ಒತ್ತೆಯಾಳಗಳು ಬಿಡಿ ಶಾಂತಿ ಒಪ್ಪಂದ ಮಾಡಿ, ತಪ್ಪಿದರೆ ಕತೆ ಮುಗಿಸ್ತೇನೆ; ಹಮಾಸ್‌ಗೆ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಭಾನುವಾರದೊಳಗೆ ಇಸ್ರೇಲ್ ಜೊತೆ ಶಾಂತಿ ಮಾಕುತೆಯಾಗಬೇಕು. ಇಲ್ಲದಿದ್ದರೆ ನರಕ ತೋರಿಸುತ್ತೇನೆ ಎಂದು ಡೋನಾಲ್ಡ್ ಟ್ರಂಪ್, ಹಮಾಸ್‌ಗೆ ವಾರ್ನಿಂಗ್ ನೀಡಿದ್ದಾರೆ.

ವಾಶಿಂಗ್ಟನ್ (ಅ.03) ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವೆ ಶಾಂತಿ ಮಾತುಕತೆಗೆ ಪ್ರಯತ್ನಿಸಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ. ಟ್ರಂಪ್ ಮಾತನ್ನು ಹಮಾಸ್ ಕೇಳಿಸಿಕೊಳ್ಳಲೇ ಇಲ್ಲ, ಇತ್ತ ಇಸ್ರೇಲ್ ತನ್ನ ನಿರ್ಧಾರದಿಂದ ಒಂದಿಂಚು ಹಿಂದೆ ಸರಿದಿಲ್ಲ. ಇದರ ನಡುವೆ ಪಾಕಿಸ್ತಾನ ಸೇರಿದಂತೆ ಕೆಲ ರಾಷ್ಟ್ರಗಳನ್ನು ಸೇರಿಸಿಕೊಂಡ ಪ್ಯಾಲೆಸ್ತಿನ್ ಶಾಂತಿ ಒಪ್ಪಂದ ಭಾರಿ ಹೈಡ್ರಾಮ ನಡೆಸಿದರೂ ಪ್ರಯೋಜನವಾಗಲಿಲ್ಲ. ತನ್ನ ನೊಬೆಲ್ ಪ್ರಶಸ್ತಿಗಾಗಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡ ಬೆನ್ನಲ್ಲೇ ಡೋನಾಲ್ಡ್ ಟ್ರಂಪ್ ಇದೀಗ ಉಗ್ರ ಸ್ವರೂಪ ತಾಳಿದ್ದಾರೆ. ಭಾನುವಾರದೊಳಗೆ ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿರುವ ಇಸ್ರೇಲಿಗರನ್ನು ಬಿಡುಗಡೆ ಮಾಡಬೇಕು. ಇಸ್ರೇಲ್ ಜೊತೆಗೆ ಶಾಂತಿ ಮಾತುಕತೆ ಒಪ್ಪಂದ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಇದುವರೆಗೂ ನೋಡಿರದ ನರಕ ತೋರಿಸುತ್ತೇನೆ ಎಂದು ಟ್ರಂಪ್ ಕೊನೆಯ ವಾರ್ನಿಂಗ್ ನೀಡಿದ್ದಾರೆ.

ಭಾನುವಾರ 6 ಗಂಟೆ ಡೆಡ್‌ಲೈನ್

ಭಾನುವಾರ (ಅ.5) ಸಂಜೆ 6 ಗಂಟೆ ಒಳಗೆ ಶಾಂತಿ ಮಾತುಕತೆಯಾಗಬೇಕು. ಇಸ್ರೇಲ್ ಹಾಗೂ ಹಮಾಸ್ ಇಬ್ಬರು ಶಾಂತಿಮಾತುಕತೆಗೆ ಒಪ್ಪಿಗೆ ಸೂಚಿಸಬೇಕು. ಹಮಾಸ್ ಇದುವರೆಗೂ ಯಾವುದೇ ಮಾತುಕತೆಗೆ ಸಿದ್ಧವಾಗಿಲ್ಲ. ಹಮಾಸ್ ಒತ್ತೆಯಾಳಾಗಿರಿಸಿಕೊಂಡಿರುವ ಇಸ್ರೇಲಿಗಳನ್ನು ಬಿಟ್ಟು ಶಾಂತಿ ಮಾತುಕತೆ ಮಾಡಿದರೆ ಎಲ್ಲವೂ ಒಕೆ. ಇದು ಲಾಸ್ಟ್ ವಾರ್ನಿಂಗ್, ಹೀಗಾಗಿ ಮುಂದೆ ಮಾತುಕತೆ ಇಲ್ಲ, ನರಕ ದರ್ಶನ ಮಾಡಿಸುತ್ತೇನೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

20 ಅಂಶಗಳ ಕಾರ್ಯಸೂಚಿ

ಇಸ್ರೇಲ್-ಹಮಾಸ್ ಶಾಂತಿ ಒಪ್ಪಂದಕ್ಕೆ ಡೋನಾಲ್ಡ್ ಟ್ರಂಪ್ 20 ಅಂಶಗಳ ಕಾರ್ಯಸೂಚಿ ತಯಾರಿಸಿದ್ದಾರೆ. ಗಾಜಾದಲ್ಲಿನ ಮುಂದಿನ ಆಡಳಿತ, ಅಭಿವೃದ್ಧಿ ಸೇರಿದಂತೆ ಮಹತ್ವದ ಕಾರ್ಯಸೂಚಿ ತಯಾರಿಸಿದ್ದಾರೆ. ಹೊಸ ಆಡಳಿತ ರೂಪಿಸಿ ಗಾಜಾದಲ್ಲಿ ಮಾನವ ಹಕ್ಕು, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈ ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಈ ಕಾರ್ಯಸೂಚಿ ಜಾರಿಗೆ ಹಮಾಸ್ ಒತ್ತೆಯಾಳುಗಳ ಬಿಡುಗಡೆ ಮಾಡಿ ಶಾಂತಿ ಒಪ್ಪಂದ ಸಹಿ ಹಾಕುವಂತೆ ಸೂಚಿಸಲಾಗಿದೆ.

ಜಗತ್ತೇ ನೋಡಿರದ ನರಕ ತೋರಿಸುತ್ತೇನೆ

ಹಮಾಸ್ ತನ್ನದೇ ವಾದ ಮುಂದಿಡುತ್ತಿದೆ. ಮಾತುಕತೆಗೆ ಒಪ್ಪುತ್ತಿಲ್ಲ, ಹೀಗಾಗಿ ಡೋನಾಲ್ಡ್ ಟ್ಕಂಪ್ ಭಾನುವಾರದ ಡೆಡ್‌ಲೈನ್ ನೀಡಿದ್ದಾರೆ. ಇದು ಕೊನೆಯ ಅವಕಾಶ ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಹಮಾಸ್ ಮತ್ತೆ ತನ್ನದೇ ದಾರಿಯಲ್ಲಿ ನಡೆಯಲು ಇಚ್ಚಿಸಿದರೆ ಜಗತ್ತೇ ನೋಡಿದರದ ನರಕ ತೋರಿಸುತ್ತೇನೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.