ತಾಯಿ ಎದೆಹಾಲು ಕುಡಿದಿದ್ದರೆ ಬಾ ಯುದ್ದಕ್ಕೆ, ಪಾಕ್ ಸೇನಾ ಮುಖ್ಯಸ್ಥ ಮನೀರ್ ಆಫ್ಘಾನ್ ಸವಾಲು, ಅಫ್ಘಾನಿಸ್ತಾನದ ಎಚ್ಚರಿಕೆಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಏರ್‌ಸ್ಟ್ರೈಕ್ ಮೂಲಕ ಅಫ್ಘಾನಿಸ್ತಾನ ಬೆದರಿಸುವ ತಂತ್ರ ಮಾಡಿದ್ದ ಪಾಕಿಸ್ತಾನ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಕಾಬೂಲ್ (ಅ.23) ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಎರಡೂ ಕಡೆಯಿಂದ ಪ್ರತಿ ದಾಳಿಗಳು ನಡೆದಿದೆ. ಇದರ ನಡುವೆ ಹಲವು ಬಾರಿ ಕದನ ವಿರಾಮ ಉಲ್ಲಂಘನೆಯೂ ಆಗಿದೆ. ಇತ್ತೀಚೆಗೆ ದೋಹಾದಲ್ಲಿ ಕದನ ವಿರಾಮ ಘೋಷಣೆಯಾದ ಬಳಿಕ ಏರ್‌ಸ್ಟ್ರೈಕ್, ಪ್ರತಿದಾಳಿಗಳು ನಡೆದಿಲ್ಲ ನಿಜ. ಆದರೆ ಕುತುಂತ್ರ ಬುದ್ಧಿ ತೋರಿಸುತ್ತಿರುವ ಪಾಕಿಸ್ತಾನಕ್ಕೆ ಇದೀಗ ಆಪ್ಘಾನಿಸ್ತಾನದ ತೆಹ್ರಿಕ್ ಇ ತಾಲಿಬಾನ್ (ಟಿಟಿಪಿ) ನೀಡಿದ ಎಚ್ಚರಿಕೆ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ನೇರ ಸವಾಲು ಹಾಕಿದ್ದಾರೆ. ನೀನು ಗಂಡಸೇ ಆಗಿದ್ದರೆ, ತಾಯಿ ಎದೆಹಾಲು ಕುಡಿದಿದ್ದರೆ ಬಾ, ನೇರಾ ನೇರ ಯುದ್ಧಕ್ಕೆ ಎಂದು ಪಂಥಾಹ್ವಾನ ನೀಡಿದೆ.
ವಿಡಿಯೋ ಎಚ್ಚರಿಕೆ ನೀಡಿದ ತಾಲಿಬಾನ್
ಟಿಟಿಪಿ ಕಮಾಂಡರ್ ಕಾಝಿಮ್ ಇದೀಗ ಸರಣಿ ವಿಡಿಯೋ ಮಾಡಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಖಾಝಿಮ್ ತಲೆಹೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಈ ಆದೇಶ ಹೊರಡಿಸಿದ ಬೆನ್ನಲ್ಲೇ ಖಾಝಿಮ್ ನೇರವಾಗಿ ಆಸೀಮ್ ಮುನೀರ್‌ಗೆ ಸವಾಲು ಹಾಕಿದ್ದಾರೆ. ಯುದ್ಧಕ್ಕೆ ಬರುವಾದಾದರೇ ನೇರಾನೇರ ಬನ್ನಿ, ಕುತಂತ್ರ ಬುದ್ದಿ ತೋರಿಸುತ್ತಿದ್ದೀರಿ. ನಿಮಗೆ ಧೈರ್ಯವಿದ್ದರೆ ಬನ್ನಿ ಹೋರಾಟಕ್ಕೆ ಎಂದು ಕಾಝಿಮ್ ಎಚ್ಚರಿಸಿದ್ದಾರೆ.
