಭಾರೀ ಸಂಕೀರ್ಣತೆಯ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಯುದ್ಧ ವಿಮಾನ, ಜಲಾಂತರ್ಗಾಮಿ ನೌಕೆ ಮತ್ತು ಯುದ್ಧ ಹಡಗುಗಳನ್ನು ಸಂಗ್ರಹಿಸಲು, ಮುಂದಿನ ಏಳು ವರ್ಷಗಳಲ್ಲಿ 130 ಶತಕೋಟಿ ರೂ. ವ್ಯಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸೇನೆಯ ಆದ್ಯತೆಗೆ ತಕ್ಕಂತೆ ಭೂಸೇನೆಗೆ 2,600 ಯುದ್ಧ ವಾಹನ ಸಂಗ್ರಹ, ವಾಯುಸೇನೆಗೆ 110 ಆಧುನಿಕ ಯುದ್ಧ ವಿಮಾನಗಳು ಹಾಗೂ ನೌಕಾಸೇನೆಗೆ 200 ಹಡಗು ಮತ್ತು 24 ಜಲಂತರ್ಗಾಮಿಗಳ:ನ್ನು ಸಂಗ್ರಹಿಸಲು ಯೋಜನೆ ಸಿದ್ಧಪಡಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.