
ನವದೆಹಲಿ(ಅ.12): ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಾ ಬಂದಿದ್ದು, ವೈಯಕ್ತಿಕ ಆದಾಯ ತೆರಿಗೆ ಸಲ್ಲಿಕೆ ಮುಕ್ತಾಯ ಕಂಡಿದೆ.
ಈ ಮಧ್ಯೆ ಐಟಿ ರಿಟರ್ನ್ಸ್ ಪ್ರಕ್ರಿಯೆಗೆ ಆದಾಯ ತೆರಿಗೆ ಇಲಾಖೆ ಮುಂದಾಗಲಿದ್ದು, ತೆರಿಗೆ ಮರುಪಾವತಿಗಾಗಿ ಪ್ರಾಮಾಣಿಕ ತೆರಿಗೆದಾರರು ಕಾತರದಿಂದ ಕಾಯುತ್ತಿದ್ದಾರೆ.
ತೆರಿಗೆ ಸಲ್ಲಿಸಿದ ಬಳಿಕ ಐಟಿ ಇಲಾಖೆ ಮಾಹಿತಿಗಳನ್ನು ಪರಿಶೀಲಿಸುತ್ತದೆ. ಇದಾದ ಬಳಿಕವಷ್ಟೇ ಐಟಿಆರ್ ಪ್ರಕ್ರಿಯೆಗೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಐಟಿಆರ್ ಪರಿಶೀಲನೆಯ ನಂತರ ನಿಮ್ಮ ತೆರಿಗೆ ಮರುಪಾವತಿ ಸ್ಟೇಟಸ್‌ನ್ನು ನೀವು ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದಾಗಿದೆ.
ಐಟಿಆರ್ ಮಾಹಿತಿಗಾಗಿ ನೀವು ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ, ನೀವು ಸಲ್ಲಿಸಿದ ತೆರಿಗೆ ಪಾವತಿ ಮಾಹಿತಿ ಪಡೆಯಬಹುದು.
ಅಲ್ಲಿ ನಿಮ್ಮ ಐಟಿಆರ್‌ನ್ನು ಯಶಸ್ವಿಯಾಗಿ ಪರಿಶೀಲಿಸಲ್ಪಟ್ಟಿದೆ ಅಥವಾ ಯಶಸ್ವಿಯಾಗಿ ಇ-ಪರಿಶೀಲನೆಯಾಗಿದೆ ಎಂದು ತೋರಿಸುತ್ತದೆ. ತದನಂತರ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಸ್ಟೇಟಸ್ ಐಟಿಆರ್ ಪ್ರೊಸೆಸ್ಡ್ ಎಂದು ಗೋಚರವಾಗುತ್ತದೆ.
ಇ-ಫೈಲಿಂಗ್‌ನ ವೆಬ್ ಸೈಟ್ ಮುಖಪುಟದಲ್ಲೇ ನಿಮ್ಮ ಐಟಿಆರ್ ಸ್ಟೇಟಸ್ ಚೆಕ್ ಮಾಡುವ ಆಯ್ಕೆ ಒದಗಿಸಲಾಗಿದ್ದು, ಅದರಲ್ಲಿ ಅಗತ್ಯ ಮಾಹಿತಿ ತುಂಬುವ ಮೂಲಕ ಐಟಿಆರ್ ಮಾಹಿತಿ ಪಡೆಯಬಹುದಾಗಿದೆ.
ಐಟಿಆರ್ ಮಾಹಿತಿಗಾಗಿ ಇರುವ ಫಾರಂನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಐಟಿಆರ್ ಸ್ವೀಕೃತಿ ಸಂಖ್ಯೆಗಳನ್ನು ನಮೂದಿಸಿದರೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
ಎಲ್ಲ ವಿವರಗಳನ್ನು ಭರ್ತಿ ಮಾಡಿದ ಬಳಿಕ ಅದರಲ್ಲಿ ನಿಮ್ಮ ಐಟಿಆರ್ ಸ್ಟೇಟಸ್ ಕಾಣಬಹುದಾಗಿದೆ.
ಅಕ್ಟೋಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.