Sandalwood Anchor Anushree And Roshan Wedding Photos: ನಿರೂಪಕಿ ಅನುಶ್ರೀ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಈ ಮದುವೆ ನಡೆದಿದೆ.
ಕೆಲ ವರ್ಷಗಳಿಂದ ಅನುಶ್ರೀ ( Anchor Anushree ) ಮದುವೆ ಯಾವಾಗ ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಇಂದು ( ಆಗಸ್ಟ್ 28ರಂದು) ನಿರೂಪಕಿ ಅನುಶ್ರೀ ಹಾಗೂ ರೋಶನ್ ಮದುವೆ ಆಗಿದ್ದಾರೆ. ಹೂವುಗಳಿಂದಲೇ ಮದುವೆ ಮಂಟಪ ಸೇರಿದಂತೆ ರೆಸಾರ್ಟ್‌ನ್ನು ಸಿಂಗಾರ ಮಾಡಲಾಗಿತ್ತು. ಗೌರಿ ಗಣೇಶ ಹಬ್ಬದಂದು ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ಮೆಹೆಂದಿ ಶಾಸ್ತ್ರ ನಡೆದಿತ್ತು. ಈಗ ಮದುವೆ ಆಗಿದೆ.
ಹುಡುಗ ಯಾರು?
ಕೊಡಗಿನ ರಾಮಮೂರ್ತಿ, ಸಿಸಿಲಿಯಾ ಪುತ್ರ ರೋಶನ್ ಅವರನ್ನು ಅನುಶ್ರೀ ಮದುವೆಯಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ಬೆಳಗ್ಗೆ 10.56ಕ್ಕೆ ಮಾಂಗಲ್ಯಧಾರಣೆಯಾಗಿದೆ. 37 ವರ್ಷದ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಯಾರು, ಯಾರು ಬಂದ್ರು?
ರೆಸಾರ್ಟ್‌ನಲ್ಲಿ ಖಾಸಗಿಯಾಗಿ ಮದುವೆ ಆಗಿದೆ. ಚಿತ್ರರಂಗದ ರಾಜ್ ಬಿ ಶೆಟ್ಟಿ, ಜೀ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಕಾವ್ಯಾ ಶಾ, ಚೈತ್ರಾ ಜೆ ಆಚಾರ್, ಶರಣ್, ಸೋನಲ್ ಮೊಂಥೆರೋ ಮುಂತಾದವರು ಮದುವೆಯಲ್ಲಿ ಭಾಗಿಯಾಗಿದ್ದು, ನವಜೋಡಿಗೆ ಶುಭ ಹಾರೈಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಫುಲ್ ಆಕ್ಟಿವ್
ಕನ್ನಡದ ಅನೇಕ ಟಿವಿ ಶೋಳಿಗೆ ನಿರೂಪಣೆ ಮಾಡಿದ್ದ ಅನುಶ್ರೀ ಅವರು ‘ಉಪ್ಪು ಹುಳಿ ಖಾರ’ ಸಿನಿಮಾದಲ್ಲಿ ಹೀರೋಯಿನ್ ಆಗಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಸಾಕಷ್ಟು ಕಾರ್ಯಕ್ರಮಗಳಿಗೆ ನಿರೂಪಣೆ ಕೂಡ ಮಾಡಿದ್ದರು. ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಅನುಶ್ರೀ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜವಾಬ್ದಾರಿ ಮುಗಿಸಿ ಮದುವೆಯಾಗ್ತಿರೋ ನಟಿ
ಚಿಕ್ಕ ವಯಸ್ಸಿನಲ್ಲಿಯೇ ತಂದೆ ಮನೆ ಬಿಟ್ಟು ಹೋದಾಗ ತಾಯಿ ಅನುಶ್ರೀ ಹಾಗೂ ಅವರ ತಮ್ಮನನ್ನು ಸಾಕಿದ್ದರು. ಬಹಳ ಬೇಗ ಮನೆಯ ಜವಾಬ್ದಾರಿ ಹೊತ್ತ ಅನುಶ್ರೀ ದುಡಿಯಲು ಆರಂಭಿಸಿದರು. ಕುಡ್ಲದ ಈ ನಿರೂಪಕಿ ತಾಯಿಗೋಸ್ಕರ ಮನೆ ಕೂಡ ಮಾಡಿದ್ದಾರೆ. ಅವರ ತಮ್ಮ ಕೂಡ ಹೋಟೆಲ್ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಮನೆಯ ಜವಾಬ್ದಾರಿಯನ್ನು ನಿಭಾಯಿಸಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
