ಆಗಸ್ಟ್‌ 28ರಂದು ಮದುವೆಯಾಗಿರುವ ನಿರೂಪಕಿ ಅನುಶ್ರೀ ಅವರು ಮಗುವಿನ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ತಾಯ್ತನದ ಬಯಕೆ ಹೊರಹಾಕಿದ್ದಾರೆ. 

ನಿರೂಪಕಿ ಅನುಶ್ರೀ ಅವರು ( Anchor Anushree ) ಇತ್ತೀಚೆಗೆ ಮದುವೆಯಾಗಿದ್ದಾರೆ. ‘ನಾವು ನಮ್ಮವರು’ ಶೋನಲ್ಲಿ ಅನುಶ್ರೀ ಅವರು ಭಾಗಿ ಆಗಿದ್ದಾರೆ. ಆಗ ಸಮೀರ್‌ ಆಚಾರ್ಯ, ಶ್ರಾವಣಿ ದಂಪತಿ ಮಗಳು ಸರ್ವಾರ್ಥ ಜೊತೆ ಅವರು ಮಾತನಾಡಿದ್ದಾರೆ. ಆಗ ಅನುಶ್ರೀ ಅವರು ಹೆಣ್ಣು ಮಗು ಆಗಬೇಕು ಎನ್ನೋ ಆಸೆ ಹೇಳಿದ್ದಾರೆ.

ಅನುಶ್ರೀ ಹೇಳಿದ್ದೇನು?

ಅನುಶ್ರೀ ಅವರು ಪುಟಾಣಿ ಮಗು ಸರ್ವಾರ್ಥ ಜೊತೆ ಮುದ್ದು ಮುದ್ದಾಗಿ ಮಾತನಾಡಿದ್ದಾರೆ. ಆಗ ಶ್ರಾವಣಿ ಅವರು “ಆದಷ್ಟು ಬೇಗ ಹೆಣ್ಣು ಮಗು ಆಗಲಿ” ಎಂದು ಹೇಳಿದ್ದಾರೆ. ಆಗ ಅನುಶ್ರೀ ಅವರು “ನನಗೆ ಹೆಣ್ಣು ಮಗು ಅಂದರೆ ಇಷ್ಟ” ಎಂದಿದ್ದಾರೆ. ಆಗ ಅನುಶ್ರೀ “ನಿಮ್ಮೆಲ್ಲರ ಆಶೀರ್ವಾದ ಬೇಕು” ಎಂದು ಹೇಳಿದ್ದಾರೆ. ಆಗ ಸಮೀರ್‌ ಆಚಾರ್ಯ ಅವರು, “ಅವಶ್ಯವಾಗಿ” ಎಂದು ಹೇಳಿದ್ದಾರೆ.

ಅನುಶ್ರೀ ನಿರೂಪಣೆ ಮಾಡ್ತಿದ್ದಾರಾ?

ನಿರೂಪಕ ನಿರಂಜನ್‌ ದೇಶಪಾಂಡೆ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರ ಬದಲು ಅನುಶ್ರೀ ಅವರು ಈ ಬಾರಿಯ ‘ನಾವು ನಮ್ಮವರು’ ಶೋ ನಿರೂಪಣೆ ಮಾಡುತ್ತಿದ್ದಾರೆ ಎಂದು ಕಾಣುವುದು. ಜೀ ಕನ್ನಡ ವಾಹಿನಿಯ ಅನೇಕ ಶೋಗಳಲ್ಲಿ ಅನುಶ್ರೀ ಅವರೇ ನಿರೂಪಕಿ. ಒಂದು ಥರ ಜೀ ಕನ್ನಡದ ಮನೆ ಮಗಳಾಗಿರೋ ಅನುಶ್ರೀ ಹಾಗೂ ರೋಶನ್‌ ಅವರು ಶೋನಲ್ಲಿ ಕಾಣಿಸಿದರೂ ಕೂಡ ಆಶ್ಚರ್ಯವಿಲ್ಲ.

