ವಾಹನಗಳಿಂದ ತುಂಬಿದ್ದ ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡ್, ಕಾರು ಜಸ್ಟ್ ಮಿಸ್ ದೃಶ್ಯ ಸೆರೆ, ಕೂದಲೆಳೆ ಅಂತರದಲ್ಲಿ ಕಾರು ಅಪಘಾತದಿಂದ ಪಾರಾಗಿದೆ. ಭಯಾನಕ ದೃಶ್ಯ ಕಾರಿನ ಡ್ಯಾಶ್ ಕ್ಯಾಮ್‌ನಲ್ಲಿ ಸೆರೆಯಾಗಿದೆ.
ಒಕ್ಲಾಹೊಮಾ(ಅ.27) ವಿಮಾನ ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ತುರ್ತು ಭೂಸ್ವರ್ಶ ಮಾಡಿದ ಹಲವು ಘಟನೆಗಳು ಇತ್ತೀಚೆಗೆ ನಡೆದಿದೆ. ಅಪಾಯಾಕಾರಿ ಲ್ಯಾಂಡಿಂಗ್ ಹಾಗೂ ಟೇಕ್ಆಫ್ ಕೂಡ ನಡೆದಿದೆ. ಇದೀಗ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಲು ಹೆದ್ದಾರಿಯನ್ನು ಆಯ್ಕೆ ಮಾಡಿಕೊಂಡಿದೆ. ಭಾರಿ ವಾಹನಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ವಿಮಾನ ಲ್ಯಾಂಡ್ ಆಗಿ ವೇಗವಾಗಿ ಸಾಗಿದೆ. ಆದರೆ ವಿರುದ್ದ ದಿಕ್ಕಿನಿಂದ ವೇಗವಾಗಿ ಸಂಚರಿಸುತ್ತಿದ್ದ ಕಾರು ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ಘಟನೆ ಅಮೆರಿಕದ ಒಕ್ಲಾಹೊಮಾ ನಗರದಲ್ಲಿ ನಡೆದಿದೆ.
ಟೆಸ್ಲಾ ಕಾರು ಅಪಘಾತದಿಂದ ಜಸ್ಟ್ ಮಿಸ್
ಟೆಸ್ಲಾ ಕಾರಿನಲ್ಲಿ ಮ್ಯಾಥ್ಯೂ ಟೊಪಿಚಾನ್ ಇದೇ ಹೆದ್ದಾರಿ ಮೂಲಕ ವೇಗವಾಗಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಭಯ ಹಾಗೂ ಆಘಾತದಿಂದ ಕೆಲ ಹೊತ್ತು ಸ್ತಬ್ಧವಾಗಿತ್ತು ಎಂದು ಮ್ಯಾಥ್ಯೂ ಹೇಳಿದ್ದಾರೆ. ನಾನು ಕಾರಿನಲ್ಲಿ ವೇಗವಾಗಿ ಸಾಗುತ್ತಿದ್ದೆ. ಅದು ಹೆದ್ದಾರಿಯ ಸಣ್ಣ ಕರ್ವ್ ಹಾಗೂ ಬಳಿಕ ನೇರ ರಸ್ತೆ. ಈ ರಸ್ತೆಯಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ವಿಮಾನ ಲ್ಯಾಂಡ್ ಆಗಿದೆ. ಎಲ್ಲವೂ ಮುಗಿದೇ ಹೋಯ್ತು ಎಂದುಕೊಳ್ಳುವಷ್ಟರಲ್ಲೇ ಸುರಕ್ಷಿತವಾಗಿದ್ದೆ. ಕೆಲವೆ ಕೆಲವು ಅಂತರದಲ್ಲಿ ಅಪಘಾತದಿಂದ ಬಚಾವ್ ಆದೆ ಎಂದು ಮ್ಯಾಥ್ಯೂ ಹೇಳಿದ್ದಾರೆ.
