The Great Indian Kapil Sharma Show ನಲ್ಲಿ ನಡೆದ ವಿಷಯವೊಂದಕ್ಕೆ ಸುನೀಲ್ ಶೆಟ್ಟಿ, ಸಂಜಯ್ ದತ್ ನಕ್ಕಿದ್ದಾರೆ. ಇದನ್ನು ವೀಕ್ಷಕರು ವಿರೋಧಿಸಿದ್ದಾರೆ.
'ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ' ನಲ್ಲಿ ಸುನೀಲ್ ಶೆಟ್ಟಿ, ಸಂಜಯ್ ದತ್ ಅವರು ಆಗಮಿಸಿದ್ದರು. ಆ ವೇಳೆ ವ್ಯಕ್ತಿಯೊಬ್ಬ ತನ್ನ ಪತ್ನಿ, ಗರ್ಲ್‌ಫ್ರೆಂಡ್ ಜೊತೆ ಆಗಮಿಸಿದ್ದಾರೆ. ಕೋಲ್ಕತ್ತಾದ ನವೀನ್ ಗುಪ್ತಾ ಎನ್ನುವವರು ಬಹಳ ಸಿನಿಮಾಗಳನ್ನು ನೋಡುತ್ತಾರಂತೆ. “ಸಿನಿಮೀಯ ರೀತಿಯಲ್ಲಿ ನನ್ನ ಲೈಫ್‌ನಲ್ಲಿಯೂ ಆಗಿದೆ. ಇಂದು ಪತ್ನಿ, ಗರ್ಲ್‌ಫ್ರೆಂಡ್ ಜೊತೆ ಸಿನಿಮಾ ನೋಡಲು ಬಂದಿದ್ದೇನೆ” ಎಂದು ನವೀನ್ ಹೇಳಿದ್ದಾರೆ.
ಚಪ್ಪಾಳೆ ತಟ್ಟಿದ ಸುನೀಲ್ ಶೆಟ್ಟಿ, ಸಂಜಯ್ ದತ್
ಈ ಮಾತು ಕೇಳಿ ಅರ್ಚನಾ ಪುರಾನ್ ಸಿಂಗ್ ಅವರು “ಇದು ಹೇಗೆ ಸಾಧ್ಯ?” ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಸುನೀಲ್ ಶೆಟ್ಟಿ, ಸಂಜಯ್ ದತ್ ಅವರು ವೀಕ್ಷಕರ ಬಳಿ ಹೋಗಿ ಚಪ್ಪಾಳೆ ಹೊಡೆದಿದ್ದಾರೆ, ಅನೇಕರು ಇವರನ್ನು ನೋಡಿ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ. ನವೀನ್ ಗುಪ್ತಾ ಅವರು ಸುನೀಲ್ ಶೆಟ್ಟಿಗೆ “ನನ್ನ ಗರ್ಲ್‌ಫ್ರೆಂಡ್ ಯಾರು? ಪತ್ನಿ ಯಾರು?” ಎಂದು ಕಂಡಹಿಡಿಯಿರಿ ಎಂದು ಟಾಸ್ಕ್ ನೀಡಿದ್ದರು. ಆಗ ಸುನೀಲ್ ಶೆಟ್ಟಿ ಸರಿಯಾದ ವ್ಯಕ್ತಿಯನ್ನೇ ಪತ್ನಿ ಎಂದು ಗುರುತಿಸಿದ್ದಾರೆ. “ಇದು ಹೇಗೆ?” ಎಂದು ಕೇಳಿದಾಗ ಸುನೀಲ್ ಶೆಟ್ಟಿ ಅವರು, “ನಾನು ಸಂಜಯ್ ದತ್ ಜೊತೆಗೆ ಸಾಕಷ್ಟು ಸಮಯವನ್ನು ಕಳೆದಿದ್ದೇನೆ” ಎಂದು ನಗೆಚಟಾಕಿ ಹಾರಿಸಿದ್ದಾರೆ.
'ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ' ನಲ್ಲಿದ್ದವರೆಲ್ಲರೂ ಈ ಮಾತಿಗೆ ನಕ್ಕಿದ್ದಾರೆ. ಇನ್ನೊಂದು ಕಡೆ ಅಕ್ರಮ ಸಂಬಂಧವನ್ನು ಬೆಂಬಲಿಸಿ, ಸಂಜಯ್ ದತ್, ಸುನೀಲ್ ಶೆಟ್ಟಿ ಅವರು ನಕ್ಕಿದ್ದಾರೆ. ಇದು ವೀಕ್ಷಕರಿಗೆ ಬೇಸರ ತಂದಿದೆ.
ವೀಕ್ಷಕರು ಏನು ಹೇಳಿದರು?
ನಿಮ್ಮ ತಾಯಿ, ತಂಗಿ ಜೊತೆಗೂ ಈ ರೀತಿ ಆಗಿದ್ರೆ ಹೀಗೆ ನಗುತ್ತಿದ್ದೀರಾ?
ಇದನ್ನು ನೋಡಿ ಮಹಿಳೆಯರು ನಗುತ್ತಿರೋದು ಕೂಡ ವಿಪರ್ಯಾಸ
ಈ ರೀತಿ ಕಂಟೆಂಟ್‌ಗಳನ್ನು ನೆಟ್‌ಫ್ಲಿಕ್ಸ್ ಪ್ರೋತ್ಸಾಹ ಕೊಡ್ತಿರೋದು ಯಾಕೆ?
ನಮ್ಮ ದೇಶ ಬದಲಾಗುತ್ತಿದೆ, ಸುಧಾರಣೆಯಾಗ್ತಿದೆ
ಆ ಪುರುಷನ ಜಾಗದಲ್ಲಿ ಮಹಿಳೆ ಇದ್ದಿದ್ದರೆ ಏನಾಗುವುದು?
ಇದು ಸ್ಕ್ರಿಪ್ಟೆಡ್?
ಇಂಥ ಅಸಹ್ಯಕರವಾದ ವಿಷಯಕ್ಕೆ ಯಾಕೆ ಪ್ರಚಾರ ಕೊಡುತ್ತಿದ್ದೀರಿ?
ಸಂಜಯ್ ದತ್, ಸುನೀಲ ಶೆಟ್ಟಿ ಅವರು ಸಿನಿಮಾದಿಂದ ಆಚೆ ಬರಬೇಕು
ಈ ಶೋನಲ್ಲಿ ಮದುವೆ ವಿಷಯದಲ್ಲಿ ಈಗಾಗಲೇ ಸಾಕಷ್ಟು ಜೋಕ್‌ಗಳು ನಡೆದಿದೆ. ಅನೇಕರು ಬಾಯಿಗೆ ಬಂದಹಾಗೆ ಮಾತನಾಡಿದ್ದುಂಟು. ಮದುವೆಯಲ್ಲಿ ಪತ್ನಿಯಿಂದ ಪತಿಗೆ ಜಾಸ್ತಿ ಕಿರುಕುಳ ಎನ್ನುವಂತೆ ಮಾತು ಕೂಡ ಕೇಳಿಬಂದಿದ್ದುಂಟು.
