ಹಿತವಾದ ರೊಮ್ಯಾಂಟಿಕ್ ಹಾಸ್ಯಗಳಿಂದ ಹಿಡಿದು ಅದ್ಭುತವಾದ ಆಕ್ಷನ್ ಥ್ರಿಲ್ಲರ್‌ಗಳವರೆಗೆ ಎಲ್ಲಾ ಸಿನಿಮಾಗಳನ್ನೂ ನೀವು ರೆಂಟ್‌ನಲ್ಲಿ ಬಹಳ ಸುಲಭವಾಗಿ ವೀಕ್ಷಿಸಬಹುದು.
ಪ್ರೈಮ್ ವಿಡಿಯೋ ಕೇವಲ ಒಟಿಟಿ ವೇದಿಕೆಯಲ್ಲ. ಅದೊಂದು ಮನರಂಜನಾ ಹಬ್. ನೀವು ವೀಕ್ಷಿಸಲು ಇಷ್ಟಪಡುವ ಎಲ್ಲವನ್ನೂ ಒಂದೇ ಸೂರಿನಡಿ ಪಡೆದುಕೊಳ್ಳುವ ಸ್ಥಳ. ಇತ್ತೀಚಿನ ಭಾರತೀಯ ಮತ್ತು ಅಂತರರಾಷ್ಟ್ರೀಯ ಒರಿಜಿನಲ್ಸ್, ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಂದ ಹಿಡಿದು ಆಡ್-ಆನ್ ಸಬ್‌ಸ್ಪ್ರಿಪ್ಶನ್ಸ್ ಮತ್ತು ಮೂವಿ ರೆಂಟ್‌ವರೆಗೆ ಎಲ್ಲವನ್ನೂ ಪ್ರೈಮ್ ವಿಡಿಯೋ ಕವರ್ ಮಾಡಿದೆ.
ಒಂಚೂರು ಕೆಲಸದ ಬಿಡುವೇ ಇಲ್ಲದ ದಿನಗಳಲ್ಲಿ ನೀವು ಎಂದಾದರೂ ಬ್ಲಾಕ್‌ಬಸ್ಟರ್ ಸಿನಿಮಾ ನೋಡೋದನ್ನ ತಪ್ಪಿಸಿಕೊಂಡಿದ್ದೀರಾ? ಹಾಗಿದ್ದಲ್ಲಿ ಪ್ರೈವ್ ವಿಡಿಯೋದ ಮೂವಿ ರೆಂಟಲ್ಸ್ ನಿಮಗೆ ಅತ್ಯುತ್ತಮ ಆಯ್ಕೆ. ಇಲ್ಲಿ ನೀವು ಸಿನಿಮಾಗಳನ್ನು ಬಾಡಿಗೆ ಪಡೆಯುವ ದಿ ಬೆಸ್ಟ್ ಪ್ಲೇಸ್. ಕಳೆದ 100 ವರ್ಷಗಳಲ್ಲಿ 7,500 ಕ್ಕೂ ಹೆಚ್ಚು ಶೀರ್ಷಿಕೆಗಳು ಬಿಡುಗಡೆಯಾಗಿವೆ. 1920 ರ ದಶಕದ ಕ್ಲಾಸಿಕ್‌ಗಳಿಂದ ಹಿಡಿದು 2020 ರ ದಶಕದ ಇತ್ತೀಚಿನ ಬ್ಲಾಕ್‌ಬಸ್ಟರ್‌ಗಳವರೆಗೆ, ಎಲ್ಲಾ ಸಿನಿಮಾಗಳಲ್ಲೂಇಲ್ಲಿ ರೆಂಟ್‌ಗೆ ಪಡೆಯಬಹುದು.
