Karnataka News Live: ಮಧ್ಯಪ್ರಾಚ್ಯದಲ್ಲಿ ಅಮೆರಿಕದ 36 ಸೇನಾ ನೆಲೆಗಳಿದ್ದರೂ, ಅಲ್ ಉದೈದ್ ಮೇಲೇ ಇರಾನ್ ದಾಳಿ ಮಾಡಿದ್ದೇಕೆ?
ಸಾರಾಂಶ
ಬೆಂಗಳೂರು ನಗರದಲ್ಲಿ ಇಂದು (ಜೂ.23) ವಿದ್ಯುತ್ ವ್ಯತ್ಯಯವಾಗುತ್ತಿದೆ. ತ್ರೈಮಾಸಿಕ ನಿರ್ವಹಣಾ ಕಾಮಾಗಾರಿಯಿಂದ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ರಾಜಾಜಿನಗರ ,ಗಾಯಿತ್ರಿನಗರ ಸುಬ್ರಮಣ್ಯನಗರ, ಕುಂಬಳಗೋಡು, ಮಂಜುನಾಥನಗರ, ಮೋದಿ ಹಾಸ್ಪಿಟಲ್, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್ 1ನೇ ರಸ್ತೆ, ದೇಯಯ್ಯ ಪಾರ್ಕ್, ನಾಗಪ್ಪ ಬ್ಲಾಕ್, ಲಿಂಕ್ ರೋಡ್, ಶನಿಮಹಾತ್ಮಾ ಟೆಂಪಲ್, ಪ್ರಕಾಶನಗರ, ಗಾಯತ್ರಿ ನಗರ, ಸುಬ್ರಹ್ಮಣ್ಯನಗರ, ರಾಜಕುಮಾರ್ ರೋಡ್, ದಯಾನಂದ ಸಾಗರ, ಸಾಯಿ ಮಂದಿರ, ಹರಿಶ್ಚಂದ್ರ ಘಾಟ್ ಸೇರಿದಂತೆ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
11:53 PM (IST) Jun 23
Karnataka News Live: ಮಧ್ಯಪ್ರಾಚ್ಯದಲ್ಲಿ ಅಮೆರಿಕದ 36 ಸೇನಾ ನೆಲೆಗಳಿದ್ದರೂ, ಅಲ್ ಉದೈದ್ ಮೇಲೇ ಇರಾನ್ ದಾಳಿ ಮಾಡಿದ್ದೇಕೆ?
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕತಾರ್‌ನಲ್ಲಿರುವ ಅಮೆರಿಕದ ಅಲ್-ಉದೈದ್ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಯು ಅಮೆರಿಕದ ಪರಮಾಣು ಸೌಲಭ್ಯಗಳ ವಿರುದ್ಧದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ನಡೆದಿದೆ ಎನ್ನಲಾಗಿದೆ.
Karnataka News Live: ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ, ಇರಾನ್ ಕ್ಷಿಪಣಿ ದಾಳಿಗೆ ಕಿಡಿಕಿಡಿಯಾದ ಕತಾರ್!
ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಕತಾರ್‌ನಲ್ಲಿರುವ ಅಲ್ ಉದೈದ್ ನೆಲೆಯ ಮೇಲಿನ ದಾಳಿಯನ್ನು ಕತಾರ್ ಖಂಡಿಸಿದೆ. ತನ್ನ ಸಾರ್ವಭೌಮತ್ವದ ಉಲ್ಲಂಘನೆ ಎಂದು ಕತಾರ್ ಆರೋಪಿಸಿದೆ.
ಇರಾನ್ ಯುದ್ಧ, ಇಸ್ರೇಲ್ ಕಾಳಗ, ಅಮೆರಿಕದ ಬಾಂಬ್ ಸೇರಿದಂತೆ ಇಲ್ಲಿಯವರೆಗಿನ ಎಲ್ಲಾ ಭವಿಷ್ಯದ ಬಗ್ಗೆ 2023ರಲ್ಲಷ್ಟೇ ತಿಳಿಸಿದ್ದ ಖ್ಯಾತ ಜ್ಯೋತಿಷಿ ಅಫ್ಶಿನ್ ಇಮ್ರಾನಿ ಭಾರತದ ಬಗ್ಗೆ ಹೇಳಿದ್ದೇನು?
