ಮೊದಲ ಬಾರಿಗೆ ಫ್ಲೈಯಿಂಗ್ ಕಾರು ಅಪಘಾತ, ಹೊತ್ತಿ ಉರಿದು ನೆಲಕ್ಕಪ್ಪಳಿಸಿದ ವಿಡಿಯೋ, ವಿಶ್ವದಲ್ಲೇ ಮೊದಲ ಬಾರಿಗೆ ಫ್ಲೈಯಿಂಗ್ ಕಾರು ಅಪಘಾತವಾಗಿದೆ. ಎರಡು ಫ್ಲೈಯಿಂಗ್ ಕಾರು ಆಗಸದಲ್ಲಿ ಡಿಕ್ಕಿಯಾಗಿ ಬೆಂಕಿ ಹೊತ್ತುಕೊಂಡಿದೆ. ಕೆಲವೇ ಕ್ಷಣದಲ್ಲಿ ನೆಲಕ್ಕಪ್ಪಳಿಸಿದೆ. ಈ ಅಪಘಾತದಲ್ಲಿ ಓರ್ವನಿಗೆ ಗಾಯವಾಗಿದೆ.
ಬೀಜಿಂಗ್ (ಸೆ.18) ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಗೆ ಪರ್ಯಾಯವಾಗಿ ಫ್ಲೈಯಿಂಗ್ ಕಾರು ಪ್ರಯೋಗ ನಡೆಯುತ್ತಿದೆ. ಕೆಲ ದೇಶಗಳಲ್ಲಿ ಈಗಾಗಲೇ ಫ್ಲೈಯಿಂಗ್ ಕಾರುಗಳು ಸೇವೆ ಆರಂಭಿಸಿದೆ. ಇದೇ ಮೊದಲ ಬಾರಿಗೆ ಫ್ಲೈಯಿಂಗ್ ಕಾರು ಅಪಘಾತ ವರದಿಯಾಗಿದೆ. ಎರಡು ಫ್ಲೈಯಿಂಗ್ ಕಾರುಗಳು ಆಗಸದಲ್ಲಿ ಡಿಕ್ಕಿಯಾಗಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡು ನೆಲಕ್ಕಪ್ಪಳಿಸಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆ ದಾಖಲಿಸಲಾಗಿದೆ.
ಏರ್‌ಶೋ ಪ್ರದರ್ಶನದಲ್ಲಿ ಅಪಘಾತ
ಚೀನಾದ ಚಾನ್‌ಚುಂಗ್ ಏರ್‌ಶೋದಲ್ಲಿ ಈ ಘಟನೆ ನಡೆದಿದೆ. ಎಕ್ಸೆಂಪ್ ಏರೋ ಹೆಚ್‌ಟಿ ಸಂಸ್ಥೆಯ ಫ್ಲೈಯಿಂಗ್ ಕಾರು ಅಪಘಾತಕ್ಕೀಡಾಗಿದೆ. ಏರ್‌ಶೋನಲ್ಲಿ ಹಾರಾಟ ಪ್ರದರ್ಶನ ನಡೆಯುತ್ತಿದ್ದ ವೇಳೆ ಅಪಘಾತವಾಗಿದೆ. ಏರ್ ಶೋ ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು. ಹೀಗಾಗಿ ನಿಗಿಧಿತ ಸ್ಥಳದಲ್ಲೇ ಫ್ಲೈಯಿಂಗ್ ಕಾರು ಪ್ರದರ್ಶನ ನೀಡಬೇಕಿತ್ತು. ಸ್ಥಳದ ಕೊರತೆಯಿಂದ ಆಗಸದಲ್ಲಿ ಫ್ಲೈಯಿಂಗ್ ಕಾರು ಅಪಘಾತಕ್ಕೀಡಾಗಿದೆ.