ಸ್ಟೆಪ್ ಬೈ ಸ್ಟೆಪ್ ಗೈಡ್ ಮೂಲಕ, ಅತ್ಯಂತ ಗರಿಷ್ಠವಾಗಿ ಕೇಳಲಾದ ಪ್ರಶ್ನೆಗಳಿಗೆ ಒಂದಕ್ಕೆ ಉತ್ತರ ನೀಡಲಾಗಿದೆ."ಪ್ರೈಮ್ ವಿಡಿಯೋದಲ್ಲಿ ಸಿನಿಮಾವನ್ನು ರೆಂಟ್‌ಗೆ ಪಡೆಯೋದು ಹೇಗೆ?" ಮತ್ತು ನಿಮ್ಮ ಮುಂದಿನ ಮೂವಿ ನೈಟ್‌ಗಾಗಿ ಆಯ್ಕೆ ಮಾಡಲು ವಿವಿಧ ಪ್ರಕಾರಗಳಿಂದ ಚಲನಚಿತ್ರಗಳ ಒಂದು ಅದ್ಭುತ ಪಟ್ಟಿಯೇ ನಿಮ್ಮೆದರು ಬರುತ್ತದೆ.
ಪ್ರೈಮ್ ವಿಡಿಯೋದಲ್ಲಿ ಮೂವಿ ರೆಂಟ್‌ಗೆ ಪಡೆಯುವ ಹಂತ
primevideo.com ಪ್ರವೇಶಿಸಿದ ಬಳಿಕ, ನೀವು ನೋಡಲು ಇಷ್ಟಪಡುವ ಸಿನಿಮಾವನ್ನು ಸರ್ಚ್ ಮಾಡಿ. ಹೆಚ್ಚುವರಿಯಾಗಿ ಖರೀದಿ ಅಗತ್ಯವಿರುವ ಶೀರ್ಷಿಕೆಗಳನ್ನು ವಿಶಿಷ್ಟವಾದ ಹಳದಿ ಶಾಪಿಂಗ್ ಬ್ಯಾಗ್ ಐಕಾನ್ ಮೂಲಕ ಸುಲಭವಾಗಿ ಗುರುತಿಸಬಹುದಾಗಿದೆ. ಅದನ್ನು ಕ್ಲಿಕ್ ಮಾಡಿದ ಬಳಿಕ ಆನ್‌ಸ್ಕ್ರೀನ್‌ನಲ್ಲಿ ಬರುವೆ ಸೂಚನೆಗಳನ್ನು ಪಾಲಿಸಿ, ರೆಂಟಲ್ ರಕ್ರಿಯೆಯನ್ನು ಪೂರ್ಣ ಮಾಡಿ. ಬಳಿಕ ಪ್ರೈನನ್ ವಿಡಿಯೋದಲ್ಲಿ ನಿಮ್ಮಿಷ್ಟದ ಸಿನಿಮಾವನ್ನು ಎಂಜಾಯ್ ಮಾಡಿ. ಕೇವಲ ಮೊಬೈಲ್ ಮಾತ್ರವಲ್ಲ, ಟಿವಿ ಹಾಗೂ ಅಪ್ಲಿಕೇಶನ್ ಡೌನ್‌ಲೋಡ್ ಆಗುವ ಎಲ್ಲಾ ಸಾಧನಗಳನ್ನು ನೀವು ವೀಕ್ಷಣೆ ಮಾಡಬಹುದು.
ಸಿನಿಮಾ ಬಾಡಿಗೆಗೆ ಪಡೆಯುವುದರಿಂದ ನಿರ್ದಿಷ್ಟ ಅವಧಿಗೆ ಸಿನಿಮಾ ಪ್ರವೇಶವನ್ನು ನೀಡುತ್ತದೆ, ಆದ್ದರಿಂದ ನಿಮ್ಮ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ನೀವು ರೆಂಟ್‌ಗೆ ಪಡೆಯುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ರೆಂಟ್‌ಗೆ ಪಡೆದ ಸಿನಿಮಾ, ರೆಂಟ್ ದಿನಾಂಕದಿಂದ 30 ದಿನಗಳವರೆಗೆ ನಿಮ್ಮ ವೀಡಿಯೊ ಲೈಬ್ರರಿಯಲ್ಲಿ ಉಳಿಯುತ್ತವೆ. ಆದರೆ, ನೀವು ಚಲನಚಿತ್ರ ಶೀರ್ಷಿಕೆಯ ಪ್ಲೇಬ್ಯಾಕ್ ಅನ್ನು ಪ್ರಾರಂಭಿಸಿದ ನಂತರ, ವೀಕ್ಷಣೆಯನ್ನು ಪೂರ್ಣಗೊಳಿಸಲು ನಿಮಗೆ ಗರಿಷ್ಠ 48 ಗಂಟೆಗಳ ಕಾಲಾವಕಾಶವಿದೆ. "ಇನ್ನಷ್ಟು ಖರೀದಿ ಆಯ್ಕೆಗಳು" ವೈಶಿಷ್ಟ್ಯವು HD ಮತ್ತು SD ಸೇರಿದಂತೆ ವಿಭಿನ್ನ ಪ್ಲೇಬ್ಯಾಕ್ ಗುಣಮಟ್ಟಗಳಲ್ಲಿ ಕಂಟೆಂಟ್ ಖರೀದಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಪ್ರೈಮ್ ವಿಡಿಯೋದಲ್ಲಿ ನೀವು ಏನನ್ನು ರೆಂಟ್‌ಗೆ ಪಡೆದು ವೀಕ್ಷಿಸಬಹುದು?