ಮಿಲಿಟರಿ ವಿಮಾನ ತುರ್ತು ಭೂಸ್ಪರ್ಶ
ಒಕ್ಲಹೊಮಾ ಹೆದ್ದಾರಿಯಲ್ಲಿ ಮಿಲಿಟರಿ ವಿಮಾನ ತುರ್ತುು ಭೂಸ್ವರ್ಶ ಮಾಡಿದೆ. ತರಬೇತಿ ವಿಮಾನ ಹಾರಟದ ವೇಳೆ ಎಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವೇ ಕ್ಷಣದಲ್ಲಿ ಎಂಜಿನ್ ಫೈಲ್ಯೂರ್ ಆಗಿದೆ. ಹೀಗಾಗಿ ಮಿಲಿಟರಿ ಸಿಬ್ಬಂದಿಗಳಿಗೆ ವಿಮಾನ ತುರ್ತು ಭೂಸ್ಪರ್ಶ ಮಾಡದೇ ಬೇರೆ ದಾರಿ ಇರಲಿಲ್ಲ.ಆದರೆ ಹತ್ತಿರದಲ್ಲಿ ಯಾವುದೇ ವಿಮಾನ ನಿಲ್ದಾಣಗಳು ಇರಲಿಲ್ಲ. ಮಿಲಿಟರಿ ಏರ್‌ಬೇಸ್ ಕೂಡ ದೂರವಿತ್ತು. ಕೆಲವೇ ಕ್ಷಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದರೆ ಮಾತ್ರ ಪತನ ತಪ್ಪಿಸಲು ಸಾಧ್ಯವಿತ್ತು. ಹೀಗಾಗಿ ಮಿಲಿಟರಿ ವಿಮಾದ ಪೈಲೆಟ್ ಹೆದ್ದಾರಿಯಲ್ಲಿ ಭೂಸ್ಪರ್ಶ ಮಾಡಲು ಪ್ರಯತ್ನಿಸಿದ್ದಾರೆ.
ಹೆದ್ದಾರಿಯಲ್ಲೇ ಯಶಸ್ವಿಯಾಗಿ ವಿಮಾನ ಲ್ಯಾಂಡ್ ಮಾಡಿದ್ದಾರೆ. ಏಕಾಏಕಿ ವಿಮಾನ ಹೆದ್ದಾರಿಯಲ್ಲಿ ಲ್ಯಾಂಡ್ ಆದ ಕಾರಣ ಅಪಾಯದ ಸಾಧ್ಯತೆ ಹೆಚ್ಚಾಗಿತ್ತು. ಆದರೂ ಯಾವುದೇ ಅನಾಹುತವಾಗದೇ ವಿಮಾನ ಸುರಕ್ಷಿತವಾಗಿ ಹೆದ್ದಾರಿಯಲ್ಲಿ ಇಳಿದಿದೆ. ಹೆಚ್ಚಿನ ವಾಹನಗಳು ಇದೇ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದರೂ. ಅಪಘಾತದಿಂದ ಪಾರಾಗಿದೆ.
ಎಐ ಜನರೇಟ್ ವಿಡಿಯೋ ಎಂದ ನೆಟ್ಟಿಗರು
ಇದು ಅಸಲಿ ವಿಡಿಯೋ ಅಲ್ಲ, ಎಐ ಜನರೇಟೆಡ್ ವಿಡಿಯೋ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ವಿಮಾನ ಹೆದ್ದಾರಿಯಲ್ಲಿ ಕ್ರಾಸ್ ಲ್ಯಾಂಡಿಂಗ್ ಆಗಿದೆ. ಹೀಗಾದರೆ ಹೆದ್ದಾರಿಯಿಂದ ವಿಮಾನ ಇಳಿದು ಪಕ್ಕಕ್ಕೆ ಸರಿಯಲಿದೆ. ಇದು ಮಹಾಪತನಕ್ಕೆ ಕಾರಣವಾಗಲಿದೆ. ಆದರೆ ಇಲ್ಲಿ ಅಸಲಿ ವಿಡಿಯೋಗೆ ಎಆ ಮೂಲಕ ವಿಮಾನ ತುರುಕಲಾಗಿದೆ ಎಂದು ಕೆಲವರು ಅಭಿಫ್ರಾಯಪಟ್ಟಿದ್ದಾರೆ.
