ಖಗೋಳ ವಿಸ್ಮಯ: ಈ ಹುಣ್ಣಿಮೆಯಿಂದ ಸೂಪರ್‌ ಮೂನ್‌ಗಳ ಸರಮಾಲೆ!

By Ravi JanekalFirst Published Jul 2, 2023, 1:59 PM IST
Highlights

ಇಂದಿನಿಂದ ನಾಲ್ಕು ಹುಣ್ಣಿಮೆಗಳೂ ಸೂಪರ್ ಮೂನ್ ಇರಲಿದೆ ಎಂದು ಉಡುಪಿಯ ಖಗೋಳಶಾಸ್ತ್ರಜ್ಞ ಡಾ. ಎ.ಪಿ. ಭಟ್ ತಿಳಿಸಿದ್ದಾರೆ.

ಉಡುಪಿ (ಜು.2) : ಇಂದಿನಿಂದ ನಾಲ್ಕು ಹುಣ್ಣಿಮೆಗಳೂ ಸೂಪರ್ ಮೂನ್ ಇರಲಿದೆ ಎಂದು ಉಡುಪಿಯ ಖಗೋಳಶಾಸ್ತ್ರಜ್ಞ ಡಾ. ಎ.ಪಿ. ಭಟ್ ತಿಳಿಸಿದ್ದಾರೆ.

ಜುಲೈ3, ಆಗಸ್ಟ್ 1,ಆಗಸ್ಟ್ 31, ಹಾಗೂ ಸಪ್ಟಂಬರ್ 29 ಎಲ್ಲಾ ಹಣ್ಣಿಮೆಗಳೂ ಸೂಪರ್ಮೂನ್(Super moon) ಇರಲಿದೆ. ಸೂಪರ್ ಮೂನ್ ಎಂದರೆ ಹುಣ್ಣಿಮೆ ದಿನ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವುದು. ಈ ವಿಶೇಷ ಅನುಭವವನ್ನು ಎಲ್ಲರೂ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

Latest Videos

Supermoon 2022 ಈ 4 ರಾಶಿಗಳ ಗುಟ್ಟನ್ನು ರಟ್ಟು ಮಾಡುವ ಚಂದ್ರಪ್ರಭೆ

ಎಲ್ಲಾ ಹುಣ್ಣಿಮೆಗಳಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ. ಸೂಪರ್ ಮೂನ್ ಗಳಲ್ಲಿ ಮಾಮೂಲಿ ಗಾತ್ರಕ್ಕಿಂತ ದೊಡ್ಡದಾಗಿ ಕಂಡರೆ ಮೈಕ್ರೊ ಮೂನ್ ಗಳಲ್ಲಿ ಚಿಕ್ಕದಾಗಿ ಕಾಣುತ್ತದೆ. ಇದಕ್ಕೆ ಕಾರಣ ಚಂದ್ರ ಭೂಮಿಯಿಂದ ಯಾವಾಗಲೂ ಒಂದೇ ಸಮಾನವಾದ ದೂರದಲ್ಲಿರುವುದಿಲ್ಲ ಎಂದು ಹೇಳಿದ್ದಾರೆ.

ಚಂದ್ರ ಭೂಮಿಯ ಸುತ್ತ ಸುತ್ತುವ ಪಥ ದೀರ್ಘವೃತ್ತವಾಗಿರುವುದರಿಂದ ಒಂದು ಸುತ್ತು ಸುತ್ತುವಾಗ ಒಮ್ಮೆ ಅತೀದೂರ (ಅಪೊಜಿ) ಅಪಭೂದಲ್ಲಿದ್ದರೆ ಒಮ್ಮೆ ಅತೀ ಸಮೀಪ  ( ಪೆರಿಜಿ ) ಪರಭೂದಲ್ಲಿರುತ್ತದೆ. ಚಂದ್ರ ಭೂಮಿಗಳ ಸರಾಸರಿ ದೂರ 3, 84400 ಕಿಮೀ ಆದರೆ, ಸಮೀಪ ದೂರ 3, 56000 ಕಿಮೀ ಹಾಗೂ ದೂರದ ದೂರ 4,06000 ಕಿಮೀ.

ಹತ್ತಿರಬಂದಾಗ ವಸ್ತು ದೊಡ್ಡದಾಗಿ ಕಾಣುವುದು. ದೂರಹೊದಂತೆ ಚಿಕ್ಕದಾಗಿ ಕಾಣುವುದು ಪ್ರಕೃತಿವಿಯಮ. ಹಾಗಾಗಿ ಸೂಪರ್ ಮೂನಿನ ದಿನ ಚಂದ್ರ ಸುಮಾರು 30 ಸಾವಿರ ಕಿಮೀ ಹತ್ತಿರ ಬರುವುದರಿಂದ ಸುಮಾರು 14 ಅಂಶ ದೊಡ್ಡದಾಗಿ ಕಂಡು ಸುಮಾರು 24ಅಂಶದಷ್ಟು ಚಂದ್ರಪ್ರಭೆ ಹೆಚ್ಚಿರುತ್ತದೆ.

ಗುರು ಪೂರ್ಣಿಮಾದಂದು ಈ ವರ್ಷದ ಅತಿ ದೊಡ್ಡ ಸೂಪರ್‌ಮೂನ್ ದರ್ಶನ

ಜುಲೈ 3 ರಂದು ಚಂದ್ರ ಭೂಮಿಯಿಂದ 3,61800 ಕಿಮೀ , ಆಗಸ್ಟ್ 1 ರಂದು 3,57530  ಕಿಮೀ ,ಆಗಸ್ಟ್ 31 ರಂದು 3,57 344 ಕಿಮೀ ಹಾಗೂ ಸಪ್ಟಂಬರ್ 29 ರಂದು 3,61552 ಕಿಮೀ ಇರಲಿದೆ. 

ಸಮುದ್ರದ ಭರತ ಇಳಿತಗಳಿಗೆ ಚಂದ್ರನ ಆಕರ್ಷಣೆಯೂ ಕಾರಣ . ಹಾಗಾಗಿ ಸೂಪರ್ ಮೂನ್ಗಳಲ್ಲಿ ಸಮುದ್ರದ ತರೆಗಳ ಅಬ್ಬರ ಹೆಚ್ಚಿರುತ್ತದೆ ಎಂದು ಡಾ ಎ. ಪಿ . ಭಟ್  ತಿಳಿಸಿದ್ದಾರೆ.

click me!