Dr. Bro is back : ಗಗನ್ ಅಲಿಯಾಸ್ ಡಾ. ಬ್ರೋ ಮತ್ತೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಷ್ಯ ಕೇಳಿದ ಫ್ಯಾನ್ಸ್ಗೆ ಖುಷಿಯಾಗಿದೆ. ಕೆಲವೇ ನಿಮಿಷದಲ್ಲಿ ವಿಡಿಯೋಕ್ಕೆ ಸಾವಿರಾರು ಲೈಕ್ಸ್, ನೂರಾರು ಕಮೆಂಟ್ ಬಂದಿದೆ.
ಪ್ರತಿ ಬಾರಿ ಬಿಗ್ ಬಾಸ್ ಕನ್ನಡ (Bigg Boss Kannada) ರಿಯಾಲಿಟಿ ಶೋ ಶುರು ಆಗ್ತಿದ್ದಂತೆ ಪ್ರಸಿದ್ದ ಯುಟ್ಯೂಬರ್ ಡಾ. ಬ್ರೋ ಹೆಸರು ಕೇಳಿ ಬರುತ್ತೆ. ನಿರೀಕ್ಷಿತ ಲೀಸ್ಟ್ ನಲ್ಲಿ ಡಾ. ಬ್ರೋ (Dr. Bro) ಸ್ಥಾನ ಪಡೆದಿರ್ತಾರೆ. ಈ ಬಾರಿ ಕೂಡ ಬಿಗ್ ಬಾಸ್ ಕನ್ನಡ 12ರ ಸೀಸನ್ ನಲ್ಲಿ ಡಾ. ಬ್ರೋ ಕಾಣಿಸಿಕೊಳ್ತಾರೆ ಎನ್ನುವ ಸುದ್ದಿ ಬಲವಾಗಿದೆ. ಕೆಲ ತಿಂಗಳಿಂದ ಡಾ. ಬ್ರೋ ನಾಪತ್ತೆಯಾಗಿದ್ರು. ಏಳು ತಿಂಗಳಿಂದ ಅವ್ರ ಒಂದೇ ಒಂದು ವಿಡಿಯೋ ಯುಟ್ಯೂಬ್ ನಲ್ಲಿ ಪೋಸ್ಟ್ ಆಗಿರಲಿಲ್ಲ. ಆದ್ರೆ ಡಾ. ಬ್ರೋ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ರು. ಗೋ ಪ್ರವಾಸದ ಮೂಲಕ, ಸಾಮಾನ್ಯ ಜನರಿಗೆ ದೇಶ, ವಿದೇಶ ಸುತ್ತಿಸೋದ್ರಲ್ಲಿ ಬ್ಯುಸಿಯಿದ್ದ ಡಾ. ಬ್ರೋ, ಬ್ಲಾಗ್ ಮಾಡಲ್ವಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಮತ್ತೆ ಕೆಲವರು, ಡಾ. ಬ್ರೋ ಬಿಗ್ ಬಾಸ್ ಗೆ ಬರ್ತಾರೆ. ಹಾಗಾಗಿ ಯುಟ್ಯೂಬ್ ನಿಂದ ದೂರ ಇದ್ದಾರೆ ಎನ್ನುವ ಸುದ್ದಿ ಹರಡಿದ್ರು. ಆದ್ರೀಗ ಡಾ. ಬ್ರೋ ಯುಟ್ಯೂಬ್ ಗೆ ವಾಪಸ್ ಆಗಿದ್ದಾರೆ. ಹೊಸ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಚಿನ್ನದ ಗಣಿ (gold mine )ಗೆ ಡಾ. ಬ್ರೋ ಲಗ್ಗೆ
ಡಾ. ಬ್ರೋ ಹೊಸ ವಿಡಿಯೋ ಒಂದನ್ನು ಯುಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿನ್ನ ಹೇಗೆ ತಯಾರಿಸ್ತಾರೆ ನೋಡಿ ಎನ್ನುವ ಶೀರ್ಷಿಕೆಯಲ್ಲಿ ವಿಡಿಯೋ ಪೋಸ್ಟ್ ಆಗಿದೆ. ಈ ವಿಡಿಯೋದಲ್ಲಿ ಟನಲ್ ಮೈನಿಂಗ್ ಬಗ್ಗೆ ಡಾ. ಬ್ರೋ ಮಾಹಿತಿ ನೀಡ್ತಿದ್ದಾರೆ. ಫಿಲಿಪ್ಪೀನ್ಸ್ ಗೆ ಭೇಟಿ ನೀಡಿರುವ ಡಾ ಬ್ರೋ. ಟನಲ್ ಒಳಗೆ ಹೇಗೆ ಗಣಿಗಾರಿಕೆ ಮಾಡ್ತಾರೆ ಎಂಬುದನ್ನು ಡಿಟೇಲ್ ಆಗಿ ತೋರಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಅಪಘಾತಕ್ಕೀಡಾಗಿದ್ದ ಟನಲ್ ಒಳಗೆ ಹೋಗುವ ಡಾ. ಬ್ರೋ ರಿಸ್ಕ್ ತೆಗೆದುಕೊಂಡು ವೀಕ್ಷಕರಿಗೆ ಚಿನ್ನದ ಬಗ್ಗೆ ಮಾಹಿತಿ ನೀಡಿದ್ದಾರೆ.
