ವಿಡಿಯೋ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದು, ಜನರು ಕೂಡ ಅದನ್ನು ತುಂಬಾ ಇಷ್ಟಪಟ್ಟು ಶೇರ್ ಮಾಡ್ತಿದ್ದಾರೆ. ಹಾಗಾದ್ರೆ ಆ ವಿಡಿಯೋದಲ್ಲಿ ಅಂಥದ್ದೇನಿದೆ ಎಂದು ನೋಡುವುದಾದರೆ...
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ, ಏನು ವೈರಲ್ ಆಗುತ್ತದೆ ಎಂದು ಯಾರಿಗೂ ಗೊತ್ತಾಗಲ್ಲ, ಸದ್ಯ ಈಗೊಂದು ವಿಡಿಯೋ ವೈರಲ್ ಆಗುತ್ತಿದೆ. ಅದು ಅಂತಿಂಥ ವಿಡಿಯೋ ಅಲ್ವೆ ಅಲ್ಲ, ಮಧುಚಂದ್ರದ ವಿಡಿಯೋ. ಹೌದು, "ಏನ್ರೀ ಇದು ಇಂಥ ವಿಡಿಯೋಗಳೂ ವೈರಲ್ ಆಗ್ತವಾ, ಇಂಥವನ್ನು ಅಪ್‌ಲೋಡ್ ಮಾಡ್ತಾರಾ" ಎಂದು ನೀವು ಪ್ರಶ್ನಿಸಬಹುದು. ಇಂಥದೆಲ್ಲಾ ಇಂದು ಕಾಮನ್ ಆದ್ರೂ ಸದ್ಯ ಈ ವಿಡಿಯೋ ಸ್ವಲ್ಪ ಭಿನ್ನವಾಗಿದೆ. ನೂತನ ದಂಪತಿ ಸದ್ಯ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, "ಮನಾಲಿಯಲ್ಲಿ ಹನಿಮೂನ್ ನೈಟ್" ಎಂಬ ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದು, ಜನರು ಕೂಡ ಅದನ್ನು ತುಂಬಾ ಇಷ್ಟಪಟ್ಟು ಶೇರ್ ಮಾಡ್ತಿದ್ದಾರೆ. ಹಾಗಾದ್ರೆ ಆ ವಿಡಿಯೋದಲ್ಲಿ ಅಂಥದ್ದೇನಿದೆ ಎಂದು ನೋಡುವುದಾದರೆ...
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಗಂಡ ಮತ್ತು ಹೆಂಡತಿ ಮದುವೆಯ ನಂತರ ತಮ್ಮ ಹನಿಮೂನ್‌ಗಾಗಿ ಮನಾಲಿಗೆ ಹೋಗಿದ್ದಾರೆ. ಇಲ್ಲಿನ ಹೋಟೆಲ್‌ವೊಂದರಲ್ಲಿ ತಂಗಿದ್ದ ಅವರು, ರೊಮ್ಯಾಂಟಿಕ್ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರಾತ್ರೋರಾತ್ರಿ
ವಿಡಿಯೋ ವೈರಲ್ ಆಗಿದ್ದು, ಜೋಡಿ ತುಂಬಾ ಸಂತೋಷವಾಗಿರುವುದನ್ನು ನೀವು ನೋಡಬಹುದು. ಇದರಲ್ಲಿ ನೀವು ಗಮನಿಸಬೇಕಾದ ವಿಷಯವೆಂದರೆ ವಿಡಿಯೋದಲ್ಲಿ ಜೋಡಿ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರಿಲ್ಲ. ಈ ಮುದ್ದಾದ ಹನಿಮೂನ್ ವಿಡಿಯೋ ನೋಡಿದ ಬಳಕೆದಾರರು, "ಪತ್ನಿಗೆ ಇಷ್ಟೊಂದು ಪ್ರೀತಿ ಮಾಡುವ ಗಂಡ ಸಿಕ್ಕಿದ್ದು ಅದೃಷ್ಟ" ಎಂದು ಹೇಳುತ್ತಿದ್ದಾರೆ. ಅಂದಹಾಗೆ ಈ ವಿಡಿಯೋ ಕಳೆದ ವರ್ಷದ್ದಾಗಿದ್ದರೂ ಈಗದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?
ತಮ್ಮ ವಿಶೇಷ ದಿನದಂದು ಮನಾಲಿಯ ಕಣಿವೆಗಳಲ್ಲಿ ಹನಿಮೂನ್ ಅನ್ನು ಆನಂದಿಸುತ್ತಿರುವ ದಂಪತಿ ತಾವು ಉಳಿದುಕೊಂಡಿರುವ ಹೋಟೆಲ್‌ನ ಕೋಣೆಗೆ ತೆರಳುತ್ತಾರೆ. ಆ ರೂಂನಲ್ಲಿ ಹಾಸಿಗೆಯ ಮೇಲೆ ಹೂವುಗಳು, ಸುತ್ತಲೂ ಗುಲಾಬಿಗಳನ್ನು ಹರಡಿ, ಒಂದು ಬಾಟಲಿ ಷಾಂಪೇನ್, 2 ಗ್ಲಾಸ್‌ಗಳು, ಮೇಣದಬತ್ತಿಯ ಬೆಳಕಿನೊಂದಿಗೆ 'ಹ್ಯಾಪಿ ಹನಿಮೂನ್ ಲವ್' ಎಂದು ಬರೆಯಲಾಗಿದೆ. ಈ ಎಲ್ಲಾ ವಿಶೇಷ ವ್ಯವಸ್ಥೆಗಳನ್ನು ನೋಡಿದಾಗ ಹೆಂಡತಿಗೆ ತನ್ನ ಗಂಡನ ಮೇಲೆ ಅಪಾರ ಪ್ರೀತಿ ಉಂಟಾಗುತ್ತದೆ. ಜೊತೆಗೆ ಖುಷಿಯೂ ಆಗುತ್ತದೆ. ಈ ರಾತ್ರಿ ಅವಳಿಗೆ ವಿಶೇಷವಾಗಿಸಿದ್ದಕ್ಕೆ ತನ್ನ ಪತಿಗೆ ಧನ್ಯವಾದ ಹೇಳುತ್ತಾಳೆ.
ವಿಡಿಯೋ ಇಲ್ಲಿದೆ ನೋಡಿ
ಆ ನಂತರ ಸೋಫಾದ ಮೇಲೆ ಕುಳಿತು ಕೇಕ್ ಕತ್ತರಿಸಿ, ಮೇಣದಬತ್ತಿಯ ಬೆಳಕಿನಲ್ಲಿ ಷಾಂಪೇನ್ ಅನ್ನು ತೆರೆಯುತ್ತಾರೆ. ಕೆಲವು ಫೋಟೋಗಳನ್ನು ಸಹ ತೆಗೆದುಕೊಳ್ಳುತ್ತಾರೆ. ಈ ದೃಶ್ಯವನ್ನೆಲ್ಲಾ ತುಂಬಾ ಸುಂದರವಾಗಿ ವಿಡಿಯೋ ಮಾಡಿದ್ದು, ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳು ಮತ್ತು ಸಾವಿರಾರು ಲೈಕ್ಸ್ ಪಡೆದುಕೊಂಡು ಶೇರ್ ಆಗಿದೆ. ಈ ಮೊದಲೇ ಹೇಳಿದ ಹಾಗೆ ಒಂದು ವರ್ಷದ ಹಳೆಯ ವಿಡಿಯೋ ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈಗಲೂ ಜನರು ಇದನ್ನು ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ಸದ್ಯ ಈ ವಿಡಿಯೋ ನೋಡಿ ನಿಮಗೆ ಏನನಿಸಿತು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.
ಮತ್ತೊಂದು ಜೋಡಿಯ ವಿಡಿಯೋ ವೈರಲ್
ಸದ್ಯ ಇನ್ನೊಂದು ಜೋಡಿಯ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿ ಹೆಂಡತಿ ತನ್ನ ಗಂಡನಿಗೆ ಅವಮಾನ ಮಾಡಿದ್ದು, ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿರುವುದನ್ನು ನೋಡಬಹುದು. ವಿಡಿಯೋ ನೋಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆಯಲು ಕೆಲವರು ಯಾವುದೇ ಲೆವೆಲ್‌ಗಾದರೂ ಇಳಿಯಲು ಸಿದ್ಧರಿರುತ್ತಾರೆ ಎಂದು ನೀವಂದುಕೊಳ್ಳದೆ ಇರಲಾರಿರಿ.
ಈ ವಿಡಿಯೋದಲ್ಲಿ ಮಹಿಳೆಯ ಪತಿ ಊರುಗೋಲು ಸಹಾಯದಿಂದ ಹಾಸಿಗೆಯ ಮೇಲೆ ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಏತನ್ಮಧ್ಯೆ ಮಹಿಳೆ ಕ್ಯಾಮೆರಾ ನೋಡಿ, "ಗಂಡನ ಪಾದದಲ್ಲಿ ಸ್ವರ್ಗವಿದೆ. ಆದರೆ ನನ್ನ ಗಂಡನಿಗೆ ಪಾದಗಳೂ ಇಲ್ಲ" ಎಂದು ಅಪಹಾಸ್ಯ ಮಾಡುತ್ತಾಳೆ. ತನ್ನ ಹೆಂಡತಿಯ ಬಾಯಿಂದ ಅಂತಹ ಮಾತನ್ನು ಕೇಳಿ ಗಂಡನಿಗೆ ನೋವಾಗುತ್ತದೆ. "ನೀನು ತಮಾಷೆ ಮಾಡುತ್ತಿದ್ದೀಯಾ" ಎಂದು ಕೇಳುತ್ತಾನೆ. ಆದರೆ ಮಹಿಳೆ ಇದನ್ನು ನೋಡಿ ನಗುತ್ತಲೇ ಇರುತ್ತಾಳೆ. ಇದು ತನ್ನ ಗಂಡನ ಭಾವನೆಗೆ ಬೆಲೆ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ 'ಥ್ರೆಡ್' ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ನಂತರ ಜನರು ಮಹಿಳೆಯನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. ವಿಡಿಯೋ ಬಗ್ಗೆ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದ್ದು, ಹೆಚ್ಚಿನ ಬಳಕೆದಾರರು ಮಹಿಳೆಯ ಮನಸ್ಥಿತಿ ಪ್ರಶ್ನಿಸುತ್ತಿದ್ದಾರೆ.