ಸಾಲ ಮುಂಗಡ ಪಾವತಿ ಘೋಷಣೆ: ಶೇ. 25 ರವರೆಗೆ ಜಿಗಿದ ಅದಾನಿ ಎಂಟರ್‌ಪ್ರೈಸಸ್ ಷೇರು

By Kannadaprabha NewsFirst Published Feb 8, 2023, 8:09 AM IST
Highlights

ಕಳೆದ 10 ವಹಿವಾಟು ದಿನಗಳಲ್ಲಿ ಭಾರಿ ಇಳಿಕೆ ಕಂಡಿದ್ದ ಅದಾನಿ ಸಮೂಹ ಸಂಸ್ಥೆಗಳ ಷೇರುಗಳಿಂದಾಗಿ ಕಂಪನಿ ಒಟ್ಟು 9.2 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೀಗ 

ಮುಂಬೈ (ಫೆಬ್ರವರಿ 8, 2023): ಹಿಂಡನ್‌ಬರ್ಗ್‌ ವರದಿಯ ಬಳಿಕ ಸತತವಾಗಿ ಕುಸಿತ ಕಂಡಿದ್ದ ಉದ್ಯಮಿ ಗೌತಮ್‌ ಅದಾನಿ ಸಮೂಹದ ಹಲವು ಕಂಪನಿಗಳ ಷೇರುಗಳು ಮಂಗಳವಾರ ಏರಿಕೆ ಕಂಡಿವೆ. ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇ.15ರಷ್ಟು ಏರಿಕೆ ಕಂಡಿದ್ದು, ಒಟ್ಟು 6 ಕಂಪನಿಗಳ ಷೇರುಗಳು ಧನಾತ್ಮಕ ಏರಿಕೆ ಸಾಧಿಸಿವೆ. ಆರಂಭದಲ್ಲಿ ಶೇ. 25 ರಷ್ಟು ಏರಿಕೆ ಕಂಡಿತಾದರೂ ಬಳಿಕ ಮತ್ತೆ ಕುಸಿತ ಕಂಡಿತು.

ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇ.14.63ರಷ್ಟು ಏರಿಕೆ ಕಾಣುವ ಮೂಲಕ ಪ್ರತಿ ಷೇರಿನ ಬೆಲೆ 1,802 ರೂ.ಗೆ ತಲುಪಿದೆ. ಅದಾನಿ ವಿಲ್ಮರ್‌ ಷೇರು ಶೇ.5ರಷ್ಟು ಏರಿಕೆ ಕಂಡುಬಂದಿದ್ದು, ಬೆಲೆ 399.4 ರೂ.ಗೆ ತಲುಪಿದೆ. ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯ ಷೇರು (553.3 ರು.), ಅಂಬುಜಾ ಸಿಮೆಂಟ್‌ (383.7 ರು.), ಎಸಿಸಿ (1,995.5 ರು.) ಮತ್ತು ಎನ್‌ಡಿಟಿವಿ (216.95 ರು.) ಷೇರುಗಳು ಶೇ.1ರಷ್ಟು ಏರಿಕೆ ಕಂಡಿವೆ. ಆದರೆ ಅದಾನಿ ಪವರ್‌, ಅದಾನಿ ಗ್ರೀನ್‌ ಎನರ್ಜಿ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಷೇರುಗಳು ಏರಿಕೆ ಕಂಡಿಲ್ಲ.
ಕಳೆದ 10 ವಹಿವಾಟು ದಿನಗಳಲ್ಲಿ ಭಾರಿ ಇಳಿಕೆ ಕಂಡಿದ್ದ ಅದಾನಿ ಸಮೂಹ ಸಂಸ್ಥೆಗಳ ಷೇರುಗಳಿಂದಾಗಿ ಕಂಪನಿ ಒಟ್ಟು 9.2 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿತ್ತು.

