Asianet Suvarna News Asianet Suvarna News

ಸಂಭಾವನೆ ಜಾಸ್ತಿ ಅಂತ ಹೊಸ‌ ನಾಯಕನ ಜೊತೆ ನಟಿಸಲು ಓಕೆ ಎಂದ ಆಶಿಕಾ

ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಗತವೈಭವ  ಸಿನಿಮಾದಲ್ಲಿ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಆಶಿಕಾ ದೇವಕನ್ಯೆ ಪಾತ್ರ ಮಾಡುತ್ತಿದ್ದಾರೆ. ನಾಯಕನಾಗಿ ದುಷ್ಯಂತ್ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದಿಂದ ಆಶಿಕಾ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಗಮನಸೆಳೆಯುತ್ತಿದೆ. ಅಂದಹಾಗೆ ಸಿನಿಮಾದ ನಾಯಕಿ ಪರಿಚಯ ಮಾಡಲು ಸಿಂಪಲ್ ಸುನಿ ವಿಭಿನ್ನ ತಂತ್ರ ಅನುಸರಿಸಿದ್ದಾರೆ. 

ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಗತವೈಭವ  ಸಿನಿಮಾದಲ್ಲಿ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಆಶಿಕಾ ದೇವಕನ್ಯೆ ಪಾತ್ರ ಮಾಡುತ್ತಿದ್ದಾರೆ. ನಾಯಕನಾಗಿ ದುಷ್ಯಂತ್ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದಿಂದ ಆಶಿಕಾ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಗಮನಸೆಳೆಯುತ್ತಿದೆ. ಅಂದಹಾಗೆ ಸಿನಿಮಾದ ನಾಯಕಿ ಪರಿಚಯ ಮಾಡಲು ಸಿಂಪಲ್ ಸುನಿ ವಿಭಿನ್ನ ತಂತ್ರ ಅನುಸರಿಸಿದ್ದಾರೆ. ಚಿಕ್ಕದಾದ ವಿಡಿಯೋ ಮೂಲಕ ಇಂಟ್ರಸ್ಟಿಂಗ್ ಆಗಿನಾಯಕಿ ಪರಿಚಯ ಮಾಡಿದ್ದಾರೆ. ನಟಿ ಆಶಿಕಾ ಅವರಿಗೆ ಜಾಸ್ತಿ ಸಂಭಾವನೆ ಕೊಟ್ಟು ಈ ಸಿನಿಮಾಗೆ ಒಪ್ಪಿಸಿದರು ಎಂದು ಪ್ರಮೋಷನ್ ವಿಡಿಯೋದಲ್ಲಿ ಹೇಳಿದ್ದಾರೆ.  ಆಶಿಕಾ ನಿಜಕ್ಕೂ ಜಾಸ್ತಿ ಸಂಭಾವನೆ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಹೊಸ ನಾಯಕನ ಜೊತೆ ನಟಿಸಲು ಒಪ್ಪಿಕೊಂಡರಾ ಅಥವಾ ಇದು ಪ್ರಚಾರಕ್ಕಾಗಿ ಮಾಡಿದ್ದ ವಿಡಿಯೋನಾ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಆಶಿಕಾ ಲುಕ್ ಸಖತ್ ವೈರಲ್ ಆಗಿದೆ. 
 

Video Top Stories