ಪೊಲೀಸೊಬ್ಬ ಮಹಿಳೆಯ ಮನೆ ಶೋಧದ ವೇಳೆ ಕದಿಯಬಾರದನ್ನು ಕದ್ದಿದ್ದಾನೆ. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನಿಗೆ ಜೈಲು ಶಿಕ್ಷೆಯಾಗಿದೆ. ಆತ ಕದ್ದಿದ್ದೇನು ಇಲ್ಲಿದೆ ಡಿಟೇಲ್..

ಆತನೋರ್ವ ಪೋಲೀಸ್, ಕಳ್ಳನಾಗಿರಲಿಲ್ಲ. ಆತನಿಗೆ ಅದೇನು ವಿಚಿತ್ರ ಚಟವಿತ್ತೋ ತಿಳಿಯದು ಆತ ಮಹಿಳೆಯ ಮನೆ ಶೋಧ ಮಾಡುವುದಕ್ಕೆ ಬಂದು ಕದಿಯಬಾರದನ್ನು ಕದ್ದಿದ್ದ. ಆತನ ಈ ಕೃತ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬಳಿಕ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಆತ ಈಗ ಕಂಬಿ ಹಿಂದೆ ಕೂರುವಂತಾಗಿದೆ. ಹಾಗಿದ್ರೆ ಆತ ಕದ್ದಿದ್ದು ಏನು ಎಂಬ ಕುತೂಹಲ ನಿಮಗಿದ್ಯಾ ಹಾಗಿದ್ರೆ ಮುಂದೆ ಓದಿ..

ಬಾಡಿ ಕ್ಯಾಮ್‌ಗೆ ಕಾಣದಂತೆ ಪೊಲೀಸ್ ಕದ್ದಿದ್ದು ಏನು?

ಅಂದಹಾಗೆ ಈ ಘಟನೆ ನಡೆದಿರುವುದು ಇಂಗ್ಲೆಂಡ್‌ನಲ್ಲಿ, ಅದೂ 2024ರ ಸೆಪ್ಟೆಂಬರ್‌ನಲ್ಲಿ. ಪೊಲೀಸ್ ಸಮವಸ್ತ್ರದಲ್ಲೇ ಮಹಿಳೆಯೊಬ್ಬಳ ಮನೆ ಶೋಧಕ್ಕೆ ಬಂದಿದ್ದ ಆತ ಅಲ್ಲಿ ಚಿನ್ನವನ್ನೋ ಬೆಳ್ಳಿ ಬಂಗಾರವವನ್ನೋ ಅಥವಾ ಹಣವನ್ನೋ ಕದ್ದಿರಲಿಲ್ಲ, ಬದಲಾಗಿ ಆ ಮನೆಯಲ್ಲಿ ಮಹಿಳೆಯ ಡ್ರಾಯರ್‌ನಲ್ಲಿದ್ದ ಆಕೆಯ ಒಳ ಉಡುಪನ್ನು ಕದ್ದಿದ್ದ. ಹೌದು ವಿಚಿತ್ರ ಎನಿಸಿದರು ಸತ್ಯ. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮಾರ್ಸಿನ್ ಝೀಲಿನ್ಸ್ಕಿ ಮಹಿಳೆಯೊಬ್ಬರ ಮನೆಯನ್ನು ಶೋಧಿಸುವಾಗ ಅವರ ಒಳ ಉಡುಪುಗಳನ್ನು ಕದಿಯುತ್ತಿರುವುದು ಕ್ಯಾಮರಾದಲ್ಲಿ ಸೆರೆ ಆಗಿದೆ.

ಮಹಿಳೆಯ ಒಳ ಉಡುಪು ಕದ್ದವನಿಗೆ ಜೈಲು

ಈ ಬಗ್ಗೆ ವಿಚಾರಣೆ ನಡೆಸಿದ ಕೇಂಬ್ರಿಡ್ಜ್ ಕ್ರೌನ್ ನ್ಯಾಯಾಲಯವು ಮಾರ್ಸಿನ್ ಝೀಲಿನ್ಸ್ಕಿಗೆ 4 ತಿಂಗಳ ಕಾಲ ಜೈಲು ಶಿಕ್ಷೆ ಘೋಷಿಸಿದೆ. ಸೆಪ್ಟೆಂಬರ್‌ನಲ್ಲಿ ಈ ಕಿತಾಪತಿ ಮಾಡಿದ್ದ ಮಾರ್ಸಿನ್ ನವಂಬರ್‌ನಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ವಿಚಾರಣೆ ವೇಳೆ ಈತ ತಪ್ಪೊಪ್ಪಿಕೊಂಡಿದ್ದು, ಹಾಗೂ ಆತ ಕೃತ್ಯವೆಸಗಿದ್ದಕ್ಕೆ ಸಾಕ್ಷ್ಯವಾಗಿ ಘಟನೆ ಸಿಸಿಟಿಯಲ್ಲಿ ರೆಕಾರ್ಡ್ ಆಗಿದ್ದರಿಂದ ಈತನಿಗೆ 4 ತಿಂಗಳು ಶಿಕ್ಷೆಯಾಗಿದೆ. ಪೊಲೀಸ್ ಅಧಿಕಾರವನ್ನು ಅನುಚಿತ ಕೆಲಸಕ್ಕೆ ಬಳಸಿದ ಆರೋಪವನ್ನು ಈತನ ಮೇಲೆ ಹೊರಿಸಲಾಗಿತ್ತು.

