Donald Trump And Tulsi Gabbard: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು 'hottest in the room' ಎಂದು ಹೊಗಳಿದ್ದಾರೆ.
ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿಕೆಯಿಂದ ವಿಶ್ವದಾದ್ಯಂತ ಚರ್ಚೆಯಲ್ಲಿದ್ದಾರೆ. ಅಮೆರಿಕ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಕುರಿತು ನೀಡಿದ ಹೇಳಿಕೆ ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಡೊನಾಲ್ಡ್ ಟ್ರಂಪ್ ಭಾಷಣದಲ್ಲಿ ತುಳಸಿ ಗಬ್ಬಾರ್ಡ್ ಅವರನ್ನು ಮನಸಾರೆ ಹೊಗಳುತ್ತಿದ್ದರು. ಸಭೆ ಕೋಣೆಯಲ್ಲಿ ತುಳಸಿ ಗಬ್ಬಾರ್ಡ್ ಅವರನ್ನು ನೋಡಿ ಮುಗಳ್ನಗುತ್ತಾ, ‘hottest in the room’ ಎಂದು ಕರೆದರು. ಈ ರೀತಿ ಖುಷಿಯಿಂದ ತುಳಸಿ ಗಬ್ಬಾರ್ಡ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು ಎಂದು ವರದಿಯಾಗಿದೆ.
ಇತ್ತೀಚೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಡಳಿತಾವಧಿಗೆ ಸಂಬಂಧಿಸಿದ ವರದಿಯೊಂದನ್ನು ತುಳಸಿ ಗಬ್ಬಾರ್ಡ್ ಬಿಡುಗಡೆಗೊಳಿಸಿದ್ದರು. ಈ ವರದಿಯಿಂದ ಖುಷಿಯಾಗಿರುವ ಡೊನಾಲ್ಡ್ ಟ್ರಂಪ್ ಬಹಿರಂವಾಗಿ ತುಳಸಿ ಗಬ್ಬಾರ್ಡ್ ಅವರನ್ನು ಹೊಗಳಿದ್ದಾರೆ ಎಂದು ಹೇಳಲಾಗುತ್ತಿದೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಆರೋಪದ ಕುರಿತ ವಿಷಯವನ್ನು ಈ ವರದಿ ಒಳಗೊಂಡಿದೆ. ಈ ವರದಿಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಗೊಳಿಸಲು ಪ್ಲಾನ್ ಮಾಡಿಕೊಂಡಿದ್ದರು ಎಂಬುವುದು ಈ ವರದಿಯಲ್ಲಿ ಉಲ್ಲೇಖವಾಗಿದೆ.
ಬರಾಕ್ ಒಬಾಮಾ ಬಂಧನಕ್ಕೆ ಡೊನಾಲ್ಡ್ ಟ್ರಂಪ್ ಪ್ಲಾನ್?
ಈ ವರದಿಯನ್ನಾಧರಿಸಿ ಬರಾಕ್ ಒಬಾಮಾ ಬಂಧನಕ್ಕೆ ಡೊನಾಲ್ಡ್ ಟ್ರಂಪ್ ಚಿಂತಿಸುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ನಿನ್ನೆಯಷ್ಟೇ ಬರಾಕ್ ಒಬಾಮಾ ಅವರನ್ನು ಬಂಧಿಸುವ AI ರಚಿತ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಡೊನಾಲ್ಡ್ ಟ್ರಂಪ್ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
ಬರಾಕ್ ಒಬಾಮಾ ಅವರ ಕುರಿತಾದ ಈ ವರದಿಯಿಂದ ಡೊನಾಲ್ಡ್ ಟ್ರಂಪ್ ಸಂತೋಷವಾಗಿದ್ದಾರೆ. ಈ ವರದಿಯನ್ನು ಸಿದ್ಧಪಡಿಸಿರುವ ತುಳಸಿ ಗಬ್ಬಾರ್ಡ್ ಮತ್ತು ಅವರ ತಂಡದ ಕಾರ್ಯಕ್ಕೆ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇನ್ನು ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಟ್ರಂಪ್ ಸಲಹೆ ನೀಡಿದ್ದಾರೆ.
ಹಾಟ್ ಆಂಡ್ ಹಾಟೆಸ್ಟ್ ಪದ ಬಳಸುವ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆ ಮತ್ತು ಬಳಸುವ ಪದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಯಾರ ಬಗ್ಗೆಯಾದ್ರೂ ಮೆಚ್ಚುಗೆ ಮಾತು ಹೇಳಲು ಅಥವಾ ಹೊಗಳಲು ಡೊನಾಲ್ಡ್ ಟ್ರಂಪ್, ಹಾಟ್ ಮತ್ತು ಹಾಟೆಸ್ಟ್ ಎಂಬ ಪದಗಳನ್ನು ಬಳಕೆ ಮಾಡುತ್ತಾರೆ. ಇತ್ತೀಚೆಗೆ ತಮ್ಮ ಅಮೆರಿಕಾವನ್ನು ವಿಶ್ವದ ಅತ್ಯಂತ ಹಾಟೆಸ್ಟ್ ದೇಶ ಎಂದು ಕರೆದಿದ್ದರು. ಈ ಬಾರಿ ಉನ್ನತ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿಯನ್ನು ಹೊಗಳಲು ಇಂತಹ ಪದಗಳನ್ನೇ ಬಳಕೆ ಮಾಡುವ ಮೂಲ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ.
ಯಾರು ಈ ತುಳಸಿ ಗಬ್ಬಾರ್ಡ್?
ತುಳಸಿ ಅವರ ತಂದೆ, ತಾಯಿ ಇಬ್ಬರೂ ಯುರೋಪಿಯನ್ ಮೂಲದ ಕ್ರೈಸ್ತ ಧರ್ಮೀಯರು. ಆದರೆ ಕಾಲ ಕ್ರಮೇಣ ತುಳಸಿ ಅವರ ತಂದೆ ಹಿಂದೂ ಧರ್ಮದಲ್ಲಿ ಆಸಕ್ತಿ ಹೊಂದಿ ಅದರ ಅಚರಣೆಗೆ ತೊಡಗಿದ್ದರು. ಹೀಗಾಗಿ ತುಳಿಸಿ ಕೂಡಾ ಬಾಲ್ಯದಲ್ಲಿಯೇ ಹಿಂದೂ ಧರ್ಮವನ್ನು ಅಪ್ಪಿಕೊಂಡಿದ್ದರು. ಸದ್ಯ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತುಳಸಿ ಗಬ್ಬಾರ್ಡ್, ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ಸುರಕ್ಷತೆಯ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದರು. ಇವಿಎಂಗಳನ್ನು ಹ್ಯಾಕ್ ಮಾಡಿ ಮತಗಳ ಫಲಿತಾಂಶವನ್ನು ತಿರುಚಬಹುದು ಎಂದು ದೀರ್ಘಕಾಲದಿಂದ ಈ ವ್ಯವಸ್ಥೆಗಳು ದುರ್ಬಲವಾಗಿವೆ ಎಂಬ ಪುರಾವೆಗಳನ್ನು ತಮ್ಮ ತಂಡ ಕಂಡುಕೊಂಡಿದೆ ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಭಾರತದಲ್ಲಿ ಬಹು ಚರ್ಚೆಗೆ ಗ್ರಾಸವಾಗಿತ್ತು.
