- Home
- Entertainment
- TV Talk
- ಧಾರಾವಾಹಿಯಲ್ಲಿಯೂ ನಟಿಸಿದ್ದ ಖ್ಯಾತ ಸುದ್ದಿ ನಿರೂಪಕ Bigg Boss Kannada 12 ಶೋಗೆ ಬರ್ತಾರಾ? ಏನಂದ್ರು?
ಧಾರಾವಾಹಿಯಲ್ಲಿಯೂ ನಟಿಸಿದ್ದ ಖ್ಯಾತ ಸುದ್ದಿ ನಿರೂಪಕ Bigg Boss Kannada 12 ಶೋಗೆ ಬರ್ತಾರಾ? ಏನಂದ್ರು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗಲು ಕೆಲವೇ ದಿನಗಳು ಇವೆ. ಖ್ಯಾತ ಸುದ್ದಿ ನಿರೂಪಕರು ಈ ಶೋನಲ್ಲಿ ಭಾಗವಹಿಸ್ತಾರೆ ಎನ್ನಲಾಗಿತ್ತು. ಇದಕ್ಕೀಗ ಅವರೇ ಉತ್ತರ ಕೊಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಯಾರು ಯಾರು ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ. ಬಿಗ್ ಬಾಸ್ ಶೋನಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗುತ್ತಿದೆ. ಈಗ ಖ್ಯಾತ ನಿರೂಪಕ ಚಂದನ್ ಶರ್ಮಾ ಕೂಡ ದೊಡ್ಮನೆ ಪ್ರವೇಶ ಮಾಡ್ತಾರೆ ಎನ್ನಲಾಗಿದೆ.
ಚಂದನ್ ಶರ್ಮಾ ಅವರು ಸುದ್ದಿ ಮನೆಯಲ್ಲಿ ಸೌಂಡ್ ಮಾಡಿದವರು. ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಅವರು ನಟಿಸಿಸಿದ್ದಾರೆ. ಕಳೆದ ಒಂದು ವರ್ಷದಿಂದ ಅವರು ಯಾವುದೇ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿಲ್ಲ.
ಕೆಲ ಸೀಸನ್‌ಗಳಿಂದ ಚಂದನ್ ಶರ್ಮಾ ಅವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎನ್ನಲಾಗುತ್ತಿದೆ. ಆದರೆ ಅವರು ಯಾವುದೇ ಮನರಂಜನಾ ಟಿವಿ ಶೋನಲ್ಲಿ ಭಾಗವಹಿಸಲೇ ಇಲ್ಲ. ಈ ಸೀನಸ್‌ನಲ್ಲಿಯೂ ಅವರು ಭಾಗವಹಿಸ್ತಾರೆ ಎನ್ನಲಾಗಿತ್ತು. ಅದಕ್ಕೀಗ ಅವರು ಫೇಸ್‌ಬುಕ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.
ಚಂದನ್ ಶರ್ಮಾ ಅವರು ಬೇರೆ ಯೋಜನೆ ಹಾಕಿಕೊಂಡಿದ್ದು, ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಅವರು ಟಿ ಎನ್ ಸೀತಾರಾಮ್ ಅವರ ಮಹಾಪರ್ವ ಧಾರಾವಾಹಿಯ ವಿದ್ಯಾಧರ ಸಿದ್ದಾರ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.
ಅಂದಹಾಗೆ ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗ್ತಿದೆ. ಈಗಾಗಲೇ ವಾಹಿನಿಯು ಬಿಗ್ ಬಾಸ್ ಶೋನ ಎರಡು ಪ್ರೋಮೋಗಳನ್ನು ರಿಲೀಸ್ ಮಾಡಿದೆ. ಈಗಾಗಲೇ ಸ್ಪರ್ಧಿಗಳ ಫೈನಲೈಸ್ ಕೂಡ ಆಗಿದೆ.