Karnataka News Live: Breaking - ಕತಾರ್, ಇರಾಕ್‌ನ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ಮಾಡಿದ ಇರಾನ್
ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಅಮೆರಿಕ ಭಾಗಿಯಾಗಿರುವುದಕ್ಕೆ ಪ್ರತೀಕಾರವಾಗಿ ಇರಾನ್, ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ದೋಹಾದಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಅಮೆರಿಕ ತನ್ನ ನೆಲೆಗಳಿಂದ ವಿಮಾನಗಳನ್ನು ತೆಗೆದುಹಾಕಿದೆ.
Karnataka News Live: ಮುಗಿಯತಾ ತೈಲ ಸಂಪತ್ತು, ಮೊದಲ ಬಾರಿಗೆ ಆದಾಯ ತೆರಿಗೆ ವಿಧಿಸಲು ಮುಂದಾದ ಪ್ರಮುಖ ಗಲ್ಫ್ ದೇಶ!
ಒಮಾನ್ ತನ್ನ ನಾಗರಿಕರ ಮೇಲೆ ಆದಾಯ ತೆರಿಗೆ ವಿಧಿಸುವ ಮೊದಲ ಗಲ್ಫ್ ರಾಷ್ಟ್ರವಾಗುವ ಯೋಜನೆಯನ್ನು ಪ್ರಕಟಿಸಿದೆ. ಜಿಸಿಸಿ ರಾಷ್ಟ್ರವು 42,000 ರಿಯಾಲ್‌ಗಳು ($109,000) ಅಥವಾ ಅದಕ್ಕಿಂತ ಹೆಚ್ಚಿನ ಆದಾಯದ ಮೇಲೆ 5% ತೆರಿಗೆ ವಿಧಿಸಲು ಯೋಜಿಸಿದೆ.
Karnataka News Live: ಎಂಎಸ್ ಧೋನಿಯಿಂದಲೂ ಮಾಡಲಾಗದ ಐತಿಹಾಸಿಕ ಸಾಧನೆ ಮಾಡಿದ ರಿಷಭ್ ಪಂತ್!
ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 4 ನೇ ದಿನದಂದು ಅವರು ಈ ಸಾಧನೆ ಮಾಡಿದರು.
Karnataka News Live: ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಂದು ರಾತ್ರೋರಾತ್ರಿ ಸ್ಟಾರ್ ಆಗೋದ್ಲು ಈ ಮಹಿಳೆ!
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪ್ರತಿನಿತ್ಯವೂ ಸಾವಿರಾರು ಜನ ಕ್ಯೂನಲ್ಲಿ ಇರುತ್ತಾರೆ. ಆದರೆ ಈ ಮಹಿಳೆ ಮಾತ್ರ ರಾತ್ರೋರಾತ್ರಿ ಸಕತ್ ಫೇಮಸ್ ಆಗೋದ್ರು. ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಾ!
Karnataka News Live: ನಾಸಾ ಪ್ರೋಗ್ರಾಮ್ ಮುಗಿಸಿದ ಮೊದಲ ಭಾರತೀಯ ಮಹಿಳೆ ದಂಗೆಟಿ ಜಾಹ್ನವಿ, 2029ಕ್ಕೆ ಬಾಹ್ಯಾಕಾಶಕ್ಕೆ ಪ್ರಯಾಣ!
ಆಂಧ್ರಪ್ರದೇಶದ ದಂಗೆಟಿ ಜಾಹ್ನವಿ 2029 ರಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ನಾಸಾದ ಅಂತರರಾಷ್ಟ್ರೀಯ ವಾಯು ಮತ್ತು ಬಾಹ್ಯಾಕಾಶ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ.
Karnataka News Live: ಬೆಂಗಳೂರಿನಲ್ಲಿ ಗಾಂಜಾ ಗ್ಯಾಂಗ್ ಅಟ್ಟಹಾಸ; ನಡುರಸ್ತೆಯಲ್ಲೇ ಮಹಿಳೆ ಅಡ್ಡಗಟ್ಟಿ ಕಿರುಕುಳ, ಮನಸೋ ಇಚ್ಛೆ ಹಲ್ಲೆ!
ಬನ್ನೇರುಘಟ್ಟದಲ್ಲಿ ಗಾಂಜಾ ಸೇವಿಸಿದ ಯುವಕರ ಗುಂಪೊಂದು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಸಹಾಯಕ್ಕೆ ಬಂದ ಸ್ನೇಹಿತನನ್ನೇ ಪೊಲೀಸರು ಬಂಧಿಸಿರುವುದು ವಿವಾದಕ್ಕೆ ಕಾರಣವಾಗಿದೆ.