ಇದನ್ನು ಓದಿ: ಎಲ್‌ಐಸಿ, ಎಸ್‌ಬಿಐ ಮುಂದೆ ಕಾಂಗ್ರೆಸ್‌ ದೇಶವ್ಯಾಪಿ ಪ್ರತಿಭಟನೆ; ಸತತ 3ನೇ ದಿನವೂ ಸಂಸತ್‌ ಕಲಾಪ ಭಂಗ

ಶೇ. 25 ರಷ್ಟು ಏರಿಕೆ ಕಂಡಿತ್ತು..!
 ಲಕ್ಷಾಂತರ ಕೋಟಿ ರೂ. ನಷ್ಟಕ್ಕೀಡಾದ ಭಾರತೀಯ ಸಂಘಟಿತ ಅದಾನಿಯ ಪ್ರಮುಖ ಸಂಸ್ಥೆಯಲ್ಲಿನ ಷೇರುಗಳು ಮಂಗಳವಾರ ಶೇ. 25 ರಷ್ಟು ಏರಿಕೆ ಕಂಡಿವೆ. ಹಿಂಡನ್‌ಬರ್ಗ್‌ ವರದಿಯ ಬಳಿಕ ಸತತವಾಗಿ ಕುಸಿತ ಕಂಡಿದ್ದ ಉದ್ಯಮಿ ಗೌತಮ್‌ ಅದಾನಿ ಸಮೂಹದ ಹಲವು ಕಂಪನಿಗಳ ಷೇರುಗಳು ಏರಿಕೆ ಕಂಡಿವೆ. 1 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಸಾಲವನ್ನು ಮರುಪಾವತಿಸುವುದಾಗಿ ಹೇಳಿದ ನಂತರ ಸ್ವಲ್ಪ ಮಟ್ಟದ ನಷ್ಟವನ್ನು ಹಿಮ್ಮೆಟ್ಟಿಸಿದೆ. ಯುಎಸ್ ಹೂಡಿಕೆ ಗುಂಪು ಹಿಂಡೆನ್‌ಬರ್ಗ್ ರೀಸರ್ಚ್‌ ಲೆಕ್ಕಪತ್ರ ವಂಚನೆ ಆರೋಪ ಮಾಡಿದ ನಂತರ ಉದ್ಯಮಿ ಗೌತಮ್ ಅದಾನಿ ಒಡೆತನದ ಗುಂಪು 120 ಬಿಲಿಯನ್‌ ಡಾಲರ್‌ನಷ್ಟು ಮೌಲ್ಯ ಕಳೆದುಕೊಂಡಿತ್ತು.

ಆದರೀಗ ಅದಾನಿ ಎಂಟರ್‌ಪ್ರೈಸಸ್‌ ಹಾಗೂ ಇತರ ಘಟಕಗಳ ಷೇರು ಮೌಲ್ಯ ಏರಿಕೆಯ ನಂತರ ಒಟ್ಟು ನಷ್ಟವನ್ನು ಸುಮಾರು 112 ಬಿಲಿಯನ್‌ ಡಾಲರ್‌ಗೆ ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಹೂಡಿಕೆದಾರರಿಗೆ ಧೈರ್ಯ ತುಂಬುವ ಉದ್ದೇಶದಿಂದ 1.1 ಬಿಲಿಯನ್‌ ಡಾಲರ್‌ನಷ್ಟು ಮೊತ್ತದ ಆರಂಭಿಕ ಸಾಲಗಳನ್ನು ಮರುಪಾವತಿ ಮಾಡುತ್ತಿದೆ ಎಂದು ಅದಾನಿ ಸೋಮವಾರ ಹೇಳಿದ ಬಳಿಕ ಷೇರು ಮೌಲ್ಯ ಏರಿಕೆ ಕಂಡಿದೆ.

