ಬಿಗ್‌ಬಾಸ್ 19ರ ಸ್ಪರ್ಧಿಗಳ ಸಂಭಾವನೆ ಬಹಿರಂಗವಾಗಿದ್ದು, ಗೌರವ್ ಖನ್ನಾ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಪ್ರತಿ ವಾರ 17.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿರುವ ಇವರು, ಬಿಗ್‌ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಎನಿಸಿಕೊಂಡಿದ್ದಾರೆ.
ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್ ಶೋನ 19ನೇ ಆವೃತ್ತಿ ಈಗಾಗಲೇ ಪ್ರಸಾರ ಆರಂಭವಾಗಿದೆ. ಇಲ್ಲಿಯವರೆಗೂ ಅದರಲ್ಲಿನ ಸ್ಪರ್ಧಿಗಳು ತಮ್ಮ ಡ್ರಾಮಾ ಕಾರಣದಿಂದಾಗಿ ಮಾತ್ರವೇ ಸುದ್ದಿಯಾಗುತ್ತಿದ್ದರು. ಈ ಬಾರಿ ಅವರಿಗೆ ನೀಡಲಾಗುತ್ತಿರುವ ವೇತನದ ಕಾರಣಕ್ಕಾಗಿಯೂ ಸುದ್ದಿಯಲ್ಲಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಕಾರ್ಯಕ್ರಮಕ್ಕೆ ತಕ್ಕುದಾದ ಕಂಟೆಂಟ್‌ಅನ್ನು ಹೊರಜಗತ್ತಿಗೆ ನೀಡುತ್ತಿದ್ದಾರೆ. ಜಗಳಗಳಿಂದ ಹಿಡಿದು ಸುಂದರ ಸ್ನೇಹದವರೆಗೂ 19ನೇ ಆವೃತ್ತಿಯ ಬಿಗ್ ಬಾಸ್ ಸೀಸನ್ ಗಮನಸೆಳೆಯುತ್ತಿದೆ.
ಗೌರವ್ ಖನ್ನಾ ದುಬಾರಿ ಸ್ಪರ್ಧಿ
ಆದರೆ, ಈ ಬಾರಿಯ ಬಿಗ್ ಬಾಸ್ ಸೀಸನ್‌ನಲ್ಲಿ ಗರಿಷ್ಠ ಸಂಭಾವನೆ ಪಡೆಯುತ್ತಿರುವ ಆರ್ಟಿಸ್ಟ್‌ಗಳ ಪಟ್ಟಿ ಹೊರಬಿದ್ದಿದೆ. ಅದರ ಪ್ರಕಾರ, ಅನುಪಮಾ ಟಿವಿ ಸೀರಿಯಲ್ ಮೂಲಕ ಪ್ರಖ್ಯಾತರಾದ ಗೌರವ್ ಖನ್ನಾ ಅತ್ಯಂತ ದುಬಾರಿ ಸ್ಪರ್ಧಿ ಎನ್ನಲಾಗಿದೆ. ಗೌರವ್ ಖನ್ನಾ ಒಂದು ವಾರ ಬಿಗ್ ಬಾಸ್ ಮನೆಯಲ್ಲಿ ಕಳೆದರೆ ವಾಹಿನಿಯಿಂದ 17.5 ಲಕ್ಷ ರೂಪಾಯಿ ಸಂದಾಯವಾಗಲಿದೆ. ಅದರರ್ಥ ದಿನಕ್ಕೆ 2.5 ಲಕ್ಷ ರೂಪಾಯಿ. ಇದರಿಂದಾಗಿ ಅವರು ಬಿಗ್‌ಬಾಸ್‌ನ ಅತ್ಯಂತ ಗರಿಷ್ಠ ವೇತನ ಪಡೆದ ಸ್ಪರ್ಧಿ ಎನಿಸಿದ್ದಾರೆ. ಹಾಗಂತ ಬಿಗ್‌ಬಾಸ್ 19ಗೆ ಮಾತ್ರವಲ್ಲ, ಇಲ್ಲಿಯವರೆಗೂ ಎಲ್ಲಾ ಬಿಗ್‌ಬಾಸ್ ಇತಿಹಾಸದ ಅತ್ಯಂತ ಗರಿಷ್ಠ ಸಂಭಾವನೆ ಪಡೆದ (ಪೂರ್ಣ ಪ್ರಮಾಣದ ಸ್ಪರ್ಧಿಯಾಗಿ) ಸ್ಪರ್ಧಿಯೂ ಇವರಾಗಿದ್ದಾರೆ.