Amruthadhaare Serial: ಮಲ್ಲಿ ಮಹಾಸತ್ಯ ಬಾಯಿಬಿಟ್ಟರೆ ಮಾತ್ರ ಗೌತಮ್-ಭೂಮಿ ಬಾಳಲ್ಲಿ ಅಮೃತಧಾರೆ
ಡಾ ಬ್ರೋ ಹೊಸ ವಿಡಿಯೋಕ್ಕೆ ಫ್ಯಾನ್ಸ್ ರಿಯಾಕ್ಷನ್ :
ಏಳು ತಿಂಗಳ ನಂತ್ರ ಡಾ. ಬ್ರೋ ವಿಡಿಯೋ ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಈವರೆಗೆ ವಿಡಿಯೋ ಒಂದು ಮಿಲಿಯನ್ ಗಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ಇಷ್ಟು ದಿನ ನಿಮ್ಮನ್ನು ಮಿಸ್ ಮಾಡ್ಕೊಂಡಿದ್ವಿ. ಈಗ ವಾಪಸ್ ಬಂದಿದ್ದು ಖುಷಿಯಾಗಿದೆ. ಹೊಸ ಹೊಸ ವಿಡಿಯೋ ಪೋಸ್ಟ್ ಮಾಡ್ತಿರಿ ಅಂತ ಕಮೆಂಟ್ ಮಾಡಿದ್ದಾರೆ. ಬಹುತೇಕ ಎಲ್ಲ ಕಮೆಂಟ್ ನಲ್ಲಿ ವೀಕ್ಷಕರು, ಡಾ ಬ್ರೋ ವಾಪಸ್ ಬಂದಿದ್ದಕ್ಕೆ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಡಾ. ಬ್ರೋ ತೆಗೆದುಕೊಂಡ ರಿಸ್ಕ್ ನೋಡಿ ಅನೇಕರು ಭಯಗೊಂಡಿದ್ದಾರೆ. ಹುಷಾರಾಗಿರಿ ಅಂತ ಎಚ್ಚರಿಕೆ ನೀಡಿದ್ದಾರೆ. ವಿಶೇಷ ಅಂದ್ರೆ ಡಾ. ಬ್ರೋ ಈ ವಿಡಿಯೋ ಪೋಸ್ಟ್ ಮಾಡಿ ಒಂದು ನಿಮಿಷ ಆಗಿರಲಿಲ್ಲ. ಆಗ್ಲೇ 1.5 ಸಾವಿರ ಲೈಕ್ಸ್ ಹಾಗೂ 220 ಕಮೆಂಟ್ಸ್ ಬಂದಿತ್ತು. ಬಹುತೇಕ ಎಲ್ಲರೂ ಸುರಂಗದ ಒಳಗಿದ್ದ ವಿಡಿಯೋವನ್ನು ಮೆಚ್ಚಿಕೊಂಡಿದ್ದು ಮಾತ್ರವಲ್ಲದೆ ಗಗನ ಧೈರ್ಯಕ್ಕೆ ಸಲಾಂ ಹೊಡೆದಿದ್ದಾರೆ. ವಿಡಿಯೋ ನೋಡಿದ್ರೆ ಜೀವ ಬಾಯಿಗೆ ಬರುತ್ತೆ. ಇಷ್ಟೊಂದು ಅಪಾಯಕಾರಿ ಜಾಗಕ್ಕೆ ಹೋದ ಗಗನ್ ಧೈರ್ಯ, ಸಾಹಸ ಮೆಚ್ಚಲೇಬೇಕು ಅಂತ ಕಮೆಂಟ್ ಮಾಡಿದ್ದಾರೆ.
ಕನ್ನಡ ಯುಟ್ಯೂಬರ್ Dr Bro ಈ ಬಾರಿ Bigg Boss Kannada 12 ಶೋಗೆ ಹೋದರೆ ಈ
ಬಿಗ್ ಬಾಸ್ ಗೆ ಬರ್ತಾರಾ ಗಗನ್ ? : ಸೆಪ್ಟೆಂಬರ್ 28 ರಿಂದ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಶುರು ಆಗ್ತಿದೆ. ಈ ಬಾರಿ ಗಗನ್ ಬಿಗ್ ಬಾಸ್ ಮನೆ ಸೇರೋದು ಪಕ್ಕಾ ಎನ್ನಲಾಗ್ತಿದೆ.

