Asianet Suvarna News Asianet Suvarna News

'ಕಲ್ಟ್' ಆದ ಝೈದ್ ಖಾನ್: ಬನಾರಸ್ ಹುಡುಗನ ಖದರ್ ಲುಕ್‌ಗೆ ಶಾಕ್ ಆದ ಸಿನಿಮಾ ಇಂಡಸ್ಟ್ರಿ!

ಸಿಕ್ಕಾಪಟ್ಟೆ ಮಾಸ್ ಲುಕ್ನಲ್ಲಿ ಕ್ಲಾಸ್ ಹುಡುಗನ ಎಂಟ್ರಿಯಾಗಿದೆ. ಚಿತ್ರದ ಪೋಸ್ಟರ್ ಹೇಳುವಂತೆ ಸಿನಿಮಾ ಮಾಸ್ ಕಮರ್ಷಿಯಲ್ ಸ್ಟೋರಿ ಎನ್ನುವಂತಿದೆ. ಸಿಗರೇಟ್ ಸೇದುತ್ತಿರೋ ಹೀರೋ ಜೈದ್ ಖಾನ್. 

ಬನಾರಸ್ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಝೈದ್ ಖಾನ್ ಹಾಗೂ ಈ ವರ್ಷದ ಮೊದಲ ಹಿಟ್ ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಕಾಂಬಿನೇಶನ್ ನಲ್ಲಿ ಹೊಸ ಟೈಟಲ್ ಅನೌನ್ಸ್ ಆಗಿದ್ದು  ಈ ಚಿತ್ರಕ್ಕೆ ಕಲ್ಟ್ ಎಂದು ಹೆಸರಿಡಲಾಗಿದೆ. ಯುಗಾದಿ ರಂಜಾನ್ ಪ್ರಯುಕ್ತ ಹೊಸಾ ಟೈಟಲ್ ಅನೌನ್ಸ್ ಆಗಿದ್ದು ಕಲ್ಟ್ ಎಂದು ತಮ್ಮ ಎರಡನೇ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಸಿಕ್ಕಾಪಟ್ಟೆ ಮಾಸ್ ಲುಕ್ನಲ್ಲಿ ಕ್ಲಾಸ್ ಹುಡುಗನ ಎಂಟ್ರಿಯಾಗಿದೆ. ಚಿತ್ರದ ಪೋಸ್ಟರ್ ಹೇಳುವಂತೆ ಸಿನಿಮಾ ಮಾಸ್ ಕಮರ್ಷಿಯಲ್ ಸ್ಟೋರಿ ಎನ್ನುವಂತಿದೆ. ಸಿಗರೇಟ್ ಸೇದುತ್ತಿರೋ ಹೀರೋ ಜೈದ್ ಖಾನ್. 

ಹೀರೋ ಹೆಗಲ ಮೇಲೆ ಹುಡಗಿ ಕಾಲುಗಳು.. ಸಿನಿಮಾದ ಕತೆ ಬಹಳ ರಾ ಆಗಿದೆ ಅನ್ನೋದನ್ನೂ ಹೇಳುತ್ತಿದೆ. ಅದೇನೆ ಇದ್ರೂ ಇದೀಗ ಬನಾರಸ್ ಹುಡುಗನ ಬದಲಾದ ಲುಕ್ಗೆ ಇಂಡಸ್ಟ್ರಿ ಅಚ್ಚರಿಯಿಂದ ನೋಡುತ್ತಿದೆ. ಪೋಸ್ಟರ್ ಸೌಂಡ್ ಮಾಡಿದ್ದು ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.