ಈಗ ಶಿಕ್ಷೆಗೊಳಗಾಗಿರುವ ಮಾರ್ಸಿನ್ ಝೀಲಿನ್ಸ್ಕಿ ಈ ಕೃತ್ಯ ನಡೆದ ವೇಳೆ ಹರ್ಟ್‌ಫೋರ್ಡ್‌ಶೈರ್ ಪೊಲೀಸರಿಗಾಗಿ ಕೆಲಸ ಮಾಡುತ್ತಿದ್ದ. ಸೆಪ್ಟೆಂಬರ್ 12, 2024 ರಂದು ಸ್ಟೀವನೇಜ್‌ನಲ್ಲಿರುವ ಮಹಿಳೆಯ ಮನೆಯಲ್ಲಿ ಸೆಕ್ಷನ್ 32 ಹೆಸರಿನ ಶೋಧ ನಡೆಸಿದಾಗ ಅಲ್ಲಿ ಮಹಿಳೆಯ ಡ್ರಾಯರ್‌ನಲ್ಲಿದ್ದ ಒಂದು ಜೊತೆ ಒಳ ಉಡುಪನ್ನು ಕದ್ದು ಮೆಲ್ಲನೇ ತನ್ನ ಪ್ಯಾಂಟ್ ಜೇಬಿನೊಳಗೆ ಇಳಿಸಿಕೊಂಡಿದ್ದ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಹರ್ಟ್‌ಫೋರ್ಡ್‌ಶೈರ್ ಪೊಲೀಸ್ ನನ್ನ ನಿಕ್ಕರ್‌ಗಳನ್ನು ಕದ್ದನು. ನಾನು ಸೆಲ್‌ಗಳಲ್ಲಿದ್ದಾಗ ನನ್ನ ಮನೆಯನ್ನು ಶೋಧಿಸಲಾಯಿತು ಮತ್ತು ಪಿಸಿ ಮಾರ್ಸಿನ್ ಝೀಲಿನ್ಸ್ಕಿ ನನ್ನ ಒಳ ಉಡುಪು ಡ್ರಾಗೆ ಹೋಗಿ ಅವನಿಗೆ ಬೇಕಾದ ನನ್ನ ಒಳ ಉಡುಪುಗಳನ್ನು ತೆಗೆದುಕೊಂಡು ಅದನ್ನು ಅವನ ಬಾಡಿ ಕ್ಯಾಮ್‌ನಿಂದ ದೂರವಿಟ್ಟು ಅವನ ಹಿಂದಿನ ಜೇಬಿನಲ್ಲಿ ಇಟ್ಟನು ಆದರೆ ನನ್ನ ರಿಂಗ್ ಕ್ಯಾಮ್ ಅವನನ್ನು ಹಿಡಿದಿದೆ ಎಂದು ಬರೆದು WeGotitBack(@NotFarLeftAtAll)ಎಂಬ ಎಕ್ಸ್ ಖಾತೆಯಿಂದ ಘಟನೆಯ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಚಿತ್ರ ಘಟನೆ ಇಂಗ್ಲೆಂಡ್ ಜನರನ್ನು ಅಚ್ಚರಿಗೀಡು ಮಾಡಿದ್ದಯ, ಆತ ಏಕೆ ಮಹಿಳೆಯ ಅಂಡರ್‌ವೇರ್ ಕದ್ದ, ಆತ ಅದನ್ನು ಧರಿಸುತ್ತಿದ್ದನೆ ಎಂದು ಪ್ರಶ್ನೆ ಮಾಡಿದ್ದಾರೆ.

ಈತನ ಈ ಕೃತ್ಯದಿಂದ ಹರ್ಟ್‌ಫೋರ್ಡ್‌ಶೈರ್ ಪೊಲೀಸ್ ಇಲಾಖೆಗೆ ತೀವ್ರ ಮುಜುಗರವಾಗಿದೆ. ಅವನ ಕ್ರಿಮಿನಲ್ ನಡವಳಿಕೆಯು ಪೊಲೀಸ್ ವ್ಯವಸ್ಥೆಯ ಖ್ಯಾತಿಗೆ ಹಾನಿ ಮಾಡಿದೆ ಮತ್ತು ಸಾರ್ವಜನಿಕರಿಗೆ ಮತ್ತು ಪೊಲೀಸ್ ಸೇವೆಯು ನಿಂತಿರುವ ಮೌಲ್ಯಗಳಿಗೆ ಮೂಲಭೂತ ದ್ರೋಹ ಮಾಡಿದೆ ಎಂದು ಹರ್ಟ್‌ಫೋರ್ಡ್‌ಶೈರ್ ಕಾನ್‌ಸ್ಟಾಬ್ಯುಲರಿ ಸಹಾಯಕ ಮುಖ್ಯ ಕಾನ್‌ಸ್ಟೆಬಲ್ ಗೆನ್ನಾ ಟೆಲ್ಫರ್ ಹೇಳಿದ್ದಾರೆ.

ಇದನ್ನೂ ಓದಿ: Ozempic Vulva: ತೂಕ ಇಳಿಕೆಗೆ ಪ್ರಸಿದ್ಧಿ ಪಡೆದಿರುವ ಓಜೆಂಪಿಕ್‌ ಔಷಧಿ ಎಷ್ಟು ಅಪಾಯಕಾರಿ

ಇದನ್ನೂ ಓದಿ: ಕ್ಲಾಸಲ್ಲಿ ಕೆನ್ನೆಗೆ ಬಾರಿಸಿದ್ದಕ್ಕೆ ಸೇಡು: ಲಂಚ್‌ ಬಾಕ್ಸ್‌ನಲ್ಲಿ ಗನ್ ತುಂಬಿಕೊಂಡು ಬಂದು ಶಿಕ್ಷಕನಿಗೆ ಶೂಟ್

Scroll to load tweet…