ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಸೇರಿದಂತೆ ಪ್ರಭಾವಿ ಟೆಕ್‌ ಸಿಇಒಗಳಿಗೆ ಗುರುವಾರ ಔತಣಕೂಟ ಹಮ್ಮಿಕೊಂಡರು.

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಸೇರಿದಂತೆ ಪ್ರಭಾವಿ ಟೆಕ್‌ ಸಿಇಒಗಳಿಗೆ ಗುರುವಾರ ಔತಣಕೂಟ ಹಮ್ಮಿಕೊಂಡರು. ಈ ವೇಳೆ. ‘ಈ ಉನ್ನತ ಐಕ್ಯೂ ಗುಂಪು ಅಮೆರಿಕ ವಾಣಿಜ್ಯೋದ್ಯಮದಲ್ಲಿ ಕ್ರಾಂತಿ ನಡೆಸಲಿದೆ ಹಾಗೂ ಅದನ್ನು ಮುನ್ನಡೆಲಿದೆ’ ಎಂದರು. ಭಾರತ, ಚೀನಾ, ರಷ್ಯಾ ಸೇರಿ ಹಲವು ದೇಶಗಳ ನಡುವೆ ಟ್ರಂಪ್ ಸಂಘರ್ಷಕ್ಕಿಳಿದಾಗಲೇ ಈ ಸಭೆ ಆಯೋಜಿಸಿದ್ದುದು ವಿಶೇಷ.

ಔತಣದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌, ಆ್ಯಪಲ್ ಸಿಇಒ ಟಿಮ್ ಕುಕ್ , ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್‌ ಕೂಡ ಇದ್ದರು. ಈ ವೇಳೆ, ಪಿಚೈ, ನಾದೆಳ್ಲ ಸೇರಿ ಎಲ್ಲರೂ ಅಮೆರಿಕದ ಆರ್ಥಿಕತೆಗೆ ತಮ್ಮ ದೇಶ ನೀಡುತ್ತಿರುವ ಕೊಡುಗೆ ವಿವರಿಸಿದರು.

ಆದರೆ ಟೆಸ್ಲಾ ಮುಖ್ಯಸ್ಥ ಹಾಗೂ ಟ್ರಂಪ್‌ ಮಾಜಿ ಮಿತ್ರ ಎಲಾನ್‌ ಮಸ್ಕ್‌ಗೆ ಔತಣಕ್ಕೆ ಆಹ್ವಾನವಿರಲಿಲ್ಲ.