ಪ್ರವಾಸಿಗರ ಹೊತ್ತು ಸಾಗಿದ ವಿಮಾನ ಪತನ, ದುರಂತದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ, ತಾಂತ್ರಿಕ ಸಮಸ್ಯೆ, ವಿಸಿಬಿಲಿಟಿ ಸೇರಿದಂತೆ ಯಾವುದೇ ಸಮಸ್ಯೆ ಇರಲಿಲ್ಲ, ಪತನಕ್ಕೆ ಕಾರಣವೇನು ಅನ್ನೋದು ಇದೀಗ ಅನುಮಾನಕ್ಕೆ ಕಾರಣವಾಗುತ್ತಿದೆ.

ಕ್ವಾಲೆ (ಅ.28) ಪ್ರವಾಸಿಗರ ಹೊತ್ತು ಟೇಕ್ ಆಫ್ ಆದ ವಿಮಾನ ಯಾವುದೇ ಸಮಸ್ಯೆ ಇಲ್ಲದೆ ಹಾರಾಟ ಮುಂದುವರಿಸಿತ್ತು. ವಿಸಿಬಿಲಿಟಿ, ತಾಂತ್ರಿಕ ಸಮಸ್ಯೆಗಳ ಕುರಿತು ಯಾವುದೇ ದೂರು, ಸಂದೇಶಗಳು ರವಾನೆಯಾಗಿಲ್ಲ. ಇದರ ನಡುವೆ ಏಕಾಏಕಿ ಪ್ರವಾಸಿಗರ ವಿಮಾನ ಪತನಗೊಂಡ ಘಟನೆ ಕ್ವಾಲೆಯ ಸಿಂಬಾ ಗೊಲಿನಿ ಬಳಿ ನಡೆದಿದೆ. ಕೀನ್ಯಾ ದೇಶದ ವಿಮಾನ 5Y-CCA ಪತನಗೊಂಡಿದೆ. ಈ ವಿಮಾನದಲ್ಲಿದ್ದ 12 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಲೈಟರ್ ವಿಮಾನ ಇದಾಗಿದ್ದು, ಪ್ರವಾಸಿ ತಾಣಕ್ಕೆ ಸಂಚಾರ ಆರಂಭಿಸಿದ ಬಳಿಕ ಪತನಗೊಂಡಿದೆ.

ಪತನ ಖಚಿತಪಡಿಸಿದ ಕೀನ್ಯಾ ಸಿವಿಲ್ ಏವಿಯೇಶನ್

ಪ್ರವಾಸಿಗರ ವಿಮಾನ ಪತನವನ್ನು ಕೀನ್ಯಾ ಖಚಿತಪಡಿಸಿದ ಕೀನ್ಯಾ ಸಿವಿಲ್ ಎವಿಯೇಶನ್ ಖಚಿತಪಡಿಸಿದೆ. ದಿಯಾನಿಯಿಂದ ಟೇಕ್ ಆಫ್ ಆದ ವಿಮಾನ ಕಿಚ್ವ ತೆಂಬೋ ಕಡೆ ಸಾಗಿತ್ತು. ಕೆಲ ನಿಮಿಷಗಳ ಪ್ರಯಾಣ ಬಾಕಿ ಇತ್ತು. ಸ್ಥಳೀಯ ಸಮಯದ ಪ್ರಕಾರ 8.30ರ ಹೊತ್ತಿಗೆ ಪ್ರವಾಸಿಗರಿದ್ದ ವಿಮಾನ ಪತನಗೊಂಡಿದೆ.

ಪತನಗೊಳ್ಳುತ್ತಿದ್ದಂತೆ ಹೊತ್ತಿ ಉರಿದ ವಿಮಾನ

ಯಾವುದೇ ಅಡೆ ತಡೆ ಇಲ್ಲದೆ ಸಾಗುತ್ತಿದ್ದ ವಿಮಾನ ಏಕಾಏಕಿ ಸಂಪರ್ಕ ಕಡಿದುಕೊಂಡು ವಿಮಾನ ಪತನಗೊಂಡಿದೆ. ವಿಮಾನ ಪತನಗೊಳ್ಳುತ್ತಿದ್ದಂತೆ ಇಂಧನ ಹೆಚ್ಚಿದ್ದ ಕಾರಣ ವಿಮಾನ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸಂಪೂರ್ಣ ವಿಮಾನ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣದಲ್ಲಿ ಸುಟ್ಟು ಭಸ್ಮವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ರಕ್ಷಣಾ ಪಡೆ, ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.

ಪತನಕ್ಕೆ ಕಾರಣ ಸ್ಪಷ್ಟವಿಲ್ಲ

ಪ್ರವಾಸಿಗರಿದ್ದ ಕೀನ್ಯಾ ವಿಮಾನ ಪತನಗೊಳ್ಳಲು ಕಾರಣವೇನು ಅನ್ನೋದು ಸ್ಪಷ್ಟವಿಲ್ಲ. ವಿಮಾನದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ. ಇನ್ನು ವಿಸಿಬಿಲಿಟಿಯಲ್ಲೂ ಯಾವುದೇ ಸಮಸ್ಯೆ ಇರಲಿಲ್ಲ. ಹವಾಮಾನ ಉತ್ತಮವಾಗಿತ್ತು. ಕೀನ್ಯಾದಲ್ಲಿ ಹಲವು ಪ್ರವಾಸಿ ತಾಣಗಳಿಗೆ ಈ ವಿಮಾನ ಸೇವೆ ನೀಡುತ್ತಿದೆ. ಪೈಲೆಟ್ ಕೂಡ ಉತ್ತಮ ಹಾರಾಟ ಅನುಭವಹೊಂದಿದ್ದಾರೆ. ಹೀಗಾಗಿ ಪತನಕ್ಕೆ ಕಾರಣವೇನು ಅನ್ನೋದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Scroll to load tweet…