ಪ್ರೈಮ್ ವಿಡಿಯೋದಲ್ಲಿ ಸಿನಿಮಾ ಹೇಗೆ ರೆಂಟ್‌ಗೆ ಪಡೆಯುವುದು ಎಂದು ಈಗ ನಿಮಗೆ ತಿಳಿದಿದೆ, ನೀವು ರೆಂಟ್ ಪಡೆಯಬಹುದಾದ ಸಿನಿಮಾಗಳ ಪಟ್ಟಿ ಇಲ್ಲಿದೆ.
Action movies: ಹೃದಯಸ್ಪರ್ಶಿ ಸನ್ನಿವೇಶಗಳಿರುವ ಆಕ್ಷನ್ ಸಿನಮಾ ಇಷ್ಟಪಡ್ತೀರಾ ಎಂದಾದಲ್ಲಿ, Resident Evil: The Final Chapter, Dune, Dune: Part Two, Meg 2: The Trench, Tenet, Saving Private Ryan, John Wick: Chapter 2, Battleship, The Equalizer, Godzilla x Kong: The New Empire, The Karate Kid, Top Gun: Maverick, ಮತ್ತು ಇನ್ನೂ ಹಲವು ಸಿನಿಮಾಗಳು ಇಲ್ಲಿವೆ.
Comedy movies: ಕುಂತಲ್ಲೇ ನಗುತ್ತಲೇ ಇರಬೇಕು ಅಂತಾ ಹಾಸ್ಯ ಸಿನಿಮಾಗಳು ಬೇಕಾದಲ್ಲಿ Ghost Town, Grease, Last Holiday, Zoolander, Bad Moms, Barbie, The Hustle ಸೇರಿದಂತೆ ಇಂಥ ಹಲವು ಸಿನಿಮಾಗಳು ಪ್ರೈಮ್‌ನಲ್ಲಿದೆ.
Kids and family movies: ಮಕ್ಕಳು ಹಾಗೂ ಕುಟುಂಬದ ಜೊತೆ ವೀಕೆಂಡ್ ಇಷ್ಟಪಡ್ತೀರಾ ಎಂದಾದಲ್ಲಿ Hotel Transylvania, Charlotte’s Web, Spy Kids 3: Game Over, The Spongebob Squarepants Movie, Teen Titans Go! vs. Teen Titans, How to Train Your Dragon, Trolls World Tour, ಸೇರಿದಂತೆ ಹಲವು ಸಿನಿಮಾಗಳಿವೆ.
Feel good rom-com movies: ಕೆಲಸದಲ್ಲಿ ಕೆಟ್ಟ ದಿನ ಇವತ್ತಾಗಿತ್ತು. ಹಾಗಿದ್ದಲ್ಲಿ ಈ ರೋಮ್ಯಾಂಟಿಕ್ ಕಾಮಿಡಿ ಸಿನಿಮಾಗಳು ಇಷ್ಟವಾಗಬಹುದು.Bewitched, Last Holiday, License to Wed, The Five Year Engagement, Catch & Release ಸೇರಿದಂತೆ ಇನ್ನೂ ಹಲವು ಸಿನಿಮಾಗಳಿವೆ.
