ವ್ಯಕ್ತಿಯೊಬ್ಬ ಬುಧವಾರ ಭಾರತದ ಮೇಲೆ ಅಣುದಾಳಿ ಮಾಡಿ ಎಂಬ ಬರಹ ಇದ್ದ ಗನ್ ಮೂಲಕ ಶಾಲೆಯೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ನ್ಯೂಯಾರ್ಕ್/ವಾಷಿಂಗ್ಟನ್: ವ್ಯಕ್ತಿಯೊಬ್ಬ ಬುಧವಾರ ಭಾರತದ ಮೇಲೆ ಅಣುದಾಳಿ ಮಾಡಿ ಎಂಬ ಬರಹ ಇದ್ದ ಗನ್ ಮೂಲಕ ಶಾಲೆಯೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಮಿನ್ನಿಯಾಪೋಲಿಸ್ ಎಂಬಲ್ಲಿ ಶಾಲಾ ಮಕ್ಕಳು ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದ ವೇಳೆ ರಾಬಿನ್ ವೆಸ್ಟ್‌ಮನ್(23) ಎಂಬಾತ ಕಿಟಕಿಯ ಮೂಲಕ ಗುಂಡಿನ ದಾಳಿ ನಡೆಸಿದ್ದಾನೆ. ಇದರಲ್ಲಿ 8 ಹಾಗೂ 10 ವರ್ಷದ ಇಬ್ಬರು ಮಕ್ಕಳು ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಬಳಿಕ ಆತ ತನಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.
ಈ ದಾಳಿಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಆದರೆ ದಾಳಿಕೋರ ತನ್ನ ಬಂದೂಕು, ರೈಫಲ್ ಮತ್ತು ಮದ್ದುಗುಂಡುಗಳನ್ನು ತೋರಿಸುತ್ತಿದ್ದುದು ವಿಡಿಯೋದಲ್ಲಿ ಸೆರೆಯಾಗಿದೆ. ದಾಳಿಗೆ ಬಳಸಿದ ಗನ್ ಮೇಲೆ ‘ನ್ಯೂಕ್ ಇಂಡಿಯಾ’(ಅಣುದಾಳಿಗೆ ಕರೆ), (ಟ್ರಂಪ್‌ರ ಕೊಲ್ಲಿ) ‘ಮಾಶಲ್ಲಾಹ್‘, ‘ಇಸ್ರೇಲ್ ಪತನವಾಗಬೇಕು’ ಎಂದು ಬರೆದಿತ್ತು.
ಕ್ಲಾಸಲ್ಲಿ ಕೆನ್ನೆಗೆ ಬಾರಿಸಿದ್ದಕ್ಕೆ ಸೇಡು: ಲಂಚ್ ಬಾಕ್ಸ್‌ನಲ್ಲಿ ಗನ್ ತುಂಬಿಕೊಂಡು ಬಂದು ಶಿಕ್ಷಕನಿಗೆ ಶೂಟ್
ಡೆಹ್ರಾಡೂನ್: ಉತ್ತರಾಖಂಡ್ ಉದ್ಧಮ್ ಸಿಂಗ್ ನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ತರಗತಿಯಲ್ಲಿ ಎಲ್ಲರ ಮುಂದೆ ಕೆನ್ನೆಗೆ ಬಾರಿಸಿದರು ಎಂದು ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬ ಪಾಠ ಮಾಡುತ್ತಿದ್ದ ಶಿಕ್ಷಕನಿಗೆ ಗುಂಡಿಕ್ಕಿದ್ದಾನೆ. ಈ ವಾರದ ಆರಂಭದಲ್ಲಿ ಭೌತಶಾಸ್ತ್ರ(physics)ಪಾಠ ಮಾಡುತ್ತಿದ್ದ ಗಂಗಾದೀಪ್ ಸಿಂಗ್ ಕೊಹ್ಲಿ ಎಂಬ ಶಿಕ್ಷಕರು ತರಗತಿಯಲ್ಲಿ ಬಾಲಕನೋರ್ವನ ಕೆನ್ನೆಗೆ ಬಾರಿಸಿದ್ದರು. ಇದರಿಂದ ತೀವ್ರ ಅಸಮಾಧಾನಕ್ಕೊಳಗಾದ ಆ ಬಾಲಕ ಶಾಲೆಗೆ ತರುವ ಬುತ್ತಿಯಲ್ಲಿ ಗನ್ ಹಿಡಿದುಕೊಂಡು ಬಂದಿದ್ದು, ಶಿಕ್ಷಕ ಗಂಗಾದೀಪ್ ಸಿಂಗ್ ಕೊಹ್ಲಿ ಅವರಿಗೆ ಹಿಂದಿನಿಂದ ಗುಂಡಿಕ್ಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಫಿಸಿಕ್ಸ್ ಪಾಠ ಮಾಡುತ್ತಿದ್ದ ಶಿಕ್ಷಕನ ಮೇಲೆ ಗುಂಡಿನ ದಾಳಿ
ಈ ಗುಂಡಿನ ದಾಳಿಯಿಂದ ಶಿಕ್ಷಕ ಗಂಗಾದೀಪ್ ಸಿಂಗ್ ಕೊಹ್ಲಿ ಅವರಿಗೆ ಗಂಭೀರ ಗಾಯಗಳಾಗಿದ್ದೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಂದಿನಿಂದ ಬಂದ ಗುಂಡು ಅವರ ಹಿಂಬದಿ ಕತ್ತಿಗೆ ತಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಗುಂಡನ್ನು ಹೊರೆತೆಗೆಯಲಾಗಿದೆ. ಇವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ ಮಯಾಂಕ್ ಅಗರ್ವಾಲ್ ಅವರು, ಕತ್ತಿನಲ್ಲಿ ಸಿಲುಕಿದ್ದ ಗುಂಡನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
