ಬಿಗ್ ಬಾಸ್ ಸ್ಪರ್ಧಿ ತಾನ್ಯ ಮಾಜಿ ಬಾಯ್‌ಫ್ರೆಂಡ್ ಬಾಲರಾಜ್ ಅರೆಸ್ಟ್, ಕಾರಣ ನಿಗೂಢ. ಬಿಗ್ ಬಾಸ್ 19ರ ಸ್ಪರ್ಧಿ ತಾನ್ಯ ಮಿತ್ತಲ್ ಮಾಜಿ ಬಾಯ್‌ಫ್ರೆಂಡ್ ಬಾಲರಾಜ್ ಸಿಂಗ್ ಅರೆಸ್ಟ್ ಆಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಾಲರಾ್ಜ್ ಸಿಂಗ್ ಅರೆಸ್ಟ್ ಮಾಡಲಾಗಿದೆ.

ಮುಂಬೈ (ಸೆ.14) ಹಿಂದಿ ಬಿಗ್ ಬಾಸ್ 19ನೇ ಆವೃತ್ತಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆ ಇದೀಗ ರಾಜಕೀಯ ಚದುರಂಗದಾಟಕ್ಕೆ ವೇದಿಕೆಯಾಗಿದೆ. ತೀವ್ರ ಜಿದ್ದಾಜಿದ್ದಿ ನಡೆಯುತ್ತಿದೆ. ಇದರ ನಡುವೆ ಸ್ಪರ್ಧಿ ತಾನ್ಯ ಮಿತ್ತಲ್ ಎಲ್ಲರ ಗಮನಸೆಳೆದಿದ್ದಾರೆ. ಬಿಗ್ ಬಾಸ್ 19ರ ಮನೆಯಲ್ಲಿ ತಾನ್ಯ ಮಿತ್ತಲ್ ಆರಂಭಿಂದಲೇ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಇದರ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತಾನ್ಯ ಮಿತ್ತಲ್ ಮಾಜಿ ಬಾಯ್‌ಫ್ರೆಂಡ್ ಬಾಲರಾಜ್ ಸಿಂಗ್‌ನನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲರಾಜ್ ಅರೆಸ್ಟ್, ಕಾರಣವೇನು?

ತಾನ್ಯ ಮಿತ್ತಲ್ ಮಾಜಿ ಗೆಳೆಯನಾಗಿರುವ ಬಾಲರಾಜ್ ಸಿಂಗ್ ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ ಆಗಿ ಗಮನಸೆಳೆದಿದ್ದಾರೆ. ಆದರೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಾಲರಾಜ್‌ನನ್ನು ಬಂಧಿಸಿದ್ದಾರೆ. ಬಾಲರಾಜ್ ಬಂಧನಕ್ಕೆ ಕಾರಣವೇನು ಅನ್ನೋದು ಬಹಿರಂಗವಾಗಿಲ್ಲ. ದೈನಿಕ್ ಬಾಸ್ಕರ್ ಮಾಧ್ಯಮದ ವರದಿ ಪ್ರಕಾರ ಬಾಲರಾಜ್ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಒಂದು ಧರ್ಮ ಹಾಗೂ ಸಮುದಾಯ ಕುರಿತು ನೀಡಿದ ಹೇಳಿಕೆಗೆ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ. ತಾನ್ಯ ಮಿತ್ತಲ್ ಮಾಜಿ ಬಾಯ್‌ಫ್ರೆಂಡ್ ಆಗಿ ಗುರುತಿಸಿಕೊಂಡಿದ್ದ ಬಾಲರಾಜ್ ಸಿಂಗ್ ಸೋಶಿಯಲ್ ಮೀಡಿಯಾ ಮೂಲಕ ಮಾಡುತ್ತಿದ್ದ ಕಮೆಂಟ್‌, ಹೇಳಿಕೆಗಳಿಂದಲೇ ಅರೆಸ್ಟ್ ಆಗಿರುವ ಸಾಧ್ಯತೆಗಳಿವೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಸ್ಫೋಟಕ ಹೇಳಿಕೆ ನೀಡಿದ ನಟಿ ಝೋಯಾ ಖಾನ್