Karnataka News Live: ನಮ್ಮ ದೇಶದಲ್ಲಿ ಬುದ್ಧ ಬೇಕೋ? ಯುದ್ಧ ಬೇಕೋ? ಮಲ್ಲಿಕಾರ್ಜುನ ಖರ್ಗೆ
ರಾಯಚೂರಿನಲ್ಲಿ ನಡೆದ ಬುಡಕಟ್ಟು ಸಾಂಸ್ಕೃತಿಕ ಉತ್ಸವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 371(ಜೆ) ಜಾರಿಗೆ ಬರಲು ತಮ್ಮ ಪಾತ್ರವನ್ನು ಸ್ಮರಿಸಿಕೊಂಡ ಅವರು, ಪ್ರಧಾನಿ ಮೋದಿ ಅವರನ್ನು ತೀವ್ರವಾಗಿ ಟೀಕಿಸಿದರು.
Karnataka News Live: ಡಿಸಿಸಿ ಬ್ಯಾಂಕ್ ನೌಕರರಿಗೆ 15 ವರ್ಷದ ಕರಾರು ಕಿರಿಕಿರಿ; 14 ಜನ ರಾಜೀನಾಮೆ, ಸಹಿ ಹಾಕದವರಿಗೆ ಬಾಗಿಲು ಕಾಯೋ ಶಿಕ್ಷೆ!
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 15 ವರ್ಷಗಳ ಬಾಂಡ್ ಬರೆಸಿಕೊಳ್ಳಲು ಒತ್ತಾಯಿಸಿ ನೌಕರರಿಗೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲಸಕ್ಕೆ ಹಾಜರಾದರೂ ಕೆಲಸ ನೀಡದೆ, ಹೊರಗೆ ಕೂರಿಸಲಾಗುತ್ತಿದೆ ಎಂದು ನೊಂದ ಉದ್ಯೋಗಿಗಳು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
Karnataka News Live: ಅಮೆರಿಕದಲ್ಲಿ 'ಡ್ರೈವರ್‌ಲೆಸ್' ರೋಬೋಟ್ಯಾಕ್ಸಿ ಸೇವೆ ಆರಂಭಿಸಿದ ಎಲೋನ್ ಮಸ್ಕ್, ಪ್ರತಿ ರೈಡ್‌ಗೆ 364 ರೂಪಾಯಿ!
ಎಲಾನ್ ಮಸ್ಕ್‌ರ ಟೆಸ್ಲಾ, ಚಾಲಕರಿಲ್ಲದ ರೋಬೋಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ. ಪ್ರಸ್ತುತ ಆಸ್ಟಿನ್‌ನಲ್ಲಿ ಪ್ರಾಯೋಗಿಕವಾಗಿ ಲಭ್ಯವಿರುವ ಈ ಸೇವೆ, ಭವಿಷ್ಯದ ಸಾರಿಗೆಯನ್ನು ಸೂಚಿಸುತ್ತದೆ.
Karnataka News Live: ಖ್ಯಾತ ಸಾಹಿತಿ ಡಾ.ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕವಿ, ಸಾಹಿತಿ ಹಾಗೂ ಚಲನಚಿತ್ರ ಗೀತರಚನೆಕಾರರಾಗಿ ಪ್ರಸಿದ್ಧರಾಗಿರುವ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ.
Karnataka News Live: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರು ಅಪಘಾತ, ಬೆಂಬಲಿಗರಿಂದ ವ್ಯಕ್ತಿಯ ಮೇಲೆ ಹಲ್ಲೆ!
ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರು ಅಪಘಾತಕ್ಕೀಡಾಗಿದ್ದು, ಓವರ್‌ಟೇಕ್ ವಿಚಾರದಲ್ಲಿ ಗಲಾಟೆ ನಡೆದಿದೆ. ಹೆಗಡೆ ಅವರ ಗನ್‌ಮ್ಯಾನ್ ಮತ್ತು ಚಾಲಕ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ನೆಲಮಂಗಲದಲ್ಲಿ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Karnataka News Live: ಇರಾನ್-ಅಮೆರಿಕ ಸಂಘರ್ಷ - ಡಾಲರ್ ಮೌಲ್ಯ ಹಾಗೂ ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ,
ಇರಾನ್ ಪರಮಾಣು ಕೇಂದ್ರದ ಮೇಲಿನ ಅಮೆರಿಕ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಡಾಲರ್ ಬಲಗೊಂಡು 5 ತಿಂಗಳ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ತೈಲ ಬೆಲೆಯಲ್ಲೂ ಏರಿಳಿತ ಕಂಡುಬಂದಿದೆ.