ಇಲ್ಲಿಯವರೆಗಿನ ಬಿಗ್‌ಬಾಸ್‌ನ ಅತ್ಯಂತ ದುಬಾರಿ ಸ್ಪರ್ಧಿ ಹಾಲಿವುಡ್ ನಟಿ ಪಮೇಲಾ ಆಂಡರ್ಸನ್. ಕೇವಲ ಮೂರು ದಿನ ಈ ಶೋನಲ್ಲಿ ಇದ್ದ ಕಾರಣಕ್ಕೆ 2.5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು. ಬಿಗ್‌ಬಾಸ್-4ನಲ್ಲಿ ಭಾಗವಹಿಸಿದ್ದ ಈಕೆ ಕೇವಲ ಮೂರೇ ದಿನ ಮನೆಯಲ್ಲಿದ್ದರು.
ನಂತರದ ಸ್ಥಾನದಲ್ಲಿ ಯಾರಿದ್ದಾರೆ?
ಗೌರವ್ ಖನ್ನಾ ನಂತರದ ಸ್ಥಾನದಲ್ಲಿ ಗಾಯಕ ಅಮಾಲ್ ಮಲೀಕ್ ಇದ್ದಾರೆ. ಸ್ಕ್ರೀನ್ ವರದಿಯ ಪ್ರಕಾರ, ಅಮಾಲ್ ಪ್ರತಿ ವಾರ 8.75 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇದರರ್ಥ ಅವರ ಪ್ರತಿದಿನದ ವೇತನ 1.25 ಲಕ್ಷ ರೂಪಾಯಿ. ಇವರಿಬ್ಬರಲ್ಲದೆ, ಸೋಶಿಯಲ್‌ಮೀಡಿಯಾ ಇನ್‌ಫ್ಲುಯೆನ್ಸರ್ ಆವಾಜ್ ದರ್ಬಾರ್ ಹಾಗೂ ನಟಿವಿ ನಟಿ ಅಶ್ನೂರ್ ಕೌರ್ ಪ್ರತಿವಾರ 6 ಲಕ್ಷ ರೂಒಆಯಿ ಚಾರ್ಜ್ ಮಾಡುತ್ತಿದ್ದಾರೆ. ಸ್ಯಾಲರಿ ರೇಸ್‌ನಲ್ಲಿ ಮೃದುಲ್ ತಿವಾರಿ ಹಾಗೂ ಪ್ರಣಿತ್ ಮೋರ್ ಕೊನೇ ಸ್ಥಾನದಲ್ಲಿದ್ದಾರೆ. ಇತರ ಸ್ಪರ್ಧಿಗಳ ಗಳಿಕೆ ಇವರಿಗಿಂತ ಹೆಚ್ಚಾಗಿದೆ.
ಇನ್ನು ಹಿಂದಿನ ಬಿಗ್‌ಬಾಸ್ ಆವೃತ್ತೊಗಳನ್ನು ನೋಡೋದಾದರೆ, ಕರಣ್‌ವೀರ್ ವೋಹ್ರಾ ಕೂಡ ಬಿಗ್‌ಬಾಸ್‌ನಿಂದ ಗರಿಷ್ಠ ವೇತನ ಪಡೆದವರಾಗಿದ್ದಾರೆ. 12ನೇ ಆವೃತ್ತಿಯ ಬಿಗ್‌ಬಾಸ್‌ನಲ್ಲಿ ಒಂದು ವಾರಕ್ಕೆ ಇವರು 20 ಲಕ್ಷ ವೇತನ ಪಡೆದಿದ್ದರು. ಗೌರವ್ ಖನ್ನಾ ವೇತನ ಅವರನ್ನು ಈ ಸಾಲಿಗೆ ಸೇರಿಸಿದೆ.
ಮೊದಲ ವಾರವೇ ಇಬ್ಬಾಗವಾದ ಮನೆ
ಸೋಶಿಯಲ್ ಮೀಡಿಯಾದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಸ್ಯಾಲರಿ ವಿಚಾರ ಚರ್ಚೆ ಆಗುತ್ತಿದ್ದರೆ, ಬಿಗ್‌ಬಾಸ್ 19 ಆರಂಭವಾದ ಒಂದೇ ವಾರದಲ್ಲಿ ಮನೆ ಎರಡು ಭಾಗವಾಗಿದೆ. ಒಂದು ಕಡೆ ಜೀಶಾನ್ ಖಾದ್ರಿ ಗ್ರೂಪ್ ಇದ್ದರೆ, ಇನ್ನೊಂದು ಕಡೆ ಕನ್ನಿಕಾ ಸದಾನಂದ್ ಇದ್ದಾರೆ. ಇವರಿಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯುತ್ತಿದೆ. ಫರ್ಹಾನಾ ಭಟ್ ಹಾಗೂ ಬಶೀರ್ ನಡುವೆ ಕಳೆದ ಎಪಿಸೋಡ್‌ನಲ್ಲಿ ಭಾರೀ ಗಲಾಟೆಯೂ ಆಗಿತ್ತು.