ತಾನ್ಯ ಮಿತ್ತಲ್‌ಗೆ ಮಾತ್ರವಲ್ಲ, ನಟಿ ಝೋಯಾ ಖಾನ್‌ಗೂ ಬಾಲರಾಜ್ ಮಾಜಿ ಬಾಯ್‌ಫ್ರೆಂಡ್. ಬಾಲರಾಜ್ ಜೊತೆ ರಿಲೇಶನ್‌ಶಿಪ್‌ನಲ್ಲಿರುವಾಗ ಆತ ಕಿರುಕುಳ ನೀಡುತ್ತಿದ್ದ. ಮಾನಸಿಕ ಹಿಂಸೆ ಅನುಭವಿಸಿದ್ದೇನೆ ಎಂದಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ ವೇದಿಕೆಗಳ ಮೂಲಕ ಬಾಲರಾಜ್ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದ. ಆತನ ಹೇಳಿಕೆಗಳು ಹಲವರಿಗೆ ನೋವುಂಟು ಮಾಡುತ್ತಿತ್ತು. ಹೀಗಾಗಿ ನಾನು ಕೂಡ ಆತನ ವಿರುದ್ದ ಕಾನೂನು ಹೋರಾಟ ಮಾಡುತ್ತಿದ್ದೇನೆ ಎಂದು ಝೋಯಾ ಖಾನ್ ಹೇಳಿದ್ದಾರೆ.

ಧಾರಾವಾಹಿಯಲ್ಲಿಯೂ ನಟಿಸಿದ್ದ ಖ್ಯಾತ ಸುದ್ದಿ ನಿರೂಪಕ Bigg Boss Kannada 12 ಶೋಗೆ ಬರ್ತಾರಾ? ಏನಂದ್ರು?

ಬಾಲರಾಜ್ ಕೊಲೆ ಬೆದರಿಕೆ ಹಾಕಿದ್ದ. ನನ್ನ ಖಾಸಗಿ ಫೋಟೋಗಳನ್ನು ತೋರಿಸಿ ಬೆದರಿಸುತ್ತಿದ್ದ. ಆತನ ಜೊತೆಗಿನ ರಿಲೇಶನ್‌ಶಿಪ್‌ನಲ್ಲಿ ತೀವ್ರ ಹಿಂಸೆ, ನೋವು ಅನುಭವಿಸಿದ್ದೇನೆ ಎಂದು ಝೋಯಾ ಖಾನ್ ಹೇಳಿದ್ದಾರೆ.

ಬಾಲರಾಜ್ ಸಿಂಗ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಮೂಲದ ಬಾಲರಾಜ್ ಸಿಂಗ್ ಸೆಹಲ್‌ಪುರ್ ಗ್ರಾಮದ ಸರಪಂಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲರಾಜ್ ಎಂಟರ್ಟೈನ್ಮೆಂಟ್ ಅನ್ನೋ ವೇದಿಕೆಯಲ್ಲಿ ಬಾಲರಾಜ್ ಸೆಲೆಬ್ರೆಟಿ ಕಲ್ಚರ್ ಕುರಿತು ಮಾಹಿತಿ ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ 2.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಬಾಲರಾಜ್, ಸೋಶಿಯಲ್ ಮೀಡಿಯಾ ಮೂಲಕ ಉತ್ತಮ ಆದಾಯಗಳಿಸುತ್ತಿದ್ದಾರೆ. ತಾನ್ಯ ಮಿತ್ತಲ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಡುತ್ತಿದ್ದಂತೆ ಇತ್ತ ಬಾಲರಾಜ್, ತಾನ್ಯ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದರು. ತಾನ್ಯಗೆ 150ಕ್ಕೂ ಬಾಡಿಗಾರ್ಡ್, ಅತ್ಯಂತ ಶ್ರೀಮಂತೆ ಸೇರಿದಂತೆ ಹಲವು ರೀತಿ ತಪ್ಪು ಮಾಹಿತಿಗಳನ್ನು ನೀಡಿದ್ದರು.

'ಬಿಗ್ ಬಾಸ್ ಕನ್ನಡ ಸೀಸನ್ 12' ಮತ್ತೊಂದು ಪ್ರೋಮೋ ರಿಲೀಸ್​​: ಕಾಗೆ-ನರಿ ಕಥೆ ಹೇಳಿದ್ಯಾಕೆ ಕಿಚ್ಚ ಸುದೀಪ್!