Asianet Suvarna News Asianet Suvarna News

Totapuri: ದಸರಾದಲ್ಲಿ ತೋತಾಪುರಿ ವ್ಯಾಪಾರಕ್ಕೆ ಹೊರಟ ಜಗ್ಗೇಶ್ ಟೀಂ

ತೋತಾಪುರಿ ಸಿನಿಮಾ ಹಲವು ಪ್ರಥಮಗಳಿಗೆ ಮತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಮೈಸೂರು ದಸರಾದ ಸಂದರ್ಭದಲ್ಲಿ ಇಡೀ ಚಿತ್ರತಂಡ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡೋ ಮೂಲಕ ವಿಶೇಷವಾಗಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. 

ನೀರ್‌ದೋಸೆ ಸಿನಿಮಾದ ಯಶಸ್ಸಿನ ಬಳಿಕ ಜಗ್ಗೇಶ್‌ ಹಾಗೂ ವಿಜಯ ಪ್ರಸಾದ್‌ ಜೋಡಿ 'ತೋತಾಪುರಿ' ಮೂಲಕ ಕಮಾಲ್‌ ಮಾಡಲು ಸಜ್ಜಾಗಿದೆ. ಈ ವರ್ಷದ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ 'ತೋತಾಪುರಿ' ಕೂಡ ಇದೆ. ಕಾಮಿಡಿ ಜತೆಗೆ ಭರಪೂರ ಮನರಂಜನೆ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಅನ್ನೊದು ಟ್ರೇಲರ್‌ ಮೂಲಕ ತೋರಿಸಲಾಗಿದೆ. ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾವೊಂದನ್ನು ಎರಡೂ ಭಾಗದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಚಾಪ್ಟರ್‌1 ಹಾಗೂ ಚಾಪ್ಟರ್‌ 2 ರೂಪದಲ್ಲಿ ರಿಲೀಸ್‌ ಆಗಲಿದೆ 'ತೋತಾಪುರಿ'. ಮೊದಲಿಗೆ ಸೆಪ್ಟೆಂಬರ್‌ 30ರಂದು ಚಾಪ್ಟರ್‌ 1 ವಿಶ್ವದಾದ್ಯಂತ ತೆರೆಕಾಣಲಿದೆ. ಆನಂತರ ಚಾಪ್ಟರ್ 2 ರಿಲೀಸ್ ಆಗಲಿದೆ. ಇನ್ನು ತೋತಾಪುರಿ ಸಿನಿಮಾ ಹಲವು ಪ್ರಥಮಗಳಿಗೆ ಮತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಮೈಸೂರು ದಸರಾದ ಸಂದರ್ಭದಲ್ಲಿ ಇಡೀ ಚಿತ್ರತಂಡ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡೋ ಮೂಲಕ ವಿಶೇಷವಾಗಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನವರಸ ನಾಯಕ ಜಗ್ಗೇಶ್  ಟ್ರೈನ್‌ನಲ್ಲಿ ಪ್ರಯಾಣ ಮಾಡೋವ ಮೂಲಕ ವಿಭಿನ್ನವಾಗಿ ಪ್ರಚಾರ ಮಾಡಿದರು. ಇದೇ ಸಂದರ್ಭದಲ್ಲಿ ನಾಯಕಿ ಅದಿತಿ ಪ್ರಭುದೇವ, ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ಪ್ರೊಡ್ಯೂಸರ್ ಸುರೇಶ್ ಕೂಡ ಸಾಥ್ ಕೊಟ್ಟರು. ಜೊತೆಗೆ ಅಭಿಮಾನಿಗಳಿಗೆ ಸೆಲ್ಫಿಗೆ ಪೋಸ್ ಕೊಡೋವ ಮೂಲಕ ದಯವಿಟ್ಟು ತೋತಾಪುರಿ ಸಿನಿಮಾನಾ ಥೀಯೇಟರ್‌ಗೆ ಬಂದು ನೋಡಿ ಅಂತ ನಟ ಜಗ್ಗೇಶ್ ಹಾಗೂ ಇಡೀ ಚಿತ್ರತಂಡ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment