ಚಾಟ್ ಜಿಪಿಟಿ ಪ್ರಕಾರ, ಜಿ. ಪರಮೇಶ್ವರ್ ಅವರು ನಂಬರ್ ಒನ್ ಗೃಹ ಸಚಿವರು. ಹಾಗಾದ್ರೆ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ರಾಜಕೀಯ ನಾಯಕರು ಯಾರು ಗೊತ್ತಾ?
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಾಟ್ ಜಿಪಿಟಿ ಪ್ರಕಾರ, ಜಿ.ಪರಮೇಶ್ವರ್ (G Parameshwar) ನಂಬರ್ ಒನ್ ಗೃಹ ಸಚಿವರು (Number 1 Home Minister) ಎಂಬ ಬರಹವುಳ್ಳ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Post, Social Media) ಆಗುತ್ತಿವೆ. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ, ಓರ್ವ ಗೃಹ ಸಚಿವನಾಗಿ ನೀಡುವ ಹೇಳಿಕೆಗಳು ಮಹತ್ವವನ್ನು ಹೊಂದಿರುತ್ತವೆ. ಹಾಗಾಗಿ ತಿಳಿಯದ ವಿಷಯದಲ್ಲಿ ಗೊತ್ತಿಲ್ಲ ಎಂದು ಸಹಜವಾಗಿಯೇ ಹೇಳಿರುತ್ತೇನೆ. ಟ್ರೋಲ್ ಮಾಡೋರಿಗೆ ಚಾಟ್ ಜಿಪಿಟಿ (Chat GPT) ನೋಡೋಕೆ ಹೇಳಿ. ಅಲ್ಲಿ ಮೊದಲಿಗೆ ನನ್ನ ಹೆಸರು ಬರುತ್ತದೆ. ಚಾಟ್ ಜಿಪಿಟಿಯಲ್ಲಿ ಉತ್ತಮ ಗೃಹ ಸಚಿವ ಅಂದ್ರೆ ಮೊದಲಿಗೆ ಜಿ.ಪರಮೇಶ್ವರ್ ಬರುತ್ತೆ ಎಂದಿದ್ದರು. ಹಾಗಾದ್ರೆ ನಂಬರ್ 2 ಮತ್ತು ನಂಬರ್ 3ರ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ? ಚಾಟ್ ಜಿಪಿಟಿ ತೋರಿಸಿದ ಆ ಇಬ್ಬರು ನಾಯಕರ ಹೆಸರು ಏನು ಎಂದು ನೋಡೋಣ ಬನ್ನಿ.
2ನೇ ಸ್ಥಾನದಲ್ಲಿ ಬಸವರಾಜ್ ಬೊಮ್ಮಾಯಿ
Chat GPTಯಲ್ಲಿ ಕರ್ನಾಟಕದ ಬೆಸ್ಟ್ ಹೋಮ್ ಮಿನಿಸ್ಟರ್ ಯಾರು ಎಂದು ಸರ್ಚ್ ಮಾಡಿದ್ರೆ ಮೊದಲಿಗೆ ಜಿ.ಪರಮೇಶ್ವರ್ ಅವರ ಹೆಸರು ಬರುತ್ತದೆ. ಎರಡನೇ ಸ್ಥಾನದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೆಸರು ಬರುತ್ತದೆ. ಬಸವರಾಜ್ ಬೊಮ್ಮಾಯಿ (Basavaraj Bommai) ಅವರು ಸಿಎಂ ಸ್ಥಾನ ಅಲಂಕರಿಸುವ ಮುನ್ನ ಗೃಹಮಂತ್ರಿಗಳಾಗಿದ್ದರು. 20 ಆಗಸ್ಟ್ 2019 – 26 ಜುಲೈ 2021 ಅವಧಿಯಲ್ಲಿ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದರು. ಇದರ ಜೊತೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಮತ್ತು ಸಹಕಾರ ಸಚಿವರಾಗಿ ಬಸವರಾಜ್ ಬೊಮ್ಮಾಯಿ ಪ್ರಮುಖ ಖಾತೆಗಳನ್ನು ಹೊಂದಿದ್ದರು.
ಬಸವರಾಜ್ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ವೇಳೆ ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರ ಗುಂಪು ಉತ್ತರ ಮಂಗಳೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾಗಿತ್ತು. ಈ ವೇಳೆ ಪೊಲೀಸರ ನಡೆಸಿದ ಫೈರಿಂಗ್‌ನಲ್ಲಿ ಇಬ್ಬರು ಮೃತರಾಗಿದ್ದರು. 2020 ರ ಬೆಂಗಳೂರು ಗಲಭೆ ನಡೆದ ಸಂದರ್ಭದಲ್ಲಿಯೂ ಬಸವರಾಜ್ ಬೊಮ್ಮಾಯಿ ಅವರೇ ಗೃಹ ಇಲಾಖೆಯ ಜವಾಬ್ದಾರಿಯನ್ನು ಹೊಂದಿದ್ದರು.
3ನೇ ಸ್ಥಾನದಲ್ಲಿದ್ದಾರೆ ಕೆ.ಜೆ.ಜಾರ್ಜ್
Chat GPT ತೋರಿಸುವ ಬೆಸ್ಟ್ ಹೋಮ್ ಮಿನಿಸ್ಟರ್ ಪಟ್ಟಿಯಲ್ಲಿ ಹಾಲಿ ಇಂಧನ ಸಚಿವ ಕೆ.ಜೆ.ಜಾರ್ಜ್ (K.J. George) ಮೂರನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ 20 ಮೇ 2013 - 29 ಅಕ್ಟೋಬರ್ 2015 ಅವಧಿಗೆ ಗೃಹ ಸಚಿವರಾಗಿದ್ದರು. 31 ಅಕ್ಟೋಬರ್ 2015 - 18 ಜುಲೈ 2016 ಅವಧಿಗೆ ಬೆಂಗಳೂರು ಅಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾಗಿದ್ದರು. ಎಚ್.ಡಿ. ಕುಮಾರಸ್ವಾಮಿ ಅವರ ಸಂಪುಟದಲ್ಲಿ ದೊಡ್ಡ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಸಚಿವರಾಗಿದ್ದರು.
4 ಮತ್ತು 5ನೇ ಸ್ಥಾನದಲ್ಲಿ ಇರೋದು ಯಾರು?
ಇನ್ನು ಚಾಟ್ ಜಿಪಿಟಿಯಲ್ಲಿ ಟಾಪ್ 5 ಬೆಸ್ಟ್ ಹೋಮ್ ಮಿನಿಸ್ಟರ್ ಯಾರು ಅಂತ ಸರ್ಚ್ ಮಾಡಿದ್ರೆ 4 ಮತ್ತು 5ನೇ ಸ್ಥಾನದಲ್ಲಿ ಕ್ರಮವಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಡಿಕೆ ಶಿವಕುಮಾರ್ (DK Shivakumar) ಹೆಸರು ಬರುತ್ತದೆ. ಮಲ್ಲಿಕಾರ್ಜುನ ಖರ್ಗೆ ಸದ್ಯ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ. ಡಿಕೆ ಶಿವಕುಮಾರ್ ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದಾರೆ.
