ಐಟಿಆರ್ ತಡವಾದ್ರೆ ದಂಡ?: ನಿಮ್ಮ ಆದಾಯದ ಮೇಲೆ ಡಿಪೆಂಡ್!
ಆದಾಯ ತೆರಿಗೆ ಸಲ್ಲಿಕೆ ತಡವಾದರೆ ದಂಡ?
ಸಣ್ಣ ತೆರಿಗೆದಾರರಿಗೆ ಇಲ್ಲ ದಂಡದ ಚಿಂತೆ
ಮೂಲ ವಿನಾಯಿತಿ ಮಿತಿ ದಾಟಿರದವರಿಗೆ ದಂಡ ಇಲ್ಲ
ಹೊಸ ಕಾನೂನು ಯಾರಿಗೆ ಅನ್ವಯ?
ಬೆಂಗಳೂರು(ಜು.25): ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಫೈಲ್ ಮಾಡಲು ಕೇವಲ ಒಂದು ವಾರ ಮಾತ್ರ ಉಳಿದಿದೆ. ಜುಲೈ 31, 2018 ರ ಅಂತ್ಯದ ನಂತರ ನಿಮ್ಮ ಐಟಿಆರ್ ಸಲ್ಲಿಸಿದಲ್ಲಿ ದಂಡದ ಮೊತ್ತ ಕಟ್ಟಬೇಕಾಗುತ್ತದೆ. ಇದೇ ವರ್ಷದಿಂದ ಈ ನಿಯಮ ಜಾರಿಗೆ ಬಂದಿದ್ದು, ಈ ಕೆಳಕಂಡ ಸಂದರ್ಭದಲ್ಲಿ ತೆರಿಗೆದಾರ ದಂಡದ ಮೊತ್ತ ಕಟ್ಟಬೇಕಾದ ಪ್ರಸಂಗ ಎದುರಾಗಬಹುದು.
1) ಆದಾಯ ತೆರಿಗೆ ಫೈಲ್ ಮಾಡುವ ಗಡುವಿನ ನಂತರ ತೆರಿಗೆ ರಿಟರ್ನ್ ಸಲ್ಲಿಸಿದರೆ, ಡಿಸೆಂಬರ್ 31 ಕ್ಕೆ ಸಂಬಂಧಿಸಿದ ಮೌಲ್ಯಮಾಪನ ವರ್ಷದಲ್ಲಿ (ಈ ಸಂದರ್ಭದಲ್ಲಿ ಡಿಸೆಂಬರ್ 31, 2018 ರಲ್ಲಿ) 5,000 ರೂ.
2) ಡಿಸೆಂಬರ್ 31 ರ ನಂತರ ತೆರಿಗೆ ರಿಟರ್ನ್ ಸಲ್ಲಿಸಿದಲ್ಲಿ 10,000 ರೂ. ಅಂತಿಮ ಮೌಲ್ಯಮಾಪನ ವರ್ಷ ಅಂದರೆ ಮಾರ್ಚ್ 31 ರ ಮೊದಲು (1 ಜನವರಿ 2019 ಮತ್ತು ಮಾರ್ಚ್ 31, 2019 ರ ನಡುವೆ).
ನೀವು ಸಣ್ಣ ತೆರಿಗೆದಾರನಾಗಿದ್ದರೆ ಅಂದರೆ ಒಟ್ಟು ಆದಾಯವು 5 ಲಕ್ಷಕ್ಕಿಂತ ಹೆಚ್ಚಿಲ್ಲದ ತೆರಿಗೆದಾರರು ಗರಿಷ್ಠ ಶುಲ್ಕ 1,000 ರೂ ರುಂಬಬೇಕಾಗುತ್ತದೆ. ವಿಭಾಗ 234 ಎಫ್ ಅಡಿಯಲ್ಲಿ ವಿಳಂಬ ಶುಲ್ಕವನ್ನು ವಿಧಿಸುವ ಈ ಕಾನೂನು 2017 ರ ಬಜೆಟ್ ನಲ್ಲಿ ಪರಿಚಯಿಸಲ್ಪಟ್ಟಿತು.2017-2018ರ ಆರ್ಥಿಕ ವರ್ಷಕ್ಕೆ ಮೌಲ್ಯಮಾಪನ ವರ್ಷ 2018-19.
ಆದರೆ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ದಾಟಿರದಿದ್ದರೆ ಅಂತಹವರು ತಡವಾಗಿ ಆದಾಯ ತೆರಿಗೆ ಫೈಲ್ ಮಾಡಿದರೂ ದಂಡ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ. ಒಟ್ಟು ಆದಾಯವು ಮೂಲ ವಿನಾಯತಿ ಮಿತಿಯನ್ನು ಮೀರದಿದ್ದರೆ ಗಡುವು ನಂತರ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್, ಸೆಕ್ಷನ್ 234 ಎಫ್ ಅಡಿಯಲ್ಲಿ ಸೂಚಿಸಲಾದಂತೆ ಯಾವುದೇ ವಿಳಂಬ ಶುಲ್ಕಗಳಿರುವುದಿಲ್ಲ.