Seetha Rama Serial Ritu Singh: ಮದುವೆ ಎನ್ನುವ ಸಂಕೀರ್ಣವಾದ ವಿಷಯದ ಬಗ್ಗೆ ಸೀತಾರಾಮ ಧಾರಾವಾಹಿ ಖ್ಯಾತಿಯ ನಟಿ ರೀತು ಸಿಂಗ್ ಮಾತನಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ
ಮಕ್ಕಳು ಏನು ಮಾತಾಡಿದ್ರೂ ಚೆಂದ. ಆದರೆ ಅದು ಲಿಮಿಟ್ ಮೀರಬಾರದು. ‘ಸೀತಾರಾಮ’ ಧಾರಾವಾಹಿಯಲ್ಲಿ ( Seetha Rama Serial Ritu Singh ) ಸಿಹಿ ಪಾತ್ರದಲ್ಲಿ ನಟಿಸಿ, ಜನರ ಮನಸ್ಸು ಗೆದ್ದಿದ್ದ ನಟಿ ರೀತು ಸಿಂಗ್ ಈಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮದುವೆ ಬಗ್ಗೆ ಮಾತನಾಡಿ ವೀಕ್ಷಕರು ಹೌಹಾರುವಂತೆ ಮಾಡಿದ್ದಾರೆ.
ರೀತು ಸಿಂಗ್ ಹೇಳಿದ್ದೇನು?
“ನಾನು ಮದುವೆ ಆಗೋದಿಲ್ಲ, ಸನ್ಯಾಸಿ ಆಗ್ತೀನಿ. ನನ್ನ ಗಂಡ ಕೇಳಿದರೆ ಕಾಫಿ ಮಾಡಿಕೊಡ್ತೀನಿ. ಅಡುಗೆಯೂ ಮಾಡ್ತೀನಿ. ನಾನು ಯಾರ ಜೊತೆ ಮದುವೆ ಆಗ್ತೀನೋ, ಅವರ ಬಳಿಯೇ ಪಾತ್ರೆ ತೊಳೆಯೋದು, ನೆಲ ಒರೆಸೋದು, ಕಸ ಗುಡಿಸೋ ಕೆಲಸ ಮಾಡಸ್ತೀನಿ. ಚಿಕ್ಕ ವಯಸ್ಸಿನಿಂದ ನಾನು ಕಷ್ಟಪಡ್ತಿದೀನಿ, ಮದುವೆ ಆದಮೇಲೆ ಯಾಕೆ ಕಷ್ಟಪಡಲಿ? ನಾನು ಮದುವೆ ಆಗೋದು ಕೆಲಸ ಮಾಡಿಸೋದಿಕ್ಕೆ. ಅದಕ್ಕೆ ನಾನು ಹುಟ್ಟಿರೋದು” ಎಂದು ರೀತು ಸಿಂಗ್ ಹೇಳಿದ್ದಾರೆ.
ರೀತು ಸಿಂಗ್ ಕಂಡರೆ ತುಂಬ ಇಷ್ಟ
ರೀತು ಸಿಂಗ್ ಪಟ ಪಟ ಅಂತ ಮಾತನಾಡೋದುಂಟು. ಒಮ್ಮೊಮ್ಮೆ ವಯಸ್ಸಿಗೂ ಮೀರಿದ ಮಾತು ಆಡುತ್ತಾರೆ. ಈ ಮಾತುಗಳು ವೀಕ್ಷಕರಿಗೆ ಖುಷಿ ಕೊಟ್ಟಿದ್ದುಂಟು. ಇನ್ನೂ ಕೆಲವೊಮ್ಮೆ ವಯಸ್ಸಿಗೆ ಮೀರಿದ ಮಾತು ಆಡಬಾರದು ಎಂದು ವೀಕ್ಷಕರು ತಿಳಿ ಹೇಳಿದ್ದೂ ಇದೆ. ಅಪ್ಪ ಇಲ್ಲದೆ, ತಾಯಿ, ಅಣ್ಣನ ಜೊತೆ ಬೆಳೆಯುತ್ತಿರುವ ರೀತು ಸಿಂಗ್ ಕಂಡರೆ ಅನೇಕರಿಗೆ ಇಷ್ಟ. ಆದರೆ ಕೆಲವೊಮ್ಮೆ ಮಾತು ಮಿತಿ ಮೀರುತ್ತವೆ.
ಸಿನಿಮಾದಲ್ಲಿ ರೀತು ಸಿಂಗ್ ನಟನೆ
ನಟನೆ, ಡೈಲಾಗ್ ಅಂತ ಬಂದಾಗ ರೀತು ಸಿಂಗ್ ನೋಡಿದ್ರೆ ಎಲ್ಲರೂ ಇಷ್ಟಪಡುವಂತೆ ಮಾಡುತ್ತಾಳೆ. ಸೀರಿಯಲ್‌ನಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ಅವಳೀಗ, ಸಿನಿಮಾಗಳಲ್ಲಿ ನಟಿಸುತ್ತಿದ್ದಾಳೆ. ‘ನನ್ನ ಮಗಳೇ ಸೂಪರ್ ಸ್ಟಾರ್’ ಎಂಬ ಸಿನಿಮಾದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದೆ. ಸಾಹಿತಿ ಬಿಆರ್ ಲಕ್ಷ್ಮಣರಾವ್, ಪರಿಸರ ಪ್ರೇಮಿ ರೇವತಿ ಕಾಮತ್, ನಿರ್ದೇಶಕ ನಂಜುಂಡೇಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹನಿ ಫಿಲಂ ಮೇಕರ್ಸ್ ಬ್ಯಾನರ್‌ನಲ್ಲಿ ಎನ್ ಎ ಶಿವಕುಮಾರ್ (ಕುಮಾರ್ ನೊಣವಿನಕೆರೆ) ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ‘ಭಜರಂಗಿ 2’ ಸಿನಿಮಾ ಖ್ಯಾತಿಯ ಚಲುವರಾಜ್, ಸಂಭ್ರಮಶ್ರೀ ಮುಂತಾದವರು ನಟಿಸುತ್ತಿದ್ದಾರೆ.
ಈ ಸಿನಿಮಾ ಕಥೆ ಏನು?
ಅಪ್ಪ - ಅಮ್ಮನಿಗೆ ತಮ್ಮ ಮಕ್ಕಳು ಸೂಪರ್ ಸ್ಟಾರ್ ಆಗಬೇಕೆಂಬ ಕನಸು ಇರುವುದು. ತಾವು ಅಂದುಕೊಂಡಂತೆ ಮಕ್ಕಳು ಇರಬೇಕು ಅಂತ ಆಸೆ ಪಡುತ್ತಾರೆ. ಅದರಲ್ಲೂ ತಾಯಿಗೆ ತನ್ನ ಮಕ್ಕಳು ಹೀಗೆ ಆಗಬೇಕು, ಹಾಗೆ ಆಗಬೇಕು ಎನ್ನೋದಿರುತ್ತದೆ. ಆದರೆ ಮಕ್ಕಳಿಗೂ ಅವರದ್ದೇ ಆದ ಆಸೆ ಇರುತ್ತದೆ. ನಮ್ಮ ಆಸೆಯನ್ನು ಮಕ್ಕಳ ಮೇಲೆ ಹೇರಿದರೆ ಏನೆಲ್ಲ ಆಗುವುದು ಎನ್ನೋದು ಈ ಸಿನಿಮಾದಲ್ಲಿದೆ.
