ಶಾಂಘೈ ಶೃಂಗದ ಫೋಟೋ ಸೆಷನ್ ವೇಳೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರು ಹಾದುಹೋಗುವಾಗ ಯಾರಿಗೂ ಬೇಡವಾದ ವ್ಯಕ್ತಿಯೊಬ್ಬ ಮೂಲೆಯಲ್ಲಿ ನಿಂತು ನೋಡುವಂತೆ ನಿಂತಿದ್ದ ದೃಶ್ಯವೊಂದು ಭಾರೀ ವೈರಲ್ ಆಗಿದೆ.
ಟಿಯಾನ್‌ಜಿನ್: ಶಾಂಘೈ ಶೃಂಗದ ಫೋಟೋ ಸೆಷನ್ ವೇಳೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರು ಹಾದುಹೋಗುವಾಗ ಯಾರಿಗೂ ಬೇಡವಾದ ವ್ಯಕ್ತಿಯೊಬ್ಬ ಮೂಲೆಯಲ್ಲಿ ನಿಂತು ನೋಡುವಂತೆ ನಿಂತಿದ್ದ ದೃಶ್ಯವೊಂದು ಭಾರೀ ವೈರಲ್ ಆಗಿದೆ.
ಫೋಟೋಗೆ ಬಂದಿದ್ದ ಶೆಹಬಾಜ್‌ರನ್ನು ಕ್ಸಿ ಸ್ವಾಗತಿಸಿದ್ದರು. ಬಳಿಕ ಮೋದಿ ಮತ್ತು ಪುಟಿನ್ ಒಟ್ಟಿಗೆ ಬಂದಿದ್ದಾರೆ. ಇಬ್ಬರನ್ನು ಸ್ವಾಗತಿಸಿದ ಕ್ಸಿ, ಕೆಲ ಹೊತ್ತು ನಗೆ ಚಟಾಕಿಯಲ್ಲಿ ತೊಡಗಿದ್ದರು. ಬಳಿಕ ಮೋದಿ ಮತ್ತು ಪುಟಿನ್ ಒಟ್ಟಿಗೆ ತಮ್ಮ ಸ್ಥಾನದ ಕಡೆಗೆ ನಗುನಗುತ್ತಲೇ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮೋದಿ ಮತ್ತು ಪುಟಿನ್‌ರನ್ನು ಪಾಕ್ ಪ್ರಧಾನಿ ಷರೀಫ್ ಕೈಲಾಗದ ವ್ಯಕ್ತಿಯಂತೆ ನೋಡುತ್ತಾ ನಿಂತಿದ್ದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಗೌರವ ಪ್ರತೀಕವಾಗಿತ್ತು ಎಂಬ ಮಾತು ಕೇಳಿಬಂದಿವೆ.
ಒನ್ ಸೈಡೆಡ್ ಡಿಸಾಸ್ಟರ್..' ಭಾರತದ ಜೊತೆಗಿನ ಸಂಬಂಧ ವಿಪತ್ತು ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನವದೆಹಲಿ : ಕೊನೆಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ನೇರಾನೇರ ಯುದ್ಧಕ್ಕೆ ಇಳಿದಿದ್ದಾರೆ. ಶಾಂಗೈ ಸಹಕಾರ ಸಂಘದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆತ್ಮೀಯ ಮಾತುಕತೆಯ ಬೆನ್ನಲ್ಲಿಯೇ ಭಾರತದ ಜೊತೆಗಿನ ಸಂಬಂಧವನ್ನು ಏಕಪಕ್ಷೀಯ ವಿಪತ್ತು ಎಂದು ಅಮೆರಿಕ ಅಧ್ಯಕ್ಷ ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಚೀನಾ ಮತ್ತು ರಷ್ಯಾ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗಿನ ಸಂಬಂಧವನ್ನು 'ಏಕಪಕ್ಷೀಯ ವಿಪತ್ತು' ಎಂದು ಕರೆದು ಅಚ್ಚರಿ ಮೂಡಿಸಿದ್ದಾರೆ.
ಅಮೆರಿಕ ಭಾರತದಲ್ಲಿ ಸೀಮಿತ ವ್ಯವಹಾರ ನಡೆಸಿದೆ, ಆದರೆ ಅಮೆರಿಕಕ್ಕೆ ಭಾರತ ಹೆಚ್ಚಿನ ಸರಕುಗಳನ್ನು ರವಾನಿಸಿದೆ ಎಂದು ಟ್ರಂಪ್ ವಾದಿಸಿದ್ದಾರೆ. ನವದೆಹಲಿಯ ಹೆಚ್ಚಿನ ಸುಂಕಗಳಿಂದಾಗಿ ಅಮೆರಿಕದ ಕಂಪನಿಗಳಿಗೆ ದೇಶದೊಳಗೆ ಮಾರಾಟ ಮಾಡಲು ಕಷ್ಟವಾಗುತ್ತಿದೆ ಎಂದು ಅವರು ದೂಷಿಸಿದರು ಮತ್ತು ಭಾರತವು ರಷ್ಯಾದಿಂದ ತೈಲ ಮತ್ತು ಮಿಲಿಟರಿ ಉತ್ಪನ್ನಗಳನ್ನು ನಿರಂತರವಾಗಿ ಖರೀದಿಸುತ್ತಿರುವುದರ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಭಾರತದೊಂದಿಗೆ ನಾವು ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ, ಆದರೆ ಅವರು ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ ಎಂಬುದು ಕೆಲವೇ ಜನರಿಗೆ ಅರ್ಥವಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ನಮಗೆ ಬೃಹತ್ ಪ್ರಮಾಣದ ಸರಕುಗಳನ್ನು ಮಾರಾಟ ಮಾಡುತ್ತಾರೆ. ಆ ಮೂಲಕ ಅವರ ಅತಿದೊಡ್ಡ "ಕ್ಲೈಂಟ್" ನಾವಾಗಿದ್ದೇವೆ, ಆದರೆ ನಾವು ಅವರಲ್ಲಿ ಬಹಳ ಕಡಿಮೆ ಮಾರಾಟ ಮಾಡುತ್ತೇವೆ. ಇಲ್ಲಿಯವರೆಗೆ ಸಂಪೂರ್ಣವಾಗಿ ಏಕಪಕ್ಷೀಯ ಸಂಬಂಧ ಇದು. ಇದು ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ" ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ.
