
ಬೀಜಿಂಗ್[ಸೆ.11]: ಜಾಗತಿಕ ಅಂತರ್ಜಾಲ ವಾಣಿಜ್ಯೋದ್ಯಮ ದೈತ್ಯ ಅಲಿಬಾಬಾ ಗ್ರೂಪ್‌ನ ಸಂಸ್ಥಾಪಕ ಜಾಕ್ ಮಾ ಅವರು ಮಂಗಳವಾರ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಚೆಂಜ್ ಇಲ್ಲ ಅನ್ನೋಂಗಿಲ್ಲ.. ಭಿಕ್ಷುಕರ ಮೇಲೆ ಅಲಿಬಾಬಾ ಮ್ಯಾಜಿಕ್!
ಚೀನಾದ ಶ್ರೀಮಂತ ಮತ್ತು ಪ್ರಸಿದ್ಧ ಉದ್ಯಮಿಯಾಗಿದ್ದ ಜಾಕ್ ಮಾ ಅವರು, ತಮ್ಮ 55 ನೇ ಜನ್ಮದಿನದಂದು ರಾಜೀನಾಮೆ ನೀಡುವುದಾಗಿ ಕಳೆದ ವರ್ಷ ಘೋಷಿಸಿದ್ದರು. ಅದರಂತೆಯೇ ಮಂಗಳವಾರ ಸಂಸ್ಥೆಗೆ ವಿದಾಯ ಹೇಳಿದ್ದಾರೆ. ಆದರೆ, ಮಾ ಅವರು ಅಲಿಬಾಬಾ ಕಂಪನಿಯ ಆಡಳಿತ ಮಂಡಳಿಗೆ ನಿರ್ದೇಶಕರನ್ನು ನೇಮಿಸುವ ಹಕ್ಕನ್ನು ಹೊಂದಿರುವ 36 ಸದಸ್ಯರನ್ನು ಒಳಗೊಂಡ ಅಲಿಬಾಬಾ ಪಾಟ್ರ್ನರ್‌ಶಿಪ್ ಸಂಸ್ಥೆಯ ಸದಸ್ಯರಾಗಿ ಮುಂದುವರೆಯಲಿದ್ದಾರೆ.
ವಾರಕ್ಕೆ 6 ದಿನ 6 ಬಾರಿ ಸೆಕ್ಸ್: ಸಿಬ್ಬಂದಿಗೆ ಜಾಕ್ ಮಾ ಕರೆ!
1999 ರಲ್ಲಿ ಕೆಲ ಉದ್ಯಮಿಗಳೊಂದಿಗೆ ಅಲಿಬಾಬಾ ಅಂತರ್ಜಾಲ ಸಂಸ್ಥೆಯನ್ನು ಆರಂಭಿಸಿದ್ದರು. ಇದು ಚೀನಾ ಮಾತ್ರವಲ್ಲದೇ ವಿಶ್ವಾದ್ಯಂತ ಅಂಗಸಂಸ್ಥೆಗಳನ್ನು ಒಳಗೊಂಡು ಪ್ರಸಿದ್ಧ ಉದ್ಯಮವಾಗಿ ಬೆಳೆದಿದೆ. ಮಾ ಅವರ ರಾಜೀನಾಮೆಯಿಂದ ಸಂಸ್ಥೆ ಸಬಲ ನಾಯಕನ ಕೊರತೆ ಮತ್ತು ಉದ್ಯಮದಲ್ಲಿ ಸಂಕಷ್ಟಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.