ಖಲಿಸ್ತಾನಿ ಉಗ್ರಗಾಮಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಆಪ್ತನಾದ, ಖಲಿಸ್ತಾನಿ ಉಗ್ರ ಇಂದರ್‌ಜೀತ್ ಗೋಸಾಲ್‌ನನ್ನು ಕೆನಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಒಟ್ಟಾವಾ: ಖಲಿಸ್ತಾನಿ ಉಗ್ರಗಾಮಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಆಪ್ತನಾದ, ಖಲಿಸ್ತಾನಿ ಉಗ್ರ ಇಂದರ್‌ಜೀತ್ ಗೋಸಾಲ್‌ನನ್ನು ಕೆನಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಭಾರತ ಮತ್ತು ಕೆನಡಾ ಅಂತಾರಾಷ್ಟ್ರೀಯ ಅಪರಾಧ ತಡೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಆತನ ಬಂಧನವಾಗಿದೆ.
ಈತ ಉಗ್ರ ನಿಜ್ಜರ್ ಸಾವಿನ ಬಳಿಕ ದೇಶದಲ್ಲಿ ಸಿಖ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಸಂಘಟನೆಯ ಪ್ರಮುಖ ಸಂಘಟಕನಾಗಿದ್ದ. ಅಲ್ಲದೆ ಪನ್ನೂನ ಭದ್ರತಾ ಅಧಿಕಾರಿಯೂ ಕೆಲಸ ಮಾಡಿದ್ದ.
ಬಂದೂಕುಗಳನ್ನು ಹೊಂದಿದ್ದಕ್ಕೆ ಸಂಬಂಧಿಸಿದ ಹಲವು ಆರೋಪಗಳನ್ನು ಆತ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಕಳೆದೊಂದು ವರ್ಷದಲ್ಲಿ ಪೊಲೀಸರು ಆತನನ್ನು ಬಂಧಿಸುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಕಳೆದ ನವೆಂಬರ್‌ನಲ್ಲಿ ಹಿಂದೂ ದೇವಾಲಯವೊಂದರಲ್ಲಿ ನಡೆದ ಹಿಂಸಾತ್ಮಕ ಘಟನೆಗೆ ಸಂಬಂಧಿಸಿದಂತೆ ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದರು.
ಪ್ರವಾಸಿಗರೇ ಎಚ್ಚರ! ಈ ದೇಶದಲ್ಲಿ ಭಾರತೀಯರ ಮೇಲೆಯೇ ಹೆಚ್ಚು ದಾಳಿ
Australia ethnic violence against Indians: ಐಷಾರಾಮಿ ಜೀವನಕ್ಕಾಗಿ ವಿದೇಶಕ್ಕೆ ತೆರಳುವ ಭಾರತೀಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ವಿದೇಶದಲ್ಲಿ ಭಾರತೀಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಇತ್ತೀಚೆಗೆ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಭಾರತೀಯ ಯುವಕ ಚರಣ್‌ಪ್ರೀತ್‌ನ ಮೇಲೆ ನಡೆದ ಜನಾಂಗೀಯ ದಾಳಿಯು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಚರಣ್‌ಪ್ರೀತ್‌ಗೆ ನೀಡಿದ ಸಂದರ್ಶನದಲ್ಲಿ, ಹಲ್ಲೆಕೋರರು 'ಭಾರತೀಯ, ಇಲ್ಲಿಂದ ಓಡಿಹೋಗು' ಎಂದು ಕೂಗಿ, ನನ್ನನ್ನು ಮೂರ್ಛೆ ಬರುವಂತೆ ಹೊಡೆದರು ಎಂದು ಹೇಳಿದ್ದಾರೆ. ಈ ಘಟನೆಯು ವಿದೇಶದಲ್ಲಿ ಭಾರತೀಯರ ಮೇಲಿನ ಜನಾಂಗೀಯ ದಾಳಿಗಳ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ದಾಳಿ:
ಒಂದು ವರದಿ ಪ್ರಕಾರ, 2008ರಿಂದ 2025ರವರೆಗೆ ಆಸ್ಟ್ರೇಲಿಯಾದಲ್ಲಿ ಭಾರತೀಯರ ವಿರುದ್ಧ ಸುಮಾರು 200 ಜನಾಂಗೀಯ ದಾಳಿಗಳು ದಾಖಲಾಗಿವೆ. ಇವುಗಳಲ್ಲಿ 150ಕ್ಕೂ ಹೆಚ್ಚು ದಾಳಿಗಳು 2008-2010ರ ಅವಧಿಯಲ್ಲಿ ನಡೆದಿದ್ದು, ಇದು ಭಾರತ-ಆಸ್ಟ್ರೇಲಿಯಾ ರಾಜತಾಂತ್ರಿಕ ಸಂಬಂಧಗಳಲ್ಲಿ ಉದ್ವಿಗ್ನತೆಗೆ ಕಾರಣವಾಯಿತು. ಆದರೆ, ಕೇವಲ 23 ದಾಳಿಗಳನ್ನು ಮಾತ್ರ ಅಧಿಕೃತವಾಗಿ ಜನಾಂಗೀಯ ಪ್ರೇರಿತ ಎಂದು ಗುರುತಿಸಲಾಗಿದೆ.
