Bhat N Bhat ಯುಟ್ಯೂಬ್‌ ಚಾನೆಲ್‌ ಮಾಲೀಕರಾದ ಸುದರ್ಶನ್‌ ಬೆದ್ರಾಡಿ ಅವರು ಸಹೋದರನ ಜೊತೆ ಸೇರಿ ಹೊಸ ಅಂಗಡಿ ಕೂಡ ಆರಂಭಿಸಿದ್ದಾರೆ. ಇನ್ನು ಇವರ ಲವ್‌ಸ್ಟೋರಿ ಕೂಡ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. 

ಕನ್ನಡದ ಬಹುತೇಕರಿಗೆ ಮಂಗಳೂರು ಮೂಲದವರೇ ಸ್ಥಾಪಿಸಿರೋ Bhat N Bhat ಎಂಬ ಯುಟ್ಯೂಬ್‌ ಚಾನೆಲ್‌ ಪರಿಚಯ ಇದ್ದೇ ಇರುತ್ತದೆ. ಈ ಚಾನೆಲ್‌ ಮಾಲೀಕರು ಈಗ ಹದಿನೈದು ಜನರಿಗೆ ಕೆಲಸ ಕೊಟ್ಟಿದ್ದಾರಂತೆ. ಈ ಮಧ್ಯೆ ಸುದರ್ಶನ್‌ ಬೆದ್ರಾಡಿ ಅವರು ಲವ್‌ನಲ್ಲಿ ಬಿದ್ದು ಮದುವೆ ಕೂಡ ಆದರು.

ಅಡುಗೆಗೆ ಸಂಬಂಧಪಟ್ಟ ಚಾನೆಲ್!

ಕೊರೊನಾ ಟೈಮ್‌ನಲ್ಲಿ ಅಣ್ಣ-ತಮ್ಮ ಸೇರಿಕೊಂಡು ಅಡುಗೆಗೆ ಸಂಬಂಧಪಟ್ಟ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲು ಆರಂಭಿಸಿದರು. ತಾಯಿ, ಅಜ್ಜಿ ಎಲ್ಲರ ಬಳಿ ಅಡುಗೆ ಮಾಡಿಸೋದು, ಹಾಗೆ ತಾವು ಕೂಡ ಹೊಸ ಹೊಸ ಪ್ರಯೋಗ ಮಾಡುತ್ತ ಕಲಿಯುತ್ತ ಬಂದರು.

ಸಾಂಪ್ರದಾಯಿಕ ಅಡುಗೆಗಳು!

ಸಾಂಪ್ರದಾಯಿಕ ಸ್ಟೈಲ್‌ನಲ್ಲಿ ಅಡುಗೆ ಮಾಡೋದು ಹೇಳಿಕೊಡೋದು. ಬಾಳೆಕಾಯಿ ರೆಸಿಪಿ ಮಾಡುತ್ತಾರೆ ಅಂದ್ರೆ ತೋಟಕ್ಕೆ ಹೋಗಿ ಬಾಳೆಕಾಯಿ ಕೊಯ್ದು ತರುವಾಗಿನಿಂದಲೂ ವಿಡಿಯೋ ಮಾಡೋದುಂಟು. ಅಲ್ಲಿಂದ ಇವರ ವಿಡಿಯೋ ಶೂಟಿಂಗ್‌ ಶುರುವಾಗುತ್ತದೆ.

ಅಂಗಡಿ ಆರಂಭಿಸಿದ ಅಣ್ಣ-ತಮ್ಮ!

ಇವರ ಅಡುಗೆ ರೆಸಿಪಿಗಳನ್ನು ನೋಡಿದ ವೀಕ್ಷಕರು ತಾವು ಕೂಡ ಮನೆಯಲ್ಲಿ ಟ್ರೈ ಮಾಡಿ ಖುಷಿಪಟ್ಟರು. ಈ ಜನಪ್ರಿಯತೆಯನ್ನು ಬಳಸಿಕೊಂಡ ಸುದರ್ಶನ್‌ ಅವರು ತಮ್ಮನ ಜೊತೆ ಸೇರಿಕೊಂಡು ಒಂದು ಅಂಗಡಿ ಆರಂಭಿಸಿದರು. ಈಗ ಆ ಅಂಗಡಿಯಲ್ಲಿ ಮನೆಯಲ್ಲಿ ಮಾಡಿರುವ ಒಂದಷ್ಟು ತಿಂಡಿಗಳು ಸಿಗುತ್ತವೆ.

ಲವ್‌, ಮದುವೆ ಇತ್ಯಾದಿ!

ಈ ಮಧ್ಯೆ ಟೀಚರ್‌ ಆಗಿರೋ ಕೃತಿ ಹಾಗೂ ಸುದರ್ಶನ್‌ ಅವರು ಫೇಸ್‌ಬುಕ್‌ನಲ್ಲಿ ಪರಿಚಯ ಆಗುತ್ತಾರೆ. ಇವರ ಸ್ನೇಹ ಪ್ರೀತಿಗೆ ತಿರುಗಿ ಮದುವೆ ಆಗುವುದು. ಮೂರು ವರ್ಷಗಳ ಕಾಲ ಲವ್‌ ಮಾಡಿದ್ದ ಈ ಜೋಡಿ ಕುಟುಂಬದ ಒಪ್ಪಿಗೆ ಪಡೆದು, ಪಕ್ಕಾ ಸಂಪ್ರದಾಯದ ಪ್ರಕಾರ, ಹಳ್ಳಿ ಸೊಗಡಿನ ಜೊತೆಯಲ್ಲಿ ಮದುವೆ ಆಗಿದೆ. ಅಂದಹಾಗೆ ಸುದರ್ಶನ್‌ ಅವರು ವಕೀಲ ಕೂಡ ಹೌದು.

ಕೃತಿ ಕೂಡ ಪ್ರತಿಭಾವಂತೆ!

ಪರಸ್ಪರ ಸಹಕಾರ ಕೊಡುತ್ತ ಈ ಜೋಡಿ ಮುಂದೆ ಸಾಗುತ್ತಿದೆ. ಕೃತಿ ಒಳ್ಳೆಯ ಗಾಯಕಿ ಕೂಡ ಹೌದು, ಪತಿಯ ಕೆಲಸಗಳಿಗೆ ಕೃತಿ ಅವರು ಸಾಥ್‌ ಕೂಡ ನೀಡುತ್ತಾರೆ. ಯುಟ್ಯೂಬ್‌ ಚಾನೆಲ್‌ನ್ನು ಸದ್ಬಳಕೆ ಮಾಡಿಕೊಂಡು, ಅದರಿಂದಲೂ ಆದಾಯ ಗಳಿಸೋದು, ಹಾಗೆಯೇ ಉದ್ಯಮವನ್ನು ಶುರು ಮಾಡಿ, ಉಳಿದವರಿಗೂ ಕೂಡ ಕೆಲಸ ಕೊಟ್ಟಿರೋದು ಹೆಮ್ಮೆಯ ವಿಷಯ.

YouTube video playerYouTube video player