ಇದನ್ನೂ ಓದಿ: ಅದಾನಿ ಕೇಸಿಂದ ಆರ್ಥಿಕತೆಗೆ ಪೆಟ್ಟಿಲ್ಲ: ನಿರ್ಮಲಾ ಸೀತಾರಾಮನ್‌; ಮೋದಿಗೆ 3 ಪ್ರಶ್ನೆ ಕೇಳಿದ ಕಾಂಗ್ರೆಸ್‌

ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಮಂಗಳವಾರ ಶೇಕಡಾ 25 ರಷ್ಟು ಏರಿದ್ದು, ವ್ಯಾಪಾರವನ್ನು 3 ಬಾರಿ ಸ್ಥಗಿತಗೊಳಿಸಲಾಯಿತು. ವಹಿವಾಟುಗಳು ಪುನಾರಂಭಗೊಂಡ ನಂತರ 15 ಪ್ರತಿಶತದಷ್ಟು ಷೇರುಗಳ ಮೌಲ್ಯ ಶೇ. 15 ರಷ್ಟು ಏರಿಕೆ ಕಂಡಿದೆ. ಹೂಡಿಕೆದಾರರು ತಮ್ಮ ಆರ್ಥಿಕ ಆರೋಗ್ಯದ ಬಗ್ಗೆ ಸುಳಿವುಗಳಿಗಾಗಿ ಹಲವಾರು ಅದಾನಿ ಸಂಸ್ಥೆಗಳಿಂದ ಈ ವಾರದ ಗಳಿಕೆಯ ಪ್ರಕಟಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಅದಾನಿ ಹೂಡಿಕೆ ವೇಳೆ ನಿಯಮ ಪಾಲನೆ: ಕೇಂದ್ರಕ್ಕೆ ಎಲ್‌ಐಸಿ ಸ್ಪಷ್ಟನೆ
ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೊದಲು ಎಲ್ಲಾ ಶಾಸನಬದ್ಧ ಚೌಕಟ್ಟುಗಳು ಮತ್ತು ನಿಬಂಧನೆಗಳನ್ನು ಅನುಸರಿಸಲಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೇಳಿದೆ ಎಂದು ಹಣಕಾಸು ಸಚಿವಾಲಯದ ರಾಜ್ಯ ಖಾತೆ ಸಚಿವ ಭಾಗವತ್‌ ಕರಾಡ್‌ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಅದಾನಿ ಸಮೂಹದ ಬಗ್ಗೆ ಮಾರುಕಟ್ಟೆ ನಿಯಂತ್ರಕರ ನಿಗಾ; ದೇಶದ ಇಮೇಜ್‌ಗೆ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಅವರು, ‘1938ರ ವಿಮಾ ಕಾಯ್ದೆ, 2016ರ ಐಆರ್‌ಡಿಎಐ ಹೂಡಿಕೆ ನಿಬಂಧನೆಗಳು ಮತ್ತು ಸರ್ಕಾರ ವಿಧಿಸಿರುವ ಎಲ್ಲಾ ಕಾನೂನು ಚೌಕಟ್ಟುಗಳನ್ನು ಹೂಡಿಕೆ ಮಾಡುವ ಮೊದಲು ಅನುಸರಿಸಲಾಗಿದೆ ಎಂದು ಎಲ್‌ಐಸಿ ಸರ್ಕಾರಕ್ಕೆ ಮಾಹಿತಿ ನೀಡಿದೆ. ಅಲ್ಲದೇ ಈ ಹೂಡಿಕೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಈಗಾಗಲೇ ಸಾರ್ವಜನಿಕ ಡೊಮೈನ್‌ನಲ್ಲಿ ಲಭ್ಯವಿದೆ ಎಂದು ಎಲ್‌ಐಸಿ ತಿಳಿಸಿದೆ’ ಎಂದು ಅವರು ಹೇಳಿದ್ದಾರೆ.

ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್‌ಐಸಿ ಒಟ್ಟು 35,917.31 ಕೋಟಿ ರು. ಹೂಡಿಕೆ ಮಾಡಿರುವುದಾಗಿ ಕಳೆದ ವಾರ ಕಂಪನಿ ಹೇಳಿತ್ತು.

ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?

click me!