ಬೆಂಗಳೂರು ಮಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್, ಪ್ರಯಾಣ ಸಮಯ 7-8ಗಂಟೆಗೆ ಇಳಿಕೆ
ಅಪಘಾತದ ಬೆನ್ನಲ್ಲೇ ಹೊತ್ತಿಕೊಂಡ ಬೆಂಕಿ
ಫ್ಲೈಯಿಂಗ್ ಕಾರು ಆಗಸದಲ್ಲಿ ಡಿಕ್ಕಿಯಾಗಿದೆ. ಡಿಕ್ಕಿಯಾದ ಬೆನ್ನಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಜನರು ಕಿರುಚಾಡಿದ್ದಾರೆ. ಅಪಘಾತದ ಬೆನ್ನಲ್ಲೇ ನಿಯಂತ್ರಣ ಕಳೆದುಕೊಂಡಿದೆ. ಇತ್ತ ಫ್ಲೈಯಿಂಗ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲ ನಿಮಿಷಗಳಲ್ಲೇ ಫ್ಲೈಯಿಂಗ್ ಕಾರು ನೆಲಕ್ಕೆ ಅಪ್ಪಳಿಸಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳಿ ಹಾಗೂ ಆ್ಯಂಬುಲೆನ್ಸ್ ಸ್ಥಳಕ್ಕೆ ಧಾವಿಸಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರೆ, ಇತ್ತ ಗಾಯಗೊಂಡ ಒರ್ವನನ್ನು ಆಸ್ಪತ್ರೆ ದಾಖಲಿಸಿದ್ದಾರೆ.
ಅಪಘಾತಕ್ಕೆ ನಿರ್ದಿಷ್ಟ ಕಾರಣ ಬಹಿರಂಗವಾಗಿಲ್ಲ. ಈ ಕುರಿತು ಚೀನಾ ಸರ್ಕಾರ ತನಿಖೆಗೆ ಆದೇಶಿಸಿದೆ. ಬರೋಬ್ಬರಿ $300,000 ಮೌಲ್ಯದ ಈ ಫ್ಲೈಯಿಂಗ್ ಕಾರು ಅಪಘಾತದ ಇದೀಗ ಸುರಕ್ಷತಾ ಪ್ರಶ್ನೆ ಹುಟ್ಟುವಂತೆ ಮಾಡಿದೆ. ನಗರ ಪ್ರದೇಶದಳಲ್ಲಿ ಟ್ರಾಫಿಕ್ ಸಮಸ್ಯೆಗೆ ಫ್ಲೈಯಿಂಗ್ ಕಾರು ಉತ್ತಮ ಮಾರ್ಗ ಎಂದು ಹೇಳಲಾಗುತ್ತದೆ. ಆದರೆ ಹೆಚ್ಚು ಹೆಚ್ಚು ಫ್ಲೈಯಿಂಗ್ ಕಾರುಗಳು ಹಾರಾಟ ಆರಂಭಿಸಿದರೆ ಏರ್ ಟ್ರಾಫಿಕ್ ಕಂಟ್ರೋಲ್ ಸಮಸ್ಯೆಯಾಗಲಿದೆ. ಇಷ್ಟೇ ಅಲ್ಲ ವಿಮಾನ ಹಾರಾಟಕ್ಕೂ ಅಡಚಣೆಯಾಗಲಿದೆ. ಇಷ್ಟೇ ಅಲ್ಲ ನೋ ಫ್ಲೈಯಿಂಗ್ ಝೋನ್‌ಗಳಲ್ಲೂ ಫ್ಲೈಯಿಂಗ್ ಕಾರು ಹಾರಾಟ ಮಾಡುವ ಸಾಧ್ಯತೆ ಇದೆ. ಪ್ರತಿ ಫ್ಲೈಯಿಂಗ್ ಕಾರು ಮಾನಿಟರ್ ಮಾಡುವುದು ಸವಲಾಗಲಿದೆ.
ಮೇಲೆ ಹಾರ್ತಿದೆ ಕಾರು ! ಟೆಸ್ಟಿಂಗ್ ವಿಡಿಯೋ ವೈರಲ್, ಶುರುವಾಗಿದೆ ಮುಂಗಡ ಬುಕ್ಕಿಂಗ್
ಏರೋ ಹೆಚ್‌ಟಿ ಕಂಪನಿ 2013ರಲ್ಲಿ ಆರಂಭಗೊಂಡಿದೆ. 2018ರಲ್ಲಿ ಮೊದಲ ಫ್ಲೈಯಿಂಗ್ ಕಾರು ಅಭಿವೃದ್ಧಿಪಡಿಸಿತ್ತು. 2024ರಲ್ಲಿ ಮೊದಲ ಬಾರಿಗೆ ಫ್ಲೈಯಿಂದ್ ಕಾರು ಎಕ್ಸ್‌ಪೋದಲ್ಲಿ ಅನಾವರಣ ಮಾಡಿತ್ತು. 2015ರಿಂದ ಫ್ಲೈಯಿಂಗ್ ಕಾರು ಮಾರಾಟ ಆರಂಭಿಸಿದೆ.