ಸುಳಿವು ನೀಡಿದವರಿಗೆ 10 ಕೋಟಿ ಬಹುಮಾನ
ಇತ್ತೀಗೆ ಪಾಕಿಸ್ತಾನ ಸೇನೆ ಮೇಲೆ ದಾಳಿ, ಬಾಂಬ್ ದಾಳಿಗಳ ಮಾಸ್ಟರ್ ಮೈಂಡರ್ ಟಿಟಿಪಿ ಕಮಾಂಡರ್ ಕಾಝಿಮ್ ಎಂದು ಪಾಕಿಸ್ತಾನ ಘೋಷಿಸಿತ್ತು. ಇಷ್ಟೇ ಅಲ್ಲ ಖಾಝಿಮ್ ಸೆರೆ ಹಿಡಿಯಲು ಪಾಕಿಸ್ತಾನ ಸೇನೆ ಭಾರಿ ಕಸರತ್ತು ಮಾಡುತ್ತಿದೆ. ಇದರ ನಡುವೆ ಸುಳಿವು ಟಿಟಿಪಿ ಕಮಾಂಡರ್ ಖಾಝಿಮ್ ಸುಳಿವು ನೀಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿತ್ತು. ಇದು ತಾಲಿಬಾನ್ ಕೆರಳಿಸಿದೆ. ಇದರ ಬೆನ್ನಲ್ಲೇ ವಿಡಿಯೋ ಮೂಲಕ ಎಚ್ಚರಿಕೆ ನೀಡಲಾಗಿದೆ.
ಪಾಕಿಸ್ತಾನ ಆರೋಪ ತಳ್ಳಿಹಾಕಿದ ಆಪ್ಘಾನಿಸ್ತಾನ
ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರವಾಗಿದೆ. ಇದರ ನಡುವೆ ಆಫ್ಘಾನಿಸ್ತಾನಕ್ಕೆ ಭಾರತ ಬೆಂಬಲ ನೀಡುತ್ತಿದೆ ಎಂಬ ಪಾಕಿಸ್ತಾನ ರಕ್ಷಣಾ ಸಚಿವರ ಹೇಳಿಕೆಗೆ ತಿರುಗೇಟು ನೀಡಿದೆ. ಈ ಕುರಿತು ಮಾತನಾಡಿರುವ ಅಫ್ಘಾನಿಸ್ತಾನ, ಆಫ್ಘಾನಿಸ್ತಾನ ಪಾಕಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತ ಮಧ್ಯ ಪ್ರವೇಶ ಮಾಡಿಲ್ಲ. ಈ ರೀತಿ ಆರೋಪ ಆಧಾರ ರಹಿತ. ಪಾಕಿಸ್ತಾನಕ್ಕೆ ಏನೂ ತಿಳಿಯದಾಗಿದೆ, ಕುತಂತ್ರದಿಂದ ಎಲ್ಲವನ್ನೂ ಕೈವಶ ಮಾಡಲು ಹೊರಟಿದೆ. ಆದರೆ ಆಫ್ಘಾನಿಸ್ತಾನ ಮುಂದೆ ಸಾಧ್ಯವಿಲ್ಲ ಎಂದು ಎಚ್ಚರಿಸಿದೆ. ಭಾರತ ಜೊತೆಗಿನ ಆಫ್ಘಾನಿಸ್ತಾನ ಸಂಬಂಧ ದೇಶದ ಹಿತಾಸಕ್ತಿ ಮಾಡಿಕೊಂಡ ಸಂಬಂಧ. ಇದು ಆಫ್ಘಾನಿಸ್ತಾನ ಜನತೆಯ ಹಿತಾಸಕ್ತಿಗೆ ಅನುಗುಣವಾಗಿ, ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ ಮಾಡಿಕೊಂಡಿರುವ ಸಂಬಂಧ ಎಂದಿದೆ. ಆಫ್ಘಾನಿಸ್ತಾನ ಸ್ವತಂತ್ರ ದೇಶ, ಇದು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದಿದೆ.