ಸಖತ್‌ ಆಗಿ ಕಾಣ್ತಿರೋ ಅನುಶ್ರೀ

ಅಂದಹಾಗೆ ಅನುಶ್ರೀ ಅವರು ಊಟದ ವೇಳೆ ಜೀ ಕನ್ನಡ ತಂತ್ರಜ್ಞರು, ಕಲಾವಿದರ ಜೊತೆ ಮಾತನಾಡಿರುವ ವಿಡಿಯೋವನ್ನು ಶ್ರಾವಣಿ ಸಮೀರ್‌ ಆಚಾರ್ಯ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಂಗಲ್ಯದ ಜೊತೆಗೆ ಸುಂದರವಾದ ನಕ್ಲೇಸ್‌ ಧರಿಸಿದ್ದಾರೆ. ಝರತಾರಿ ಸೀರೆಯಲ್ಲಿ ಅನುಶ್ರೀ ನಿಜಕ್ಕೂ ಕಂಗೊಳಿಸಿದ್ದಾರೆ. ಇದರ ಜೊತೆಗೆ ಮಲ್ಲಿಗೆ ಹೂವು ಧರಿಸೋದನ್ನು ಅವರು ಮರೆತಿಲ್ಲ. ಸಿಂಗಲ್ ಆಗಿದ್ದ ಅನುಶ್ರೀ ಈಗ, ಶ್ರೀಮತಿಯಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ವೊಂದರಲ್ಲಿ ಅನುಶ್ರೀ ಅವರು ರೋಶನ್‌ ಜೊತೆಗೆ ಮದುವೆಯಾಗಿದ್ದಾರೆ. ಆಗಸ್ಟ್‌ 28ರಂದು ನಡೆದ ಈ ಮದುವೆಯಲ್ಲಿ ರಾಜ್‌ ಬಿ ಶೆಟ್ಟಿ, ಜಗ್ಗೇಶ್‌, ಪ್ರೇಮಾ, ನಿಶ್ವಿಕಾ ನಾಯ್ಡು, ಸೋನಲ್‌ ಮೊಂಥೆರೋ, ತರುಣ್‌ ಸುಧೀರ್‌, ರಶ್ಮಿ ಪ್ರಭಾಕರ್‌, ಶಿವರಾಜ್‌ಕುಮಾರ್-ಗೀತಾ ಸೇರಿದಂತೆ ಮನರಂಜನಾ ವಾಹಿನಿಯ ತಂತ್ರಜ್ಞರು ಭಾಗಿಯಾಗಿದ್ದರು.

ರೋಶನ್‌ ಐಟಿ ಉದ್ಯಮಿ!

ಅಂದಹಾಗೆ ಇವರದ್ದು ಲವ್ ಮ್ಯಾರೇಜ್‌ ಅಂತೆ. ಐಟಿ ಉದ್ಯೋಗಿಯಾಗಿರುವ ರೋಶನ್‌ ಅವರು ಕೊಡಗು ಮೂಲದವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ಅನುಶ್ರೀ, ರೋಶನ್‌ ಭೇಟಿಯಾಗಿತ್ತು. ಯುವರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಅವರ ಕ್ಲಾಸ್‌ಮೇಟ್‌ ರೋಶನ್.‌ ಅಂದಹಾಗೆ ರೋಶನ್‌, ಅನುಶ್ರೀ ಅವರು ಭೇಟಿಯಾಗಲು ಶ್ರೀದೇವಿ ಕಾರಣವಂತೆ. ಈ ಮದುವೆಯಲ್ಲಿ ಮಂಟಪದ ಪಕ್ಕ ಪುನೀತ್‌ ರಾಜ್‌ಕುಮಾರ್‌ ಫೋಟೋವನ್ನು ಕೂಡ ಇಡಲಾಗಿತ್ತು. ಈ ಮೂಲಕ ಅನುಶ್ರೀ ಅವರು ಮದುವೆಯಲ್ಲಿಯೂ ಕೂಡ ನೆಚ್ಚಿನ ನಟನನ್ನು ಮರೆತಿಲ